- Home
- Karnataka Districts
- Bengaluru Urban
- ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿ ಮಹತ್ವದ ಸಂದೇಶ ನೀಡಿದ ಡಿಕೆಶಿ ಪುತ್ರಿ ಐಶ್ವರ್ಯ
ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿ ಮಹತ್ವದ ಸಂದೇಶ ನೀಡಿದ ಡಿಕೆಶಿ ಪುತ್ರಿ ಐಶ್ವರ್ಯ
ದೇಶಾದ್ಯಂತ ಗಣೇಶ ಹಬ್ಬ ಆಚರಿಸಲಾಗಿದೆ. ಹಲೆವೆಡೆ ಸಂಭ್ರಮಾಚರಣೆ ಇನ್ನೂ ಮುಗಿದಿಲ್ಲ. ಇತ್ತ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಅದ್ಧೂರಿಯಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ. ತಮ್ಮ ಶಿಕ್ಷಣ ಸಂಸ್ಥೆಯಲ್ಲಿನ ಗಣೇಶ ಹಬ್ಬ ಆಚರಣೆ ಹೇಗಿತ್ತು?

ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಜೋರಾಗಿದೆ. ಸೆಲೆಬ್ರೆಟಿಗಳು, ರಾಜಕಾರಣಿಗಳು ಗಣೇಶ ಹಬ್ಬ ಆಚರಿಸಿ, ವಿಘ್ನ ವಿನಾಯಕನ ಆಶೀರ್ವಾದ ಪಡೆದಿದ್ದಾರೆ. ಇತ್ತ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಎಸ್ ಹೆಗ್ಡೆ ತಾವು ಮುನ್ನಡೆಸುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಿದ್ದಾರೆ.
ವಿದ್ಯಾರ್ಥಿಗಳು, ಸಿಬ್ಬಂದಿಗಳು, ಉಪನ್ಯಾಸಕರು ಸೇರಿದಂತೆ ಎಲ್ಲರ ಜೊತೆ ಸೇರಿ ಐಶ್ವರ್ಯ ಗಣೇಶ ಹಬ್ಬ ಆತರಿಸಿದ್ದಾರೆ. ಗೌರಿ ಗಣೇಶನ ಕೂರಿಸಿ ಶಾಸ್ತ್ರೋಕ್ತವಾಗಿ ಪೂಜಾ ಕಾರ್ಯಗಳನ್ನು ನಡೆಸಲಾಗಿದೆ. ಖುದ್ದು ಐಶ್ವರ್ಯ ಡಿಕೆಎಸ್ ಹೆಗ್ಡೆ ಆರತಿ ಬೆಳಗಿ ಪೂಜೆ ಮಾಡಿದ್ದಾರೆ. ಈ ಕುರಿತು ಐಶ್ವರ್ಯ ಮಾಹಿತಿ ಹಂಚಿಕೊಂಡಿದ್ದಾರೆ.
ನಾಡಿನ ಸಮಸ್ತ ಜನತೆಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ಗೌರಿ ಹಾಗೂ ಗಣೇಶನ ಕೃಪೆ ಎಲ್ಲರ ಮೇಲಿರಲಿ. ಪ್ರತಿಯೊಬ್ಬರ ಜೀವನದಲ್ಲಿಯೂ ಶಾಂತಿ, ಸಮೃದ್ಧಿ ತುಂಬಲಿ ಇಂದು ನಮ್ಮ ಶಿಕ್ಷಣ ಸಂಸ್ಥೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ಗಣೇಶ ಹಬ್ಬ ಸಂಭ್ರಮಿಸಿದ ಕ್ಷಣಗಳು ಎಂದು ಐಶ್ವರ್ಯ ಡಿಕೆಎಸ್ ಹೆಗ್ಡೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯನ್ನು ಡಿಕೆ ಶಿವಕುಮಾರ್ 2001ರಲ್ಲಿ ಹುಟ್ಟುಹಾಕಿದ್ದಾರೆ. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಗುರುತಿಸಿಕೊಂಡಿದೆ. ಶಿಕ್ಷಣ ಸಂಸ್ಥೆಗಳ ಮಹತ್ತರ ಜವಾಬ್ದಾರಿಗಳನ್ನು ಐಶ್ವರ್ಯ ಡಿಕೆಎಸ್ ಹೆಗ್ಡೆ ನಿರ್ವಹಿಸುತ್ತಿದ್ದಾರೆ. ಈ ಕಾಲೇಜಿನಲ್ಲಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ 300ಕ್ಕೂ ಹೆಚ್ಚು ಉಪನ್ಯಾಸಕರಿದ್ದಾರೆ.
ಗಣೇಶ ಹಬ್ಬದ ಸಂಭ್ರಮದಲ್ಲಿ ಐಶ್ವರ್ಯ ಡಿಕೆಎಸ್ ಹೆಗ್ಡೆ ಕಾಲೇಜಿನ ಸಿಬ್ಬಂಧಿ ವರ್ಗದ ಜೊತೆ ಫೋಟೋ ತೆಗಿಸಿಕೊಂಡಿದ್ದಾರೆ. ಇದೇ ವೇಳೆ ಸಿಬ್ಬಂದಿ ವರ್ಗ ಮಕ್ಕಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.
ಐಶ್ವರ್ಯ ಡಿಕೆಎಸ್ ಹೆಗ್ಡೆ ಹಲವು ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಶಕ್ಷಣ ಸಂಸ್ಥೆಗಳ ಜೊತೆ ತಮ್ಮದೇ ಬ್ರ್ಯಾಂಡ್ ಫ್ಯಾಶನ್ ಸಂಸ್ಥೆ ಮುನ್ನಡೆಸುತ್ತಿದ್ದಾರೆ. ಚಿಲ್ಲೊಸಫಿ ಅನ್ನೋ ಬಟ್ಟೆ ಬ್ರ್ಯಾಂಡ್‌ನ್ನು ಐಶ್ವರ್ಯ ಮುನ್ನಡೆಸುತ್ತಿದ್ದಾರೆ.
ಚಿಲ್ಲೊಸಫಿ ಬ್ರ್ಯಾಂಡ್‌ನ ಸ್ಟಾಟರ್ಜಿಕ್ ಅಂಬಾಸಿಡರ್ ಆಗಿಯೂ ಕಾರ್ಯನಿರ್ಹಿಸುತ್ತಿರುವ ಐಶ್ವರ್ಯ ಡಿಕೆಎಸ್ ಹೆಗ್ಡೆ, ತಮ್ಮ ಸಂಸ್ಥೆಯ ಹೊಸ ವಿನ್ಯಾಸದ ಫ್ಯಾಶನ್‌ನ್ನು ತಾವೇ ಧರಿಸಿ ಪ್ರಚಾರ ಮಾಡುತ್ತಾರೆ.
2018ರಲ್ಲಿ ಈ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಐಶ್ವರ್ಯ ಜೊತೆಗೆ ಇನ್ನಿಬ್ಬರು ಮಹಿಳಾ ಕೋ ಫೌಂಡರ್ ಈ ಸಂಸ್ಥೆಯಲ್ಲಿದ್ದಾರೆ. ಚಿಲ್ಲೋಸಫಿ ಟ್ರಾಪ್ ಫ್ಯಾಶನ್ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ.