ರಶ್ಮಿಕಾ ಮನೆ ಸೊಸೆಯಂತೆ ವಿಜಯ್ ದೇವರಕೊಂಡ ಮನೆಯಲ್ಲೇ ಹೆಚ್ಚು ಕಾಣಿಸ್ತಾರೆ. ಹೈದರಾಬಾದ್​​, ಮುಂಬೈ ಬೀದಿಗಳಲ್ಲಿ ಏರ್​ ಪೋರ್ಟ್​ನಲ್ಲಿ, ವಿದೇಶದಲ್ಲಿ ಇಬ್ಬರು ಒಂದೇ ಜಾಗದಲ್ಲಿದ್ದದ್ದು ಎಲ್ಲರಿಗೂ ಗೊತ್ತಿದೆ. ಈ ಈ ಜೋಡಿ ಬಗ್ಗೆ ಮತ್ತೊಂದು ಕತೆ ತೆಲುಗು ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ.

ರಶ್ಮಿಕಾ ಮಂದಣ್ಣ (Rashmika Mandanna) ವಿಜಯ್ ದೇವರಕೊಂಡ (Vijay Deverakonda) .. ಇವರಿಬ್ಬರನ್ನ ಈ ದಶಕದ ಬೆಸ್ಟ್ ಪೇರ್​ ಅಂತ ಎಲ್ಲರು ಕರೀತಾರೆ. ರಿಯಲ್ ಲೈಫ್​​ನಲ್ಲೂ ಈ ಜೋಡಿ ಬೆಸ್ಟ್ ಲವರ್ಸ್​ ಅನ್ನೋದೇನು ಗುಟ್ಟಾಗೇನು ಉಳಿದಿಲ್ಲ. ಕುದ್ದು ಮುಚ್ಚಿ ಸುತ್ತಾಟ ವಾಡಿದ್ದು ಜಗತ್​​ ಜಾಹೀರಾತಾಗಿದೆ. ಈಗ ಈ ಗೀತಾ ಗೋವಿಂದನ ಮತ್ತೊಂದು ಕಹಾನಿ ಟಾಲಿವುಡ್​ ತುಂಬೆಲ್ಲಾ ಹರಿದಾಡ್ತಿದೆ.. ಅದೇನು ಅಂತ ನೋಡೋಣ ಬನ್ನಿ...

ಟಾಲಿವುಡ್​ ಆವರಿಸಿದೆ ರಶ್ಮಿಕಾ-ವಿಜಯ್​ ಮತ್ತೊಂದು ಕಹಾನಿ; ಮತ್ತೆ ಜೊತೆ ಆಗುತ್ತಿದ್ದಾರೆ ಗೀತಾ ಗೋವಿಂದ ಪ್ರೇಮಿಗಳು..!

ಈಗ ಪ್ರೇಮಿಗಳಿಗೆ ರೋಲ್ ಮಾಡೆಲ್​ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ.. ಇವರಿಬ್ಬರು ನಮ್ಮ ಮಧ್ಯೆ ಏನು ಇಲ್ಲ ಎಲ್ಲಾ ಸ್ನೇಹ ಎನ್ನುತ್ತಲೇ. ಪ್ರೇಮಿಗಳ ಹಾಗೆ ಅಲ್ಲಲ್ಲಿ ಮರ ಸುತ್ತಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದಾರೆ. ಇವರಿಬ್ಬರದ್ದು ಪ್ರ್ಯೂರ್​ ಲವ್ ಅನ್ನೋದು ಜಗತ್ತಿಗೇ ಗೊತ್ತಾಗಿದೆ.

ರಶ್ಮಿಕಾ ಮನೆ ಸೊಸೆಯಂತೆ ವಿಜಯ್ ದೇವರಕೊಂಡ ಮನೆಯಲ್ಲೇ ಹೆಚ್ಚು ಕಾಣಿಸ್ತಾರೆ. ಹೈದರಾಬಾದ್​​, ಮುಂಬೈ ಬೀದಿಗಳಲ್ಲಿ ಏರ್​ ಪೋರ್ಟ್​ನಲ್ಲಿ, ವಿದೇಶದಲ್ಲಿ ಇಬ್ಬರು ಒಂದೇ ಜಾಗದಲ್ಲಿದ್ದದ್ದು ಎಲ್ಲರಿಗೂ ಗೊತ್ತಿದೆ. ಈ ಈ ಜೋಡಿ ಬಗ್ಗೆ ಮತ್ತೊಂದು ಕತೆ ತೆಲುಗು ಚಿತ್ರರಂಗದಲ್ಲಿ ಹುಟ್ಟಿಕೊಂಡಿದೆ. ರಶ್ಮಿಕಾ ವಿಜಯ್ ದೇವರಕೊಂಡ ಮತ್ತೆ ಒಂದಾಗಿ ಸಿನಿಮಾ ಮಾಡುತ್ತಿದ್ದಾರೆ.

ವಿಜಯ್​​​​ ಸಕ್ಸಸ್​​​ಗಾಗಿ ಮತ್ತೆ ಬಂದ ರಶ್ಮಿಕಾ ಮಂದಣ್ಣ..!

ವಿಜಯ್ ದೇವರಕೊಂಡ ಗೀತಾ ಗೋವಿಂದ ಸಿನಿಮಾ ಆದ ಮೇಲೆ ದೊಡ್ಡ ಹಿಟ್​ ಸಿನಿಮಾ ಕೊಟ್ಟೇ ಇಲ್ಲ. ಡಿಯರ್​​ ಕಾಂಬ್ರೆಡ್​ ಸಿನಿಮಾದಲ್ಲಿ ಮತ್ತೆ ಜೊತೆಯಾಗಿದ್ದ ಈ ಜೋಡಿಗೆ ದೊಡ್ಡ ಸಕ್ಸಸ್​ ಏನೂ ಸಿಕ್ಕಿಲ್ಲ. ವಿಜಯ್​​​ ನಿರೀಕ್ಷೆ ಇಟ್ಟಿದ್ದ ಸಿನಿಮಾಗಳೆಲ್ಲಾ ಮಕಾಡೆ ಮಾಲಗಿವೆ. ಈಗ ಸೋತು ಸುಣ್ಣವಾಗಿರೋ ಗೆಳಯನಿಗೆ ಗೆಲುವಿನ ಹಾರ ಹಾಕಿಸೋಕೆ ಗೆಳತಿ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ. ಮೂರನೇ ಭಾರಿ ಇವರಿಬ್ಬರ ಕಾಂಬಿನೇಷನ್​​ನಲ್ಲಿ ಸಿನಿಮಾ ಒಂದು ಸಿದ್ಧವಾಗುತ್ತಿದೆ.

ಐತಿಹಾಸಿಕ ಸಿನಿಮಾದಲ್ಲಿ ರಶ್ಮಿಕಾ-ವಿಜಯ್ ನಟನೆ..?

ಯೆಸ್, ಈ ಜಗತ್​ ವಿಖ್ಯಾತ ಜೋಡಿ ಈ ಭಾರಿ ಜೊತೆ ಆಗುತ್ತಿರೋದು ಐತಿಹಾಸಿಕ ಸಿನಿಮಾದಲ್ಲಿ. 1800ರ ದಶಕದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಕಥೆಯಲ್ಲಿ ರಶ್ಮಿಕಾ ವಿಜಯ್ ಆರು ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ರಾಹುಲ್ ಸಂಕೃತ್ಯನ್ ನಿರ್ದೇಶನದಲ್ಲಿ ಈ ಐತಿಹಾಸಿಕ ಸಿನಿಮಾ ಮೂಡಿ ಬರಲಿದೆ. ಈಗಾಗ್ಲೆ ರೀಲ್​ ಹಾಗು ರೀಯಲ್​​ನಲ್ಲಿ ಇವರಿಬ್ಬರ ಕೆಮಿಸ್ಟ್ರಿ ನೋಡಿರೋ ಜನ ಈಗ ಹಿಸ್ಟಾರಿಕಲ್​​ ಸಿನಿಮಾದಲ್ಲಿ ನೋಡಿ ಏನ್​ ಹೇಳ್ತಾರೋ ಕಾದು ನೋಡ್ಬೇಕಿದೆ.

ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..