ಅಖ್ತರ್ ದಾಖಲೆ ಉಡೀಸ್ ಮಾಡಿದ್ರಾ ಮಿಚೆಲ್ ಸ್ಟಾರ್ಕ್? ಇದರ ಸತ್ಯಾಸತ್ಯತೆ ಏನು?
ಭಾರತ-ಆಸ್ಟ್ರೇಲಿಯಾ ಏಕದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಬೌಲ್ ಮಾಡಿದ ಚೆಂಡು 176.5 ಕಿ.ಮೀ ವೇಗದಲ್ಲಿ ದಾಖಲಾಗಿದೆ. ಇದು ಶೋಯೆಬ್ ಅಖ್ತರ್ ಅವರ ವಿಶ್ವದಾಖಲೆಯನ್ನು ಮುರಿದಿದೆಯೇ ಎಂಬ ಚರ್ಚೆಗೆ ಕಾರಣವಾಗಿದೆ.
14

Image Credit : X
ಮಿಚೆಲ್ ಸ್ಟಾರ್ಕ್ ಅತಿವೇಗದ ಬೌಲಿಂಗ್ ದಾಖಲೆ!
ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡು 176.5 ಕಿ.ಮೀ ವೇಗದಲ್ಲಿ ದಾಖಲಾಗಿದ್ದು, ಇದು ಕ್ರಿಕೆಟ್ ಜಗತ್ತಿನಲ್ಲಿ ಹೊಸ ದಾಖಲೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
24
Image Credit : Getty
26 ಓವರ್‌ಗಳ ಪಂದ್ಯ
ಮಳೆಯಿಂದಾಗಿ 26 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಭಾರತ 136 ರನ್ ಗಳಿಸಿತು. ಡಕ್ವರ್ತ್ ಲೂಯಿಸ್ ನಿಯಮದಡಿ 131 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 7 ವಿಕೆಟ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
34
Image Credit : X/ Johns.
ವೇಗದಲ್ಲಿ ಅಚ್ಚರಿ ಮೂಡಿಸಿದ ಸ್ಟಾರ್ಕ್
ಈ ಪಂದ್ಯದ ಮೊದಲ ಓವರ್‌ನಲ್ಲೇ ಮಿಚೆಲ್ ಸ್ಟಾರ್ಕ್ ಎಸೆದ ಚೆಂಡಿನ ವೇಗ ಸ್ಪೀಡ್ ಗನ್‌ನಲ್ಲಿ 176.5 ಕಿ.ಮೀ ಎಂದು ದಾಖಲಾಯಿತು. ಇದು ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ತೀವ್ರ ಚರ್ಚೆಗೆ ಕಾರಣವಾಯಿತು.
44
Image Credit : Asianet News
ದಾಖಲೆ ಮುರಿಯಿತೇ?
ಶೋಯೆಬ್ ಅಖ್ತರ್ (161.3 ಕಿ.ಮೀ) ವಿಶ್ವದ ಅತಿವೇಗದ ಬೌಲರ್. ಸ್ಟಾರ್ಕ್ ಎಸೆತ ನಿಜವಾಗಿದ್ದರೆ, ಅದು 22 ವರ್ಷಗಳ ದಾಖಲೆಯನ್ನು ಮುರಿಯುತ್ತಿತ್ತು. ಆದರೆ, ಇದು ತಾಂತ್ರಿಕ ದೋಷವಿರಬಹುದೆಂದು ತಜ್ಞರು ಶಂಕಿಸಿದ್ದಾರೆ.
Latest Videos