- Home
- Karnataka Districts
- Bengaluru Urban
- ಕಳ್ಳನ ಜೊತೆ ಕಾನ್‌ಸ್ಟೇಬಲ್ ರೂಮ್ ಶೇರ್; ಹೆಂಡ್ತಿ ಮುಂದೆ ಪೊಲೀಸ್ ಯುನಿಫಾರ್ಮ್ ಧರಿಸಿ ಬಾಂಬೆ ಸಲೀಂನ ಬಿಲ್ಡಪ್
ಕಳ್ಳನ ಜೊತೆ ಕಾನ್‌ಸ್ಟೇಬಲ್ ರೂಮ್ ಶೇರ್; ಹೆಂಡ್ತಿ ಮುಂದೆ ಪೊಲೀಸ್ ಯುನಿಫಾರ್ಮ್ ಧರಿಸಿ ಬಾಂಬೆ ಸಲೀಂನ ಬಿಲ್ಡಪ್
Bengaluru Police Constable: ಕಳ್ಳನೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ. ಬಂಧಿತ ಕಳ್ಳನ ಮೊಬೈಲ್‌ನಲ್ಲಿ ಪೊಲೀಸ್ ಸಮವಸ್ತ್ರ ಧರಿಸಿದ ಆರೋಪಿಯ ಫೋಟೋ ಪತ್ತೆಯಾಗಿದೆ. ಈ ಸಂಬಂಧ ತನಿಖೆ ಮುಂದುವರೆದಿದೆ.

Bengaluru Police Constable Link With Thieve: ಕಳ್ಳನೋರ್ವನ ಜೊತೆ ರೂಮ್ ಶೇರ್ ಮಾಡಿಕೊಂಡು ಆತನೊಂದಿಗೆ ಸಂಪರ್ಕ ಹೊಂದಿದ ಆರೋಪದಡಿ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ.
ಹಲವು ಕಳ್ಳತನ ಪ್ರಕರಣದಲ್ಲಿ ಬೇಕಾಗಿರುವ ಸಲೀಂ ಅಲಿಯಾಸ್ ಬಾಂಬೆ ಸಲೀಂ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಆರೋಪಿಯಾಗಿದ್ದಾನೆ. ವಾರೆಂಟ್‌ಗಳಿರೋ ಆರೋಪಿ ಬಾಂಬೆ ಸಲೀಂ ಜೊತೆ ಪೊಲೀಸ್ ಕಾನ್‌ಸ್ಟೇಬಲ್ ಹೆಚ್.ಆರ್.ಸೋನಾರ್ ಸ್ನೇಹ ಹೊಂದಿದ್ದರು.
ಹೆಚ್.ಆರ್.ಸೋನಾರ್ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಕಳ್ಳನೊಂದಿಗೆ ಸಂಪರ್ಕ ಹೊಂದಿದ ಆರೋಪದಡಿ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಇತ್ತೀಚೆಗೆ ಬಾಂಬೆ ಸಲೀಂನನ್ನು ಬಂಧಿಸಲಾಗಿತ್ತು. ಈ ವೇಳೆ ಪೊಲೀಸರು ಬಾಂಬೆ ಸಲೀಂನ ಮೊಬೈಲ್ ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದರು. ಮೊಬೈಲ್‌ನಲ್ಲಿ ಬಾಂಬೆ ಸಲೀಂ, ಪೊಲೀಸ್ ಸಮವಸ್ತ್ರ ಧರಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದನು. ಪೊಲೀಸ್ ಸಮವಸ್ತ್ರದ ನೇಮ್ ಪ್ಲೇಟ್ ಮೇಲೆ ಹೆಚ್.ಆರ್.ಸೋನಾರ್ ಎಂಬ ಹೆಸರಿತ್ತು. ನಾನು ಕಳ್ಳನಾಗಿದ್ರೂ ಪೊಲೀಸ್ ಡ್ರೆಸ್ ಹಾಕಿಕೊಂಡಿದ್ದೇನೆ ನೋಡು ಎಂದು ವಿಡಿಯೀ ಕಾಲ್ ಮಾಡಿ ಹೆಂಡ್ತಿ ಮುಂದೆ ಬಿಲ್ಡಪ್ ಕೊಟ್ಟಿದ್ದನು.
ಆರೋಪಿ ಬಾಂಬೆ ಸಲೀಂ ಜೊತೆ ಸ್ನೇಹ ಬೆಳಕಿಗೆ ಬಂದ ಹಿನ್ನೆಲೆ ಕಾನ್‌ಸ್ಟೇಬಲ್ ಹೆಚ್.ಆರ್.ಸೋನಾರ್ ಅವರನ್ನು ಅಮಾನತುಗೊಳಿಸಿ ಪೂರ್ವ ವಿಭಾಗದ ಡಿಸಿಪಿ ದೇವರಾಜ್ ಆದೇಶ ಹೊರಡಿಸಿದ್ದಾರೆ. ಕಳ್ಳನೊಂದಿಗೆ ಹೆಚ್.ಆರ್.ಸೋನಾರ್ ಕೇವಲ ಸಂಪರ್ಕ ಹೊಂದಿದ್ದಾರಾ ಅಥವಾ ಆತನೊಂದಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರಾ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.