8 ದಿನಗಳಲ್ಲಿ 2,130 ರೂಪಾಯಿ ಇಳಿಕೆ: ಇಂದು ಮತ್ತೆ ಕುಸಿತಗೊಂಡ ಚಿನ್ನದ ಬೆಲೆ
Gold Price Details: ಆಗಸ್ಟ್ 9 ರಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡುಬರುತ್ತಿದೆ. ಚಿನ್ನ ಮತ್ತು ಬೆಳ್ಳಿ ಖರೀದಿಗೆ ಉತ್ತಮ ಸಮಯವಿದು. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ತಿಳಿದುಕೊಳ್ಳಿ.

ಭಾರತದಲ್ಲಿ ಚಿನ್ನದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಆಗಸ್ಟ್ 9ರಿಂದ ಇಳಿಕೆಯತ್ತ ಸಾಗುತ್ತಿರೋ ಚಿನ್ನ ದರ ಇಂದು ಸಹ ಕಡಿಮೆಯಾಗಿದೆ. ಹಾಗಾಗಿ ಚಿನ್ನ ಖರೀದಿಸೋದಕ್ಕೆ ಇಂತಹ ಸುಸಂದರ್ಭ ಮತ್ತೊಮ್ಮೆ ಸಿಗಲಾರದು.
ಈ ರೀತಿಯಾಗಿ ಇಳಿಕೆಯಾದ ನಂತರೇ ದಿಢೀರ್ ಅಂತ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆಯಾಗುತ್ತಿರೋ ಸಂದರ್ಭದಲ್ಲಿ ಬಂಗಾರ ಖರೀದಿಸೋದು ಜಾಣರ ನಡೆಯಾಗುತ್ತದೆ. ಇದೇ ರೀತಿ ಇಂದು ಜನರು ಬೆಳ್ಳಿ ಮೇಲಿನ ಹೂಡಿಕೆಯೂ ಅಧಿಕವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,275 ರೂಪಾಯಿ (5 ರೂ. ಇಳಿಕೆ)
8 ಗ್ರಾಂ: 74,200 ರೂಪಾಯಿ (40 ರೂ. ಇಳಿಕೆ)
10 ಗ್ರಾಂ: 92,750 ರೂಪಾಯಿ (50 ರೂ. ಇಳಿಕೆ)
100 ಗ್ರಾಂ: 9,27,500 ರೂಪಾಯಿ (500 ರೂ. ಇಳಿಕೆ)
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,118 ರೂಪಾಯಿ (6 ರೂ. ಇಳಿಕೆ)
8 ಗ್ರಾಂ: 80,944 ರೂಪಾಯಿ (48 ರೂ. ಇಳಿಕೆ)
10 ಗ್ರಾಂ: 1,01,180 ರೂಪಾಯಿ (60 ರೂ. ಇಳಿಕೆ)
100 ಗ್ರಾಂ: 10,11,800 ರೂಪಾಯಿ (600 ರೂ. ಇಳಿಕೆ)
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಈ ರೀತಿಯಾಗಿದೆ. ಮುಂಬೈ: 92,750 ರೂಪಾಯಿ, ಚೆನ್ನೈ: 92,750 ರೂಪಾಯಿ, ದೆಹಲಿ: 92,900 ರೂಪಾಯಿ, ಹೈದರಾಬಾದ್: 92,750 ರೂಪಾಯಿ, ಬೆಂಗಳೂರು: 92,750 ರೂಪಾಯಿ, ಕೋಲ್ಕತ್ತಾ: 92,750 ರೂಪಾಯಿ, ಪುಣೆ: 92,750 ರೂಪಾಯಿ, ವಡೋದರ: 92,800 ರೂಪಾಯಿ, ಅಹಮದಾಬಾದ್: 92,800 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ಭಾರತದಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 60 ರೂಪಾಯಿ ಕಡಿಮೆಯಾಗಿದೆ. ಆದ್ರೆ ಬೆಳ್ಳಿ ಬೆಲೆ ಕೊಂಚ ಏರಿಕೆಯಾಗಿದೆ. 1000 ಗ್ರಾಂ ಬೆಳ್ಳಿಯಲ್ಲಿ 100 ರೂ.ಗಳಷ್ಟು ಹೆಚ್ಚಾಗಿದೆ. ಇಂದಿನ ಬೆಳ್ಳಿ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
10 ಗ್ರಾಂ: 1,162 ರೂಪಾಯಿ
100 ಗ್ರಾಂ: 11,620 ರೂಪಾಯಿ
1000 ಗ್ರಾಂ: 1,16,200 ರೂಪಾಯಿ