ಗಣೇಶ ಹಬ್ಬದಂದು ಚಿನ್ನದ ಬೆಲೆ ಏರಿಕೆನಾ? ಇಳಿಕೆನಾ? ಇಲ್ಲಿದೆ ಇಂದಿನ ದರ
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಚಿನ್ನ-ಬೆಳ್ಳಿ ಖರೀದಿಗೆ ಜನ ಉತ್ಸುಕರಾಗಿದ್ದಾರೆ. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ಕುರಿತು ಈ ಲೇಖನದಲ್ಲಿ ತಿಳಿಯಿರಿ. Citi ವರದಿಯ ಪ್ರಕಾರ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರಲಿದೆ.

ಇಂದು ಗಣೇಶ ಚತುರ್ಥಿಯಾಗಿದ್ದು, ಚಿನ್ನ ಮತ್ತು ಬೆಳ್ಳಿ ಖರೀದಿಸಲು ಜನರು ಉತ್ಸುಕರಾಗಿರುತ್ತಾರೆ. ಚಿನ್ನ ಮತ್ತು ಬೆಳ್ಳಿ ಖರೀದಿಗೂ ಮುನ್ನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಭಾರತದಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿಂದು 22 ಕ್ಯಾರಟ್ ಬೆಲೆ
1 ಗ್ರಾಂ: 9,390 ರೂಪಾಯಿ
8 ಗ್ರಾಂ: 75,120 ರೂಪಾಯಿ
10 ಗ್ರಾಂ: 93,900 ರೂಪಾಯಿ
100 ಗ್ರಾಂ: 9,39,000 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,244 ರೂಪಾಯಿ
8 ಗ್ರಾಂ: 81,952 ರೂಪಾಯಿ
10 ಗ್ರಾಂ: 1,02,440 ರೂಪಾಯಿ
100 ಗ್ರಾಂ: 10,24,400 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 93,900 ರೂಪಾಯಿ, ಮುಂಬೈ: 93,900 ರೂಪಾಯಿ, ದೆಹಲಿ: 94,050 ರೂಪಾಯಿ, ಬೆಂಗಳೂರು: 93,900 ರೂಪಾಯಿ, ಹೈದರಾಬಾದ್: 93,900 ರೂಪಾಯಿ, ಪುಣೆ: 93,900 ರೂಪಾಯಿ, ವಡೋದರಾ: 93,950 ರೂಪಾಯಿ, ಅಹಮದಾಬಾದ್: 93,950 ರೂಪಾಯಿ
ಇಂದಿನ ಬೆಳ್ಳಿ ಬೆಲೆ
ಬೆಳ್ಳಿ ಇಂದು ಕೇವಲ ಆಭರಣ ಮಾತ್ರವಾಗಿ ಉಳಿದಿಲ್ಲ. ಇದೀಗ ಉದ್ದಿಮೆದಾರು ಮತ್ತು ಹೂಡಿಕೆದಾರರ ಪ್ರಮುಖ ವಸ್ತುವಾಗಿ ಬದಲಾಗಿದೆ. ಸೋಲಾರ್ ಎನರ್ಜಿ, ಇಲೆಕ್ಟ್ರಾನಿಕ್ ಮತ್ತು ನೂತನ ತಂತ್ರಜ್ಞಾನ ಸೇರಿದಂತೆ ಉತ್ಪದನಾ ಕ್ಷೇತ್ರಗಳಲ್ಲಿ ಬೆಳ್ಳಿ ಬಳಕೆ (Silver Use) ಮಾಡಲಾಗುತ್ತದೆ.
10 ಗ್ರಾಂ: 1,200 ರೂಪಾಯಿ
100 ಗ್ರಾಂ: 12,000 ರೂಪಾಯಿ
1000 ಗ್ರಾಂ: 1,20,000 ರೂಪಾಯಿ
Citi ತನ್ನ ವರದಿಯಲ್ಲಿ ಬೆಳ್ಳಿ ಹೂಡಿಕೆಯ ಸಲಹೆ ನೀಡಿದ್ರೆ, ಮತ್ತೊಂದೆಡೆ ಚಿನ್ನದ ಕುರಿತು ಸಹ ಮಾಹಿತಿಯನ್ನು ನೀಡಿದೆ. ಈ ವರ್ಷ 2025ರಲ್ಲಿ ಚಿನ್ನದ ಬೆಲೆ ಶೇ.27ರಷ್ಟು ಏರಿಕೆಯಾಗಿರಬಹುದು. ಆದ್ರೆ ಈ ಏರಿಕೆ ವೇಗ ನಿಧಾನವಾಗಿ ಇಳಿಕೆಯಾಗಲಿದೆ. ಮುಂದಿನ ಮೂರು ತಿಂಗಳಲ್ಲಿ ಚಿನ್ನದ ಬೆಲೆ $3,000 ಗಡಿ ದಾಟಬಹುದು. ಆದ್ರೆ 2026ರ ಎರಡನೇ ತ್ರೈಮಾಸಿಕ ವೇಳೆಗೆ ಚಿನ್ನದ ಬೆಲೆ $2,500 ರಿಂದ $2,700 ರೂ.ಗೆ ಇಳಿಕೆಯಾಗಬಹುದು ಎಂದು ಭವಿಷ್ಯ ನುಡಿದಿದೆ.