ದಶಕದ ನೆನಪು: ಆರ್ಥಿಕತೆ, ಬಜೆಟ್, ಚಿನ್ನ, ಬೆಳ್ಳಿ.. ಆಗ ಎಷ್ಟಿತ್ತು? ಈಗ ಎಷ್ಟಾಯ್ತು?

First Published 1, Jan 2020, 4:34 PM

ವ್ಯಕ್ತಿ, ರಾಜ್ಯ, ದೇಶ, ವಿಶ್ವದ ಪಾಲಿಗೆ ಒಂದು ದಶಕ ಸಣ್ಣ ಮೈಲುಗಲ್ಲಿನ ಅವಧಿ. 10 ವರ್ಷಗಳ ಈ ಅವಧಿ ನಮಗೆ ಅರಿವಿಲ್ಲದಂತೆಯೇ ನಾನಾ ರೀತಿಯ ಬದಲಾವಣೆಗೆ ಸಾಕ್ಷಿಯಾಗಿ ಹೋಗಿರುತ್ತದೆ. ನಮಗೆ ಅರಿವಿಲ್ಲದೇ ಸಾಗಿಹೋದ ಒಂದು ದಶಕದ ಕುರಿತು ಹಿಂತಿರುಗಿ ನೋಡಿದಾಗ ಹುಟ್ಟುವುದು ಅಚ್ಚರಿ, ಆತಂಕ, ಸಂಭ್ರಮ. 2020ಕ್ಕೆ ನಾವು ಕಾಲಿಡುತ್ತಿರುವ ಸಂದರ್ಭದಲ್ಲಿ ಕಳೆದೊಂದು ದಶಕದಲ್ಲಿ ಯಾವುದು ಎಷ್ಟಿತ್ತು, ಎಷ್ಟಾಯ್ತು ಎಂಬುದರ ಚಿತ್ರಣ ಇಲ್ಲಿದೆ.

ಸೆನ್ಸೆಕ್ಸ್‌: ದೇಶದ ಆರ್ಥಿಕತೆಯ ಕಿರುನೋಟ ತೋರಿಸಬಲ್ಲ ಸೆನ್ಸೆಕ್ಸ್, ಹೂಡಿಕೆದಾರರ ಮನಸ್ಥಿತಿಯ ಬಿಂಬವೂ ಹೌದು. ಒಂದೇ ದಿನದಲ್ಲಿ ಹೂಡಿಕೆದಾರನನ್ನು ಪಾತಾಳದಿಂದ ಗಗನಕ್ಕೆ, ಗಗನದಿಂದ ಪಾತಾಳಕ್ಕೆ ಕೊಂಡೊಯಬಲ್ಲ ಸೆನ್ಸೆಕ್ಸ್ ಒಟ್ಟಾರೆ ಕಳೆದ 10 ವರ್ಷಗಳಲ್ಲಿ 20,500 ಅಂಕಗಳ ಏರಿಕೆ ಕಂಡಿದೆ. ಅಂದರೆ ಸೆನ್ಸೆಕ್ಸ್‌ನಲ್ಲಿ ಇರುವ ಷೇರುಗಳಲ್ಲಿ ಹೂಡಿಕೆ ಮಾಡಿದ್ದವರ ಹಣ 10 ವರ್ಷಗಳಲ್ಲಿ ದ್ವಿಗುಣಗೊಂಡಿದೆ.

ಭಾರತದ ಜನಸಂಖ್ಯೆ: ವಿಸ್ತೀರ್ಣದಲ್ಲಿ ವಿಶ್ವದಲ್ಲಿ 7ನೇ ಸ್ಥಾನದಲ್ಲಿರುವ ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. 2010ರಲ್ಲಿ ಭಾರತ 123 ಕೋಟಿ ಜನಸಂಖ್ಯೆಯೊಂದಿಗೆ 2ನೇ ಸ್ಥಾನ ದಲ್ಲಿತ್ತು. 2019ರಲ್ಲಿ ಭಾರತ ದ ಜನಸಂಖ್ಯೆ 137 ಕೋಟಿ ಇದೆ ಎಂದು ಅಂದಾಜಿಸಲಾಗಿದೆ. ಅಂದರೆ 10 ವರ್ಷ ದಲ್ಲಿ 14 ಕೋಟಿ ಏರಿಕೆ. ಮೊದಲ ಸ್ಥಾನ ದಲ್ಲಿರುವ ಚೀನಾ ಜನಸಂಖ್ಯೆ 143 ಕೋಟಿ. 2010ರಲ್ಲಿ ಚೀನಾ ಜನಸಂಖ್ಯೆ 133 ಕೋಟಿ ಇತ್ತು. ನಿಯಂತ್ರಣ ಕ್ರಮಗಳ ಪರಿಣಾಮ ಅಲ್ಲಿ ಜನಸಂಖ್ಯೆಯಲ್ಲಿ ಕೇವಲ 10 ಕೋಟಿ ಏರಿಕೆಯಾಗಿದೆ.

ಕರ್ನಾಟಕ ಬಜೆಟ್: ವಿಸ್ತೀರ್ಣದಲ್ಲಿ ಕರ್ನಾಟಕವು ದೇಶದ 6ನೇ ದೊಡ್ಡ, ಜನಸಂಖ್ಯೆಯಲ್ಲಿ ೮ನೇ ದೊಡ್ಡ ಸ್ಥಾನದಲ್ಲಿದೆ. 2011ನೇ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6.1 ಕೋಟಿ. 2010ರಲ್ಲಿ ಬಿ.ಎ. ಯಡಿಯೂರಪ್ಪ ಮಂಡಿಸಿದ್ದ ಬಜೆಟ್ ಗಾತ್ರ 70063 ಕೋಟಿ ರು. ಇತ್ತು. ಅದು 9708 ಕೋಟಿ ಕೊರತೆ ಬಜೆಟ್ ಆಗಿತ್ತು. 2019ರಲ್ಲಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನ ಗಾತ್ರ 2.18 ಲಕ್ಷ ಕೋಟಿ ರು. ಇತ್ತು. ಕೊರತೆ ಪ್ರಮಾಣ 3415 ಕೋಟಿ ರು. ಇತ್ತು

ಭಾರತದಲ್ಲಿ ಎಟಿಎಂಗಳ ಸಂಖ್ಯೆ: ಬ್ಯಾಂಕಿಂಗ್ ಸೇವೆಗಳಿಗೆ ಹೊಸ ಆಯಾಮ ನೀಡಿದ್ದು ಎಟಿಎಂಗಳು. ಹಣ ಹಿಂಪಡೆಯಲು ಬ್ಯಾಂಕ್‌ಗಳಲ್ಲಿ ಕಾಯುವ ವ್ಯವಧಾನ ತಪ್ಪಿಕ್ದ ಎಟಿಎಂಗಳು, ಜನರಿಗೆ ಹೊಸ ಸೇವೆ ಕಲ್ಪಿಸಿದವು. 2010ರಲ್ಲಿ ಭಾರತ ದಲ್ಲಿ 90000 ಎಟಿಎಂಗಳಿದ್ದರೆ 2019ರಲ್ಲಿ ಇವುಗಳ ಸಂಖ್ಯೆ 2.21 ಲಕ್ಷಕ್ಕೆ ತಲುಪಿತು

ಕರ್ನಾಟಕ ಜಿಲ್ಲೆಗಳು: ಹಿಂದಿನ ದಶಕದಲ್ಲಿ ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳು ರಚನೆಯಾದವು. ಈ ದಶಕದಲ್ಲಿ ಯಾದಗಿರಿ ಸೃಷ್ಟಿಯಾಯಿತು. ಇದರಿಂದಾಗಿ ರಾಜ್ಯದ ಜಿಲ್ಲೆಗಳ ಸಂಖ್ಯೆ 30ಕ್ಕೇರಿಕೆಯಾಯಿತು

ತಾಲೂಕು: ಹಲವು ದಶಕಗಳಿಂದ ಹೊಸ ತಾಲೂಕುಗಳಿಗೆ ಇಟ್ಟ ಬೇಡಿಕೆ ಕಳೆದ ದಶಕದಲ್ಲಿ ಈಡೇರಿತು. 2010ರಲ್ಲಿ ಕರ್ನಾಟಕ ದಲ್ಲಿ 176 ತಾಲೂಕುಗಳಿದ್ದರೆ, 2019ರಲ್ಲಿ ತಾಲೂಕುಗಳ ಸಂಖ್ಯೆ 283ಕ್ಕೆ ಹೆಚ್ಚಳವಾಗಿದೆ.

ಪೆಟ್ರೋಲ್: 2010ರವರೆಗೂ ಪೆಟ್ರೋಲ್ ದರವನ್ನು ಸರ್ಕಾರ ನಿಯಂತ್ರಿಸುತ್ತಿತ್ತು. ಆಗ ಲೀಟರ್ ಪೆಟ್ರೋಲ್‌ಗೆ 56 ರು. ಇತ್ತು. ನಂತರದ 10 ವರ್ಷಗಳಲ್ಲಿ ಬೆಲೆಯಲ್ಲಿ ಭಾರೀ ಏರಿಳಿಕೆಯಾಗುತ್ತಲೇ ಇದೆ. 2010ಕ್ಕೂ 2019ಕ್ಕೂ ಪ್ರತಿ ಲೀಟರ್ ಪೆಟ್ರೊಲ್ ಬೆಲೆಯಲ್ಲಿ 21 ರು. ಏರಿಕೆಯಾಗಿದೆ.

ಡೀಸೆಲ್: ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳ ಪ್ರಮುಖ ಇಂಧನವಾದ ಡೀಸೆಲ್ ಅನ್ನು 2014ರವರೆಗೂ ದರ ನಿಯಂತ್ರಣಕ್ಕೆ ಒಳಪಡಿಸಲಾಗಿತ್ತು. ದರ ನಿಯಂತ್ರಣ ತೆಗೆದ ಬಳಿಕ ಡೀಸೆಲ್ ದರ ಏರುಗತಿಯಲ್ಲಿದೆ. 10 ವರ್ಷಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ ಭರ್ಜರಿ 31 ರು. ಹೆಚ್ಚಳವಾಗಿದೆ.

ಡಾಲರ್ ವಿರುದ್ಧ ರುಪಾಯಿ ಮೌಲ್ಯ: ದೇಶದ ಅರ್ಥ ವ್ಯವಸ್ಥೆ ಮತ್ತು ಆರ್ಥಿಕ ನೀತಿಗಳ ಬಗ್ಗೆ ದೈನಂದಿನ ಬೆಳಕು ಚೆಲ್ಲುವ ಅಂಶಗಳ ಪೈಕಿ ಆಯಾ ದೇಶದ ಕರೆನ್ಸಿ ಮೌಲ್ಯವೂ ಒಂದು. ಸಾಮಾನ್ಯವಾಗಿ ವಿಶ್ವದಲ್ಲೇ ಪ್ರಬಲ ಮತ್ತು ಸ್ಥಿರ ಎನ್ನಲಾದ ಡಾಲರ್ ಜೊತೆ ವಿವಿಧ ದೇಶಗಳ ಕರೆನ್ಸಿ ಮೌಲ್ಯವನ್ನು ಹೋಲಿಸಲಾಗುತ್ತದೆ. 2010ರಲ್ಲಿ ಒಂದು ಡಾಲರ್ ಎದುರು ರುಪಾಯಿ ಮೌಲ್ಯ 45 ರು. ಇದ್ದರೆ, 2019ರಲ್ಲಿ ಅದು 71ಕ್ಕೆ ತಲುಪಿದೆ. ಅಂದರೆ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದಿದೆ ಎಂದರ್ಥ

ವಿಶ್ವದ ಅತಿ ದೊಡ್ಡ ಆರ್ಥಿಕತೆ (ಭಾರತ): ವಿಶ್ವದ ಹೊಸ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತಿರುವ ಭಾರತ ಕಳೆದೊಂದು ದಶಕದಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. 2010ರಲ್ಲಿ ಭಾರತ ದ ವಿಶ್ವದ ಅತಿ ದೊಡ್ಡ ಆರ್ಥಿಕತೆಗಳ ಪೈಕಿ 9ನೇ (ಅಮೆರಿಕ, ಚೀನಾ, ಜಪಾನ್, ಜರ್ಮನಿ, ಫ್ರಾನ್ಸ್, ಬ್ರಿಟನ್, ಬ್ರೆಜಿಲ್ ಇಟಲಿ ನಂತರದ) ಸ್ಥಾನದಲ್ಲಿತ್ತು. 2019ರಲ್ಲಿ ಭಾರತ (ಅಮೆರಿಕ- 20.40 ಲಕ್ಷ ಕೋಟಿ ಡಾಲರ್ ,ಚೀನಾ- 13.41 ಲಕ್ಷ ಕೋಟಿ ಡಾಲರ್, ಜಪಾನ್- 4.97 ಲಕ್ಷ ಕೋಟಿ ಡಾಲರ್, ಜರ್ಮನಿ- 4 ಲಕ್ಷ ಕೋಟಿ ಡಾಲರ್, ಫ್ರಾನ್ಸ್- 2.78 ಲಕ್ಷ ಕೋಟಿ ಡಾಲರ್) 6ನೇ (2.72 ಲಕ್ಷ ಕೋಟಿ ಡಾಲರ್) ಸ್ಥಾನಕ್ಕೇರಿದೆ.

ಪ್ರಯಾಣಿಕ ವಾಹನ ಮಾರಾಟ: ಪ್ರಯಾಣಿಕ ವಾಹನಗಳು ಜನಸಾಮಾನ್ಯರ ನಿತ್ಯ ಜೀವನ ದ ಅಂಗ. ಜೊತೆಗೆ ಆರ್ಥಿಕತೆ ಪ್ರಗತಿಯ ಸೂಚ್ಯಂಕವೂ ಹೌದು. 2010ರಲ್ಲಿ ಭಾರತ ದಲ್ಲಿ 25 ಲಕ್ಷ ವಾಹನಗಳು ಮಾರಾಟವಾಗಿದ್ದರೆ, 2019ರಲ್ಲಿ ಆ ಪ್ರಮಾಣ 34 ಲಕ್ಷಕ್ಕೇರಿದೆ

ಚಿನ್ನ: ಆಭರಣ ಮಾಡಲು ಬೇಕಾದ ಹಾಗೂ ಹೂಡಿಕೆಯ ವಿಧಾನವಾಗಿರುವ ಚಿನ್ನ ಹೊಳಪು ಕಳೆದುಕೊಂಡಿದ್ದು ಕಡಿಮೆ. ಆಗಾಗ್ಗೆ ಬೆಲೆಯಲ್ಲಿ ಏರಿಳಿಕೆಯಾದರೂ, ಚಿನ್ನದ ಬೆಲೆ ಖರೀದಿಸಿದ್ದ ದರಕ್ಕಿಂತ ಕಡಿಮೆಯಾಗಿದ್ದಿಲ್ಲ. ಕಳೆದ 10 ವರ್ಷಗಳಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 24500 ರು. ಹೆಚ್ಚಳವಾಗಿದೆ.

ಭಾರತದಲ್ಲಿ ಮೊಬೈಲ್ ಬಳಕೆ: ಭಾರತ ದಲ್ಲಿ ಮೊಬೈಲ್ ಕ್ರಾಂತಿ ಆರಂಭವಾಗಿದ್ದು 1995ರಲ್ಲಿ. 1995ರ ಜುಲೈ 31ರಂದು ಬಂಗಾಳ ಸಿಎಂ ಜ್ಯೋತಿ ಬಸು ಅವರು ಕೇಂದ್ರ ಟೆಲಿಕಾಂ ಖಾತೆ ಸಚಿವ ಸುಖರಾಂ ಅವರಿಗೆ ಕರೆ ಮಾಡುವ ಮೂಲಕ ದೇಶದ ಮೊದಲ ಮೊಬೈಲ್ ಕರೆದಾರ ಎನ್ನಿಸಿಕೊಂಡಿದ್ದರು. ಈ ಸೌಲಭ್ಯ ಒದಗಿಸಿದ್ದು ಮೋದಿ ಟೆಲೆಸ್ಟ್ರಾ ಕಂಪನಿ. ಆದರೆ ಸ್ಮಾರ್ಟ್.ಫೋನ್‌ಗಳ ಆಗಮನ ಮತ್ತು ಕರೆ ದರಗಳು ಕಡಿಮೆಯಾದ ಬಳಿಕ ಮೊಬೈಲ್ ದೇಶದಲ್ಲಿ ಕ್ರಾಂತಿಯನ್ನೇ ಮಾಡಿತು. 2010ರಲ್ಲಿ ಭಾರತ ದಲ್ಲಿ 35 ಕೋಟಿ ಮೊಬೈಲ್ ಬಳಕೆದಾರರಿದ್ದರೆ 2019ರಲ್ಲಿ ಆ ಸಂಖ್ಯೆ 117 ಕೋಟಿ ತಲುಪಿದೆ

ಕೇಂದ್ರ ಬಜೆಟ್: ವಿಸ್ತೀರ್ಣದಲ್ಲಿ ವಿಶ್ವದಲ್ಲಿ 7ನೇ ಅತಿ ದೊಡ್ಡ, ಜನಸಂಖ್ಯೆಯಲ್ಲಿ ವಿಶ್ವದ 2ನೇ ಅತಿ ದೊಡ್ಡ ದೇಶವಾದ ಭಾರತದ ಹಾಲಿ ಜನಸಂಖ್ಯೆ 137 ಕೋಟಿ. 2010ರಲ್ಲಿ ಭಾರತದ ಬಜೆಟ್ ಅನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಡಿಸಿದ್ದರು. ಅದರ ಗಾತ್ರ 11.8 ಲಕ್ಷ ಕೋಟಿ ರು. ಇತ್ತು. 10 ವರ್ಷಗಳ ಬಳಿಕ 2019ರಲ್ಲಿ ಅದು 21.47 ಲಕ್ಷ ಕೋಟಿ ರು.ಗೆ ತಲುಪಿದೆ.

ರಾಜ್ಯಗಳು: ಕಳೆದ 10 ವರ್ಷಗಳಲ್ಲಿ ರಾಜ್ಯಗಳ ಒಟ್ಟಾರೆ ಸಂಖ್ಯೆಯಲ್ಲಿ ಬದಲಾವಣೆ ಆಗಿಲ್ಲ. ಆದರೆ ಒಂದು ರಾಜ್ಯ ತನ್ನ ಅಸ್ತಿತ್ವ ಕಳೆದುಕೊಂಡಿದ್ದರೆ, ಮತ್ತೊಂದು ಹೊಸದಾಗಿ ಅಸ್ತಿತ್ವಕ್ಕೆ ಬಂದಿದೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನ ಕಳೆದುಕೊಂಡರೆ, ತೆಲಂಗಾಣ ಹೊಸ ರಾಜ್ಯವಾಗಿ ಉದಯವಾಯಿತು. ಹೀಗಾಗಿ ಒಟ್ಟಾರೆ ಸಂಖ್ಯೆಯಲ್ಲಿ ಬದಲಾವಣೆ ಆಗಿಲ್ಲ

KSRTC ದರದ ಕಥೆ: ಬೆಂಗಳೂರು- ಬೆಳಗಾವಿ| ಕಳೆದ 10 ವರ್ಷಗಳಲ್ಲಿ KSRTC ಟಿಕೆಟ್ ದರದಲ್ಲಿ ಭಾರೀ ಏರಿಕೆ ಕಾಣಬಹುದು. 2010ರಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ದರ 93 ರು. ಇದ್ದರೆ, ಅದೀಗ 136 ರು. ತಲುಪಿದೆ.

ಬೆಂಗಳೂರಿನ ಅವೆನ್ಯೂ ರಸ್ತೆಯ ಕಾಮತ್ ಹೋಟೆಲ್‌ನಲ್ಲಿ 10 ವರ್ಷಗಳ ಹಿಂದಿನ ದರಕ್ಕೂ ಈಗಿನ ದರಕ್ಕೂ ಆಗಿರುವ ಬದಲಾವಣೆ.

ವಿಶ್ವದಲ್ಲಿ ಇಂಟರ್ನೆಟ್ ಬಳಕೆದಾರರು: ಮಾಹಿತಿ ತಂತ್ರಜ್ಞಾನ ಬೆಳೆದಂತೆ ಅದನ್ನು ಇಡೀ ವಿಶ್ವಕ್ಕೆ ಹಬ್ಬಿಸಿದ್ದು ಅಂತರ್ಜಾಲ. ಜ್ಞಾನ ಹಂಚಿಕೆಯ ತಾಣವಾದ ಇಂಟರ್ನೆಟ್ ಆರಂಭದ ವರ್ಷಗಳಲ್ಲಿ ದುಬಾರಿಯಾಗಿದ್ದ ಕಾರಣ ಮತ್ತು ಸಂಪರ್ಕ ಸುಲಭವಾಗಿರದ ಕಾರಣ ಅಷ್ಟೊಂದು ಜನರನ್ನು ತಲುಪಿರಲಿಲ್ಲ. ಆದರೆ 2ಜಿ, 3ಜಿ, 4ಜಿ ತಂತ್ರಜ್ಞಾನಗಳು ಇಂಟರ್ನೆಟ್ ಅನ್ನು ನಿತ್ಯಜೀವನದ ಅವಿಭಾಜ್ಯ ಅಂಗ ಮಾಡಿವೆ. 2010ರಲ್ಲಿ ವಿಶ್ವ ದಲ್ಲಿ 200 ಕೋಟಿ ಅಂತರ್ಜಾಲ ಬಳಕೆದಾರರಿದ್ದರೆ ಪ್ರಸಕ್ತ 440 ಕೋಟಿ ಜನ ಬಳಕೆ ಮಾಡುತ್ತಿದ್ದಾರೆ.

ಮೊಬೈಲ್ ಕರೆಗಳು: 1997ರಲ್ಲಿ ಪ್ರತಿ ನಿಮಿಷದ ಮೊಬೈಲ್ ಕರೆಗೆ ಭರ್ಜರಿ 14 ರುಪಾಯಿ ಪಾವತಿಸಬೇಕಿತ್ತು. ನಂತರದ ವರ್ಷಗಳಲ್ಲಿ ಟೆಲಿಕಾಂ ವಲಯದಲ್ಲಿ ಕಂಡುಬಂದ ಸುಧಾರಣೆಗಳು ದರ ಇಳಿಕೆಯಲ್ಲಿ ಕ್ರಾಂತಿಯನ್ನೇ ಮಾಡಿವೆ. 2010ರಲ್ಲಿ ಪ್ರತಿ ನಿಮಿಷಕ್ಕೆ 20 ರಿಂದ 30 ಪೈಸೆ ಇದ್ದ ಕರೆ ದರಗಳು, 2016ರ ಬಳಿಕ ಉಚಿತವಾದವು. ಈಗಲೂ ಕೇವಲ 50 ಪೈಸೆ ಆಸುಪಾಸಿನಲ್ಲಿವೆ. ಇನ್ನು ಇಂಟರ್ನೆಟ್ ಆಧರಿತ ಮೊಬೈಲ್ ಕಂಪನಿಗಳಂತೂ ಕೇವಲ ಡಾಟಾಕ್ಕೆ ಹಣ ಪಡೆದು, ಕರೆ ಸೌಲಭ್ಯವನ್ನು ಪೂರ್ಣ ಉಚಿತವಾಗಿಸಿವೆ

ಬೆಳ್ಳಿ: ಆಭರಣ ತಯಾರಿಕೆಯಲ್ಲಿ ಚಿನ್ನ ದ ಬಳಿಕ ದ ಸ್ಥಾನ ಬೆಳ್ಳಿಯದ್ದು. ಚಿನ್ನದಂತೆ ಬೆಳ್ಳಿ ಬೆಲೆ ಕೂಡಾ ಸತತ ಏರುಗತಿಯಲ್ಲೇ ಇದೆ. ಕಳೆದ 10 ವರ್ಷಗಳಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ ಸುಮಾರು 21000 ರು. ಏರಿಕೆ ಗಮನಿಸಬಹುದು.

loader