ನಟ ಶಿವಣ್ಣ ಹಾಗೂ ಸದ್ಗುರು ಭೇಟಿ ಭಾರೀ ಕುತೂಹಲ ಮೂಡಿಸಿದೆ. ಈ ಮೊದಲು ನಟ ಪುನೀತ್ ರಾಜ್‌ಕುಮಾರ್ ಅವರು ಸದ್ಗುರುಗಳ ಜೊತೆ ಸಂದರ್ಶನದಲ್ಲಿ ಭಾಗವಹಿಸಿ ಸುದೀರ್ಘ ಮಾತುಕತೆ ನಡೆಸಿದ್ದರು. ಅಂದು 'ಕಾವೇರಿ ಕಾಲಿಂಗ್' ಪ್ರಾಜೆಕ್ಟ್ ವೇಳೆ ನಡೆದ ಆ ಮಾತುಕತೆಗಳಲ್ಲಿ ನಟ ಪುನೀತ್, ಉಪೇಂದ್ರ, ರಕ್ಷಿತ್ ಶೆಟ್ಟಿ..
ಕನ್ನಡ ನಟ ಶಿವರಾಜ್‌ಕುಮಾರ್ (Shivarajkumar) ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕರ್ನಾಟಕ ಮೂಲದ ಆಧ್ಯಾತ್ಮಿಕ ಗುರು ಹಾಗೂ ಯೋಗಿ ಸದ್ಗುರು (Sadhguru) ಇತ್ತೀಚೆಗೆ ಭೇಟಿಯಾಗಿದ್ದಾರೆ. 'ಸದ್ಗುರು' ಖ್ಯಾತಿಯ ಮೈಸೂರು ಮೂಲದ ಜಗ್ಗಿ ವಾಸುದೇವ್ (Jaggi Vasudev) ಹಾಗೂ ನಟ ಶಿವರಾಜ್‌ಕುಮಾರ್ ಅವರು ಭೇಟಿಯಾಗಿ ಪರಸ್ಪರ ಮಾತುಕತೆ ನಡೆಸಿದ್ದು, ಅದೀಗ ಭಾರೀ ವೈರಲ್ ಆಗಿದೆ. ಈ ವೇಳೆ ನಡೆದ ಮಾತುಕತೆಯ ಒಂದು ಭಾಗದ ತುಣುಕು (ಶಾರ್ಟ್ಸ್) ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿ ಹರಿದಾಡುತ್ತಿದೆ. ಹಾಗಿದ್ದರೆ ಅದರಲ್ಲೇನಿದೆ ನೋಡಿ..
ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಯ್ತು.. ನೀವು ತುಂಬಾ ಸರಳ, ಸಹೃದಯ ಹಾಗೂ ಪ್ರಾಮಾಣಿಕ ವ್ಯಕ್ತಿ. ಇಂಥ ಮಹಾನ್ ವ್ಯಕ್ತಿಯನ್ನು ಭೇಟಿಯಾಗಿದ್ದು ತುಂಬಾ ಖುಷಿ ತಂದಿದೆ' ಎಂದಿದ್ದಾರೆ ಕನ್ನಡದ ಸ್ಟಾರ್ ನಟ, ಡಾ ರಾಜ್‌ಕುಮಾರ್ ಹಿರಿಯ ಮಗ ಶಿವರಾಜ್‌ಕುಮಾರ್. ಅದಕ್ಕೆ ಪ್ರತಿಯಾಗಿ ನಟ ಶಿಚರಾಜ್‌ಕುಮಾರ್ ಅವರಿಗೆ 'ನಮಸ್ಕಾರ' ಹೇಳಿದ ಸದ್ಗುರು ಅವರು 'ಪುನೀತ್ ನಮ್ಮ ಜೊತೆಗೆ ಕಾವೇರಿ ಕಾಲಿಂಗ್‌ಗೆ ಧ್ವನಿ ನೀಡಿದ್ದರು' ಎಂದು ಹೇಳುವ ಮೂಲಕ ನಮ್ಮನ್ನಗಲಿರುವ ಪುನೀತ್ ರಾಜ್‌ಕುಮಾರ್ ಅವರನ್ನು ಅವರಣ್ಣ ಶಿವರಾಜ್‌ಕುಮಾರ್ ಅವರ ಎದುರು ನೆನಪಿಸಿಕೊಂಡಿದ್ದಾರೆ.
ಕಾವೇರಿ ಕಾಲಿಂಗ್ ಅಭಿಯಾನದ ಸಮಯದಲ್ಲಿ ನಾನು ಬರೆದ ಹಾಡಿಗೆ ಪುನೀತ್ ಅವರು ಧ್ವನಿ ನೀಡಿದ್ದರು. ಅದು ಆ ಕಾಲಘಟ್ಟದಲ್ಲಿ ಸಾಕಷ್ಟು ಹೆಸರು ಕೂಡ ಗಳಿಸಿತ್ತು. ಅಂದು ಶುರು ಮಾಡಲಾಗಿರುವ ಕಾವೇರಿ ಕಾಲಿಂಗ್ ಪ್ರಾಜೆಕ್ಟ್ ಇಂದು ಮಹತ್ವದ ಸ್ಥಾನ ಪಡೆದಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಕಾವೇರಿ ಕಾಲಿಂಗ್ ಪ್ರಾಜೆಕ್ಟ್‌ಅನ್ನು ಇನ್ನೂ ಹದಿಮೂರು ಆವೃತ್ತಿಗಳಲ್ಲಿ ಪ್ರಾರಂಭಿಸಲು ಬಯಸಿದೆ. ಹೀಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಕಾವೇರಿ ಕಾಲಿಂಗ್ ಪ್ರಾಜೆಕ್ಟ್ ಅಸ್ಥಿತ್ವಕ್ಕೆ ಬಂದರೆ, ಆಗ ಭಾರತದ 67% ಮಣ್ಣು ವ್ಯವಸಾಯಕ್ಕೆ ಯೋಗ್ಯವಾಗುತ್ತದೆ. ನಟ ಪುನೀತ್ ಅವರು 'ಕಾವೇರಿ ಕಾಲಿಂಗ್' ಭಾಗವಾಗಿರೋದಕ್ಕೆ ನಮಗೆ ತುಂಬಾ ಖುಷಿ ಇದೆ' ಎಂದಿದ್ದಾರೆ ಸದ್ಗುರುಗಳು.
ನಟ ಶಿವಣ್ಣ ಹಾಗೂ ಸದ್ಗುರು ಭೇಟಿ ಭಾರೀ ಕುತೂಹಲ ಮೂಡಿಸಿದೆ. ಈ ಮೊದಲು ನಟ ಪುನೀತ್ ರಾಜ್‌ಕುಮಾರ್ ಅವರು ಸದ್ಗುರುಗಳ ಜೊತೆ ಸಂದರ್ಶನದಲ್ಲಿ ಭಾಗವಹಿಸಿ ಸುದೀರ್ಘ ಮಾತುಕತೆ ನಡೆಸಿದ್ದರು. ಅಂದು 'ಕಾವೇರಿ ಕಾಲಿಂಗ್' ಪ್ರಾಜೆಕ್ಟ್ ವೇಳೆ ನಡೆದ ಆ ಮಾತುಕತೆಗಳಲ್ಲಿ ನಟ ಪುನೀತ್, ರಿಯಲ್ ಸ್ಟಾರ್ ಉಪೇಂದ್ರ, ರಕ್ಷಿತ್ ಶೆಟ್ಟಿ ಹಾಗೂ ನಟ ದಿಗಂತ್ ಸೇರಿದಂತೆ ಹಲವರು ಸದ್ಗುರು ಜೊತೆ ಸಂದರ್ಶನದ ಮೂಲಕ ಮಾತುಕತೆ ನಡೆಸಿದ್ದರು. ಇದೀಗ ನಟ ಶಿವರಾಜ್‌ಕುಮಾರ್ ಅವರು ಸದ್ಗುರುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅವರಿಬ್ಬರ ಭೇಟಿ, ಮಾತುಕತೆ ನೋಡಿ ಸೋಷಿಯಲ್ ಮೀಡಿಯಾಗಳಲ್ಲಿ ಗಮನಾರ್ಹ ಕಾಮೆಂಟ್ ಬಂದಿವೆ.
