ಚಿನ್ನದ ದರದಲ್ಲಿ ದಾಖಲೆಯ ಕುಸಿತ, ಖರೀದಿದಾರರ ಮೊಗದಲ್ಲಿ ಹರ್ಷ: ಇಲ್ಲಿದೆ ಇಂದಿನ ರೇಟ್!
ದೀಪಾವಳಿಗೆ ತೆರೆ, ಚಿನ್ನದ ದರವೂ ಇಳಿಕೆ| ಹತ್ಹೀತು ದಿನದಲ್ಲಿ ಸುಮಾರು 2400ರೂ. ಕುಸಿತ| ಇಲ್ಲಿದೆ ನೋಡಿ ನ.25ರ ಗೋಲ್ಡ್ ರೇಟ್
ಕೊರೋನಾ ಹಾವಳಿ ಹೆಚ್ಚಿದಾಗಿನಿಂದಲೂ ಚಿನ್ನದ ದರ ಗ್ರಾಹಕರನ್ನು ಕಂಗಾಲುಗೊಳಿಸಿದೆ. ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಗೋಲ್ಡ್ ರೇಟ್ ಬಳಿಕ ಕೊಂಚ ಕುಸಿದಿತ್ತಾದರೂ ಹಾವೇಣಿ ಆಟ ಮುಂದುವರೆಸಿತ್ತು. ದೀಪಾವಳಿ ವೇಳೆಗೆ ಕಡಿಮೆಯಾಗಬಹುದೆಂದು ಭಾವಿಸಿದ್ದರೂ ಈ ನಿರೀಕ್ಷೆ ಹುಸಿಯಾಗಿತ್ತು.
ಕೊರೋನಾ ಕಾಲದಲ್ಲಿ ಉದ್ಯಮಗಳು ನೆಲ ಕಚ್ಚಿದಾಗ ಹೆಚ್ಚಿನ ಮಂದಿ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದ್ದೇ ಬೆಲೆ ಏರಿಕೆಗೆ ಕಾರಣವಾಗಿತ್ತು.
ಆದರೆ ದೀಪಾವಳಿ ಹಬ್ಬಕ್ಕೆ ತೆರೆ ಬಿದ್ದ ಬೆನ್ನಲ್ಲೇ ಚಿನ್ನದ ದರ ಕುಸಿದಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 600 ರೂ. ಕುಸಿದು 45,600 ರೂಪಾಯಿ ಆಗಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 600 ರೂ. ಕುಸಿದು 45,600 ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರದಲ್ಲೂ 1,400ರೂ ಇಳಿಕೆಯಾಗಿದ್ದು, ಒಂದು ಕೆ. ಜಿ. ಬೆಳ್ಳಿ ದರ 60,900ರೂ ಆಗಿದೆ.
ಒಂದು ವಾರದಲ್ಲಿ ದಾಖಲೆಯ ಇಳಿಕೆ: ದೀಪಾವಳಿ ಕೊನೆಗೊಂಡ ಮರುದಿನದಿಂದಲೇ ಚಿನ್ನದ ದರ ಇಳಿಕೆ ಕಾಣಲಾರಂಭಿಸಿದೆ. ಈ ಮೂಲಕ ಕಳೆದ ಹತ್ತು ದಿನಗಳಿಂದ 22 ಕ್ಯಾರೆಟ್ ಚಿನ್ನದ ದರ ಒಟ್ಟು 1400 ರೂ. ಇಳಿಕೆ ಕಂಡಿದೆ.
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.