ಈ ಎಸ್‌ಯುವಿ ಕಾರು ಖರೀದಿಸಲು ಬಯಸಿದ್ದರೆ ಒಂದು ಬಾರಿ ಯೋಚಿಸಿ, ಕಾರಣವೇನು?
ಭಾರತದಲ್ಲಿ ಎಸ್‌ಯುವಿ ಕಾರುಗಳ ಲಿಸ್ಟ್ ದೊಡ್ಡದಿದೆ. ಖರೀದಿಗೆ ಸಾಕಷ್ಟು ಆಯ್ಕೆಗಳಿವೆ. ಆದರೆ ನೀವು ಈ ಎಸ್‌ಯುವಿ ಕಾರು ಖರೀದಿಸಲು ಪ್ಲಾನ್ ಮಾಡಿದ್ದರೆ ಕೊಂಚ ತಾಳ್ಮೆ ಇರಲಿ. ಕಾರಣವೇನು?

ಭಾರತದಲ್ಲಿ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರಿಗೆ ಭಾರಿ ಬೇಡಿಕೆ ಇದೆ. ಸರಿಸುಮಾರು 6 ಲಕ್ಷ ರೂಪಾಯಿಂದ ಆರಂಭಗೊಂಡ 15 ಲಕ್ಷ ರೂಪಾಯಿ ವರೆಗೆ ಹಲವು ಬ್ರ್ಯಾಂಡ್ ಕಾರುಗಳು ಲಭ್ಯವಿದೆ. ಕಡಿಮೆ ಬೆಲೆ, ಭಾರತದ ರಸ್ತಗೆ ಹೇಳಿ ಮಾಡಿಸಿದ ಎಸ್‌ಯುುವಿ ಕಾರುಗಳು ಭರ್ಜರಿಯಾಗಿ ಮಾರಾಟವಾಗುತ್ತಿದೆ. ಟಾಟಾ ನೆಕ್ಸಾನ್, ಮಹೀಂದ್ರ 3ಎಕ್ಸ್ಒ, ಮಾರುತಿ ಸುಜುಕಿ ಬ್ರೆಜಾ ಸೇರಿದಂತೆ ಹಲವು ಎಸ್‌ಯುವಿ ಕಾರುಗಳು ಲಭ್ಯವಿದೆ. ಈ ಪೈಕಿ ನೀವು ಹ್ಯುಂಡೈ ವೆನ್ಯೂ ಎಸ್‌ಯುವಿ ಕಾರು ಖರೀದಿಸಲು ಪ್ಲಾನ್ ಮಾಡಿದ್ದರೆ ಕೊಂಚ ತಾಳ್ಮೆ ಇರಲಿ.
ಭಾರತದಲ್ಲಿ ಸಬ್ ಕಾಂಪಾಕ್ಟ್ ಎಸ್‌ಯುವಿ ಪೈಕಿ ಹ್ಯುಂಡೈ ವೆನ್ಯೂ ಕಾರು ಭಾರಿ ಬೇಡಿಕೆಯ ಕಾರಾಗಿದೆ. ಈಗಾಗಲೇ ಲಕ್ಷಾಂತರ ಮಂದಿ ವೆನ್ಯೂ ಕಾರಿನ ಮಾಲೀಕರಾಗಿದ್ದಾರೆ. ಆದರೆ ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ವೆನ್ಯೂ ಕಾರು ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಕೊಂಚ ವೈಟ್ ಮಾಡಿ. ಕಾರಣ ಅಕ್ಟೋಬರ್ ತಿಂಗಳಲ್ಲಿ ಹ್ಯುಂಡೈ ವೆನ್ಯೂ ಅಪ್‌ಗ್ರೇಡೆಡ್ ಹಾಗೂ ಹೊಸ ಜನರೇಶನ್ ಕಾರು ಬಿಡುಗಡೆಯಾಗುತ್ತಿದೆ.
ಅಕ್ಟೋಬರ್ 24, 2025ರಂದುು ಹ್ಯುಂಡೈ ವೆನ್ಯೂ ಹೊಸ ಅವತಾರದಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ಫೀಚರ್ ಮಾತ್ರವಲ್ಲ, ವಿನ್ಯಾಸದಲ್ಲೂ ಮಹತ್ತರ ಬದಲಾವಣೆ ಇರಲಿದೆ. ಹ್ಯುಂಡೈ ಕ್ರೆಟಾ ರೀತಿಯ ಹೆಡ್‌ಲ್ಯಾಂಪ್ಸ್ ಹಾಗೂ ಗ್ರಿಲ್ ಜೊತೆಗೆ ಅತ್ಯಾಕರ್ಷಕ ವಿನ್ಯಾಸದ ಮೂಲಕ ನೂತನ ಹ್ಯುಂಡೈ ವೆನ್ಯೂ ಬಿಡುಗಡೆಯಾಗುತ್ತಿದೆ.
ಹೊಸ ವಿನ್ಯಾಸದ ಅಲೊಯ್ ವ್ಹೀಲ್, ನೂತನ ಟೈಲ್ ಲ್ಯಾಂಪ್, ವಿನೂತನ ಬಂಪರ್, ಉತ್ತಮ ರೋಡ್ ಪ್ರೆಸೆನ್ಸ್ ಮೂಲಕ ಹೊಸ ವೆನ್ಯೂ ಕಾರು ಸಬ್ ಕಾಂಪಾಕ್ಟ್ ಎಸ್‌ಯುವಿ ಪೈಕಿ ಹೊಸ ಸಂಚಲನ ಸೃಷ್ಟಿಸಲಿದೆ. ವಿಶೇಷ ಅಂದರೆ ಹೊಸ ವೆನ್ಯೂ ಗಾತ್ರದಲ್ಲೂ ದೊಡ್ಡದಾಗಲಿದೆ. ಈ ಮೂಲಕ ಉತ್ತಮ ಸ್ಥಳವಕಾಶ ಸೇರಿದಂತೆ ಕೈಗೆಟುಕುವ ದರದಲ್ಲಿ ಉತ್ತಮ ಎಸ್‌ಯುವಿ ಕೈಸೇರಲಿದೆ.
ಲೆವೆಲ್ 2 ಅಡಾಸ್ ಫೀಚರ್ ಈ ಕಾರಿನ ವಿಶೇಷತೆಯಾಗಿದೆ. ಪನೋರಮಿಕ್ ಸನ್‌ರೂಫ್, ಪವರ್ಡ್ ಹಾಗೂ ವೆಂಟಿಲೇಟೆಡ್ ಸೀಟು, ಸ್ಲೈಡಿಂಗ್ ರೇರ್ ಸೀಟ್, ಕರ್ವ್ಡ್ ಕನೆಕ್ಟೆಡ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಕ್ಲಸ್ಟರ್ ಸೇರಿದಂತೆ ಅತ್ಯಾಧುನಿಕ ಎಲ್ಲಾ ಫೀಚರ್ಸ್ ಈ ಕಾರಿನಲ್ಲಿ ಇರಲಿದೆ. ಹೊಸ ಫೀಚರ್ಸ್ ವೆನ್ಯೂ ಕಾರಿನ ಪ್ರಯಾಣ ಹಾಗೂ ಡ್ರೈವಿಂಗ್ ಮತ್ತಷ್ಟು ಆರಾಮದಾಯಕ ಮಾಡಲಿದೆ.
ಎಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಸದ್ಯ ವೆನ್ಯೂ ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್, 82bhp ಪವರ್ ಹಾಗೂ 114Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆಯೂ ಲಭ್ಯವಿದೆ. ಈ ಕಾರು 118bhp ಪವರ್ ಹಾಗೂ 172Nm ಪೀಕ್ ಟಾರ್ಕ್ ಸಾಮರ್ಥ್ಯ ಹೊಂದಿದೆ. ಡೀಸೆಲ್ ಆಯ್ಕೆಯೂ ಲಭ್ಯವಿದೆ. 1.5 ಲೀಟರ್ ಡೀಸೆಲ್ ಎಂಜಿನ್ 114bhp ಪವರ್ ಹಾಗೂ 250Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಮಾನ್ಯುಯೆಲ್ ಹಾಗೂ DCT ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ. ಇನ್ನು ಈ ಕಾರಿನ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಹ್ಯುಂಡೈ ವೆನ್ಯೂ ಕಾರಿನ ಬೆಲೆ 7.94 ಲಕ್ಷ ರೂಪಾಯಿ ಆರಂಭಿಕ ಬೆಲೆಯಿಂದ 13.62 ಲಕ್ಷ ರೂಪಾಯಿ ವರೆಗಿದೆ (ಎಕ್ಸ್ ಶೋ ರೂಂ).