5 ಲಕ್ಷ ರಿಲಯನ್ಸ್ ಸಿಬ್ಬಂದಿ ಕೊರೋನಾದಿಂದ ಸೇಫ್: ಅಂಬಾನಿ ಮಾಡಿದ ಪ್ಲಾನ್ ಇದು
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೊರೋನಾ ವೈರಸ್ ಪರಿಣಾಮ ಕೆಟದ್ಟದಾಗಿ ಬೀರಿದೆ, ಇದರೊಂದಿಗೆ ಕಚ್ಛಾತೈಲ ಬೆಲೆಯೂ ಭಾರೀ ಇಳಿಕೆಯಾ್ಯ್ಗಾಿದೆ. ಕಳೆದ ಮೂರೂವರೆ ತಿಂಗಳಲ್ಲಿ ಕಂಪನಿಗೆ 4.4 ಲಕ್ಷ ಕೋಟಿ ರೂ. ನಷ್ಟ ಎದುರಾಗಿದೆ. ಆದರೆ ಕಳೆದ ವರ್ಷ ನವೆಂಬರ್ ನಲ್ಲಿ ಕಂಪನಿ ಮಾರುಕಟ್ಟೆ ವ್ಯವಹಾರ 10 ಲಕ್ಷ ಕೋಟಿ ರೂ. ದಾಟಿತ್ತು. ಇದರೊಂದಿಗೆ ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವೆ ತೈಲ ಬೆಲೆ ಸಮರ ಆರಂಭವಾಗಿದ್ದು, ಇದಾದ ಕೇವಲ ಒಂದು ವಾರದಲ್ಲಿ ಬ್ರೆಂಟ್ ಹಾಗೂ WTI ಕಚ್ಛಾತೈಲ ಬೆಲೆ ಸರಿಸುಮಾರು ಶೇ. 35ರಷ್ಟು ಕುಸಿತ ಕಂಡಿದೆ.
ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮುಕೇಶ್ ಅಂಬಾನಿ ಸರಿಸುಮಾರು 1 ತಿಂಗಳಿನಿಂದ ತನ್ನ 5 ಲಕ್ಷ ಸಿಬ್ಬಂದಿ ಹಾಗೂ ವ್ಯಾಪಾರದ ಮೇಲೆ ಕೊರೋನಾ ವೈರಸ್ ಪ್ರಭಾವದ ಕುರಿತು ವರದಿ ಪಡೆದುಕೊಳ್ಳಲು ಪ್ರತಿ ಎರಡು ದಿನಕ್ಕೊಮ್ಮೆ ಸಭೆ ನಡೆಸುತ್ತಿದ್ದಾರೆ.
ರಿಲಯನ್ಸ್ ವಕ್ತಾರ ಈ ಕುರಿತು ಪ್ರತಿಕ್ರಿಯಿಸುತ್ತಾ 'ಮುಕೇಶ್ ಅಂಬಾನಿ ವಿದೇಶಕ್ಕೆ ಕೆಲಸದ ನಿಮಿತ್ತ ವಿದೇಶಕ್ಕೆ ಕಂಪನಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಯಾಣಿಸುವ ಸಿಬ್ಬಂದಿ ಕುರಿತು ಹೆಚ್ಚು ಚಿಂತಿತರಾಗಿದ್ದಾರೆ. ಅಲ್ಲದೇ ವಿದೇಶದಲ್ಲಿ ಕೆಲಸ ಮಾಡುತ್ತಿರುವ ಕಂಪನಿ ಉದ್ಯೋಗಿಗಳ ಕುರಿತೂ ಚಿಂತಿತರಾಗಿದ್ದಾರೆ. ಎಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಕಂಪನಿಯು ವೈದ್ಯರ ಒಂದು ತಂಡವನ್ನು ನೇಮಿಸಿಕೊಂಡಿದೆ. ಅಲ್ಲದೇ ಕಂಪನಿಯ ಸುತ್ತಮುತ್ತ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ. ಇವರ ಡಿಜಿಟಲ್ ತಂಡ ಮೊದಲೇ ಈ ಕುರಿತು ಅಭಿಯಾನ ಆರಂಭಿಸಿದೆ' ಎಂದಿದ್ದಾರೆ.
ಇದನ್ನು ಹೊರತುಪಡಿಸಿ ನವೀ ಮುಂಬೈನಲ್ಲಿರುವ ರಿಲಯನ್ಸ್ ಕಾರ್ಪೋರೇಟ್ ಪಾರ್ಕ್ ಹಾಗೂ ಜಾಮ್ ನಗರದಲ್ಲಿರುವ ಪೆಟ್ರೋ ಕೆಮಿಕಲ್ ರಿಫೈನಿಂಗ್ ಕಾಂಪ್ಲೆಕ್ಸ್ ನಲ್ಲಿ ಹೆಚ್ಚಿನ ಜಾಗೃತೆ ವಹಿಸಲಾಗಿದೆ. ಇದನ್ನು ಹೊರತುಪಡಿಸಿ ದೇಶದಾದ್ಯಂತ ವಿಸ್ತರಿಸಿರುವ ರಿಲಯನ್ಸ್ ನ ರಿಟೇಲ್ ಔಟ್ ಲೆಟ್ಸ್ ಗಳಲ್ಲೂ ಸ್ವಚ್ಛತೆ ಕುರಿತು ಹೆಚ್ಚು ಗಮನ ವಹಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಓರ್ವ ಅಧಿಕಾರಿ 'ನಮ್ಮಲ್ಲಿ ಯಾವುದೇ ತುರ್ತು ಪರಿಸ್ಥಿತಿಯಕಲ್ಲಿ ಸಿಬ್ಬಂದಿ ಕುಟುಂಬ ಸದಸ್ಯರನ್ನು ಸಂಪರ್ಕಿಸುವ ಹೆಲ್ಪ್ ಲೈನ್ ಸರ್ವಿಸ್ ಇದೆ. ಅಲ್ಲದೇ ರಿಲಯನ್ಸ್ ನ ಎಲ್ಲಾ ಕ್ಯಾಂಪಸ್ ಗಳಲ್ಲಿ ಡಾಕ್ಟರ್ ಗಳಿದ್ದಾರೆ' ಎಂದಿದ್ದಾರೆ.
ವರ್ಕ್ ಫ್ರಂ ಹೋಂ: ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಡಿವಿಜನ್ ಹೆಡ್ಸ್ ಗಳಿಗೆ ಮನೆಯಿಂದ ಕೆಲಸ ಮಾಡುವ ಆಫರ್ ಕೂಡಾ ನೀಡಿದ್ದು, ಇದರಲ್ಲಿ ವಿಶೇಷವಾಗಿ ಮಹಿಳಾ ಸಿಬ್ಬಂದಿಗೆ ಈ ಅವಕಾಶ ನೀಡಲಾಗಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚು ಪ್ರಯಾಣ ಮಾಡುವ ಸಾಧ್ಯತೆ ಬರದಿರಲಿ ಎಂಬ ಕಾರಣದಿಂದ ಹೀಗೆ ಮಾಡಲಾಗಿದೆ. ಇನ್ನು ರಿಲಯನ್ಸ್ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವವರ ಪೈಕಿ ಶೇ. 14ರಷ್ಟು ಮಹಿಳಾ ಉದ್ಯೋಗಿಗಳೇ ಇದ್ದಾರೆ.
ರಿಲಯನ್ಸ್ ಜಿಯೋ ಹಾಗೂ ತನ್ನ ಪೆಟ್ರೋ ಕೆಮಿಕಲ್ ಉತ್ಪಾದನಾ ಕ್ಷಮತೆ ಹೆಚ್ಚಿಸಲು ಕಳೆದ 5 ವರ್ಷಗಳಲ್ಲಿ ಸರಿಸುಮಾರು 5.4 ಕೋಟಿ ರೂ. ಹೂಡಿಕೆ ಮಾಡಿದೆ. ಈ ಪ್ರಕ್ರಿಯೆಯಲ್ಲಿ ಜಿಯೋ ಕಳೆದ ಕೆಲ ವರ್ಷಗಳಲ್ಲಿ 1.3 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಕಂಪನಿ ಮಾರ್ಚ್ 2021ರೊಳಗೆ ಕಂಪನಿ ಸಾಲದಿಂದ ಮುಕ್ತಗೊಳ್ಳುವ ಯೋಜನೆಯಲ್ಲಿದೆ. ಆದರೆ ಕೊರೋನಾ ವೈರಸ್ ಕಾರಣದಿಂದ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿದಿದೆ.
ಇದನ್ನು ಹೊರತುಪಡಿಸಿ RIL ತನ್ನ ಆರಂಭಿಕ IPO ಲಾಂಚ್ ಮಾಡುವುದಕ್ಕೂ ಮುನ್ನ ಕೆಲ ಹೂಡಿಕೆದಾರರಿಗೆ ರಿಲಯನ್ಸ್ ರಿಟೇಲ್ ಹಾಗೂ ಜಿಯೋನ ಕೆಲ ಭಾಗವನ್ನು ಸೇಲ್ ಮಾಡುವ ಯೋಜನೆಯನ್ನೂ ಮಾಡಿದೆ.