ಗಾಯಗೊಂಡರೂ ಮೈದಾನಕ್ಕಿಳಿದು ಅಬ್ಬರಿಸಿದ ರಿಷಭ್ ಪಂತ್ ಧೈರ್ಯವನ್ನು ಕೊಂಡಾಡಿದ ಗೋಯೆಂಕಾ!
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯಗೊಂಡು ಆಡಿದ ರಿಷಭ್ ಪಂತ್ ಬಗ್ಗೆ ಲಖನೌ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೊಯೆಂಕಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಗಾಯಗೊಂಡು ಐದನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಆಡಲು ಯತ್ನಿಸಿದಾಗ ಪಂತ್‌ರ ಬಲಗಾಲಿಗೆ ಪೆಟ್ಟಾಯಿತು. ತಕ್ಷಣ ಶೂ ತೆಗೆದು ನೋಡಿದಾಗ ಕಾಲು ತೀವ್ರವಾಗಿ ಊದಿಕೊಂಡಿತ್ತು ಮತ್ತು ರಕ್ತಸ್ರಾವವಾಗುತ್ತಿತ್ತು.
"ಕಾಲು ಮುರಿತದ ನಡುವೆಯೂ ಹೋರಾಡಿ, ದಾಖಲೆ ಮುರಿದರು, ತಂಡಕ್ಕೆ ಆಸರೆಯಾದರು. ಈ ಹೋರಾಟ ಸ್ಮರಣೀಯ. ಶೀಘ್ರ ಗುಣಮುಖರಾಗಲಿ ಚಾಂಪಿಯನ್" ಎಂದು LSG ಮಾಲೀಕ ಸಂಜೀವ್ ಗೊಯೆಂಕಾ ಪಂತ್ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ.
Battled a fractured toe, broke records, and stood tall for the team.
Most runs by a keeper in a Test series in England.
Most 50+ scores by a visiting keeper.
The fight will be remembered.
Speedy recovery, champ. pic.twitter.com/ZEk3TyiC3j— Dr. Sanjiv Goenka (@DrSanjivGoenka) July 28, 2025
ಗೊಯೆಂಕಾ ಅವರ ಈ ಟ್ವೀಟ್ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಐಪಿಎಲ್‌ನಲ್ಲಿ ಪಂತ್ ಕಳಪೆ ಪ್ರದರ್ಶನ ನೀಡಿದಾಗ ಗೊಯೆಂಕಾ ಅಸಮಾಧಾನ ವ್ಯಕ್ತಪಡಿಸಿದ್ದರು. ಲಖನೌ ಸೋತಾಗ ಮೈದಾನದಲ್ಲೇ ಪಂತ್‌ರನ್ನು ಗದರಿದ್ದರು.