ಕಿಯಾ ಕಾರುಗಳಿಗೆ 2.25 ಲಕ್ಷ ರೂ ಡಿಸ್ಕೌಂಟ್, ಜಿಎಸ್‌ಟಿಗೂ ಕಡಿತಕ್ಕೂ ಮೊದಲೇ ಹಬ್ಬದ ಆಫರ್
ಕಿಯಾ ಕಾರುಗಳಿಗೆ 2.25 ಲಕ್ಷ ರೂ ಡಿಸ್ಕೌಂಟ್, ಜಿಎಸ್‌ಟಿಗೂ ಕಡಿತಕ್ಕೂ ಮೊದಲೇ ಹಬ್ಬದ ಆಫರ್ ಘೋಷಣೆಯಾಗಿದೆ. ಸೆ.22ರಿಂದ ಜಿಎಸ್‌ಟಿ ಕಡಿತಗೊಳ್ಳುವ ಮೂಲಕ ಕಾರುಗಳ ಬೆಲೆ ಕಡಿತವಾಗಲಿದೆ. ಆದರೆ ಕಿಯಾ ಇದೀಗ ಭರ್ಜರಿ ಆಫರ್ ನೀಡಿದೆ.

2.25 ಲಕ್ಷ ರೂಪಾಯಿ ಘೋಷಣೆ
ಕಿಯಾ ಇಂಡಿಯಾ ಇದೀಗ ಭರ್ಜರಿ ಡಿಸ್ಕೌಂಟ್ ಆಫರ್ ಘೋಷಿಸಿದೆ. ಸೆಪ್ಟೆಂಬರ್ 22ರಿಂದ ಕೇಂದ್ರ ಸರ್ಕಾರದ ಜಿಎಸ್‌ಟಿ ಕಡಿತ ಜಾರಿಗೊಳ್ಳುತ್ತಿದೆ. ಹೀಗಾಗಿ ಕಾರುಗಳ ಬೆಲೆ ಭಾರಿ ಇಳಿಕೆಯಾಗಲಿದೆ. ಆದರೆ ಈ ಕಡಿತಕ್ಕೂ ಮೊದಲೇ ಕಿಯಾ ಕಾರು ಇದೀಗ ಗರಿಷ್ಠ 2.25 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಿಸಿದೆ. ಇದು ಲಿಮಿಟೆಡ್ ಪಿರಿಯೇಡ್ ಆಫರ್. ದೇಶದ ಎಲ್ಲಾ ಕಿಯಾ ಡೀಲರ್ ಬಳಿ ಈ ಆಫರ್ ಲಭ್ಯವಿದೆ.
ಕಿಯಾ ಹಬ್ಬದ ಆಫರ್
ಕಿಯಾ ಸೆಲ್ಟೋಸ್, ಕಿಯಾ ಕ್ಯಾರೆನ್ಸ್, ಕ್ಲಾವಿಸ್ ಕಾರಗಳ ಮೇಲೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದು ಜಿಎಸ್‌ಟಿ ಕಡಿತದ ಘೋಷಣೆಯಲ್ಲ. ಇದು ಹಬ್ಬದ ಆಫರ್. ಹಬ್ಬದ ಆಫರ್ ಪ್ರಯುಕ್ತ ಕಿಯಾ ಕಾರು ಖರೀದಿಸುವ ಗ್ರಾಗಕರು 1.67 ಲಕ್ಷ ರೂಪಾಯಿ ಡಿಸ್ಕೌಂಟ್ ಪ್ರಯೋಜನ ಹಾಗೂ 58,000 ರೂಪಾಯಿ ಪೂರ್ವ ಜಿಎಸ್‌ಟಿ ಕಡಿತ ಪ್ರಯೋಜನ ಸಿಗಲಿದೆ.
ಕರ್ನಾಟಕದಲ್ಲಿ ಕಿಯಾ ಡಿಸ್ಕೌಂಟ್ ಆಫರ್
ಆಯಾ ರಾಜ್ಯದ ತೆರಿಗೆಗೆ ಅನುಸಾರವಾಗಿ ಆಫರ್ ಬೆಲೆಯಲ್ಲಿ ಕೊಂಚ ವ್ಯತ್ಯಸವಾಗಲಿದೆ. ಕರ್ನಾಟಕದಲ್ಲಿ ಕಿಯಾ ಸೆಲ್ಟೋಸ್ ಕಾರಿಗೆ ಗರಿಷ್ಠ 2,10,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ. ಇನ್ನು ಕಿಯಾ ಕ್ಯಾರೆನ್ಸ್ ಕಾರಿಗೆ 1,10,500 ರೂಪಾಯಿ ಹಾಗೂ ಕಿಯಾ ಕ್ಲಾವಿಸ್ ಕಾರಿಗೆ 88,650 ರೂಪಾಯಿ ಡಿಸ್ಕೌಂಟ್ ಸಿಗಲಿದೆ.
ಸೆಪ್ಟೆಂಬರ್ 22ರ ವರೆಗೆ ಆಫರ್
ಇದು ಹಬ್ಬದ ಆಫರ್. ಹೀಗಾಗಿ ಸೆಪ್ಟೆಂಬರ್ 22ರ ವರೆಗೆ ಮಾತ್ರ ಇರಲಿದೆ. ಈ ದಿನಾಂಕದೊಳಗೆ ಬುಕ್ ಮಾಡುವ ಗ್ರಾಹಕರು 2.25 ಲಕ್ಷ ರೂಪಾಯಿ ಆಫರ್ ಪಡೆಯುತ್ತಾರೆ. ಇನ್ನು ಸೆಪ್ಟೆಂಬರ್ 22ರ ಬಳಿಕ ಕಿಯಾ ಕಾರು ಬುಕ್ ಮಾಡುವ ಗ್ರಾಹಕರು ಜಿಎಸ್‌ಟಿ ಕಡಿತದ ಆಫರ್ ಪಡೆಯಲಿದ್ದಾರೆ. ಈ ಮೂಲಕ ಕೈಗೆಟುಕುವ ದರದಲ್ಲಿ ಕಿಯಾ ಕಾರುಗಳನ್ನು ಖರೀದಿಸಲು ಸಾಧ್ಯವಿದೆ.
ಖುಷಿಯಿಂದ ಕಾರು ಖರೀದಿಸಿ
ಡಿಸ್ಕೌಂಟ್ ಆಫರ್ ಕುರಿತು ಕಿಯಾ ಇಂಡಿಯಾ ಸಿಎಸ್ಒ ಜೂನ್ಸು ಸೂ ಮಾತನಾಡಿದ್ದಾರೆ. ಹಬ್ಬ ಖಷಿಯ ವಿಚಾರ. ಹಬ್ಬದ ವೇಳೆ ಭಾರತದಲ್ಲಿ ಹೊಸ ವಸ್ತು ಖರೀದಿ, ಕಾರು ಖರೀದಿ ಸಾಮಾನ್ಯ. ಹೀಗಾಗಿ ಗ್ರಾಹಕರು ಖುಷಿಯಿಂದ ಕಾರು ಖರೀದಿಸಲು ಡಿಸ್ಕೌಂಟ್ ಆಫರ್ ನೀಡಿದ್ದೇವೆ. ನಾವು ಜಿಎಸ್‌ಟಿ ಕಡಿತಕ್ಕೂ ಮೊದಲೇ ಆಫರ್ ನೀಡಿದ್ದೇವೆ. ಈ ಮೂಲಕ ಗ್ರಾಹಕರು ಸುಲಭವಾಗಿ ಕಾರು ಖರೀದಿಸಬಹುದು ಎಂದಿದ್ದಾರೆ.