ಕಾಂಟವರ್ಸಿ ಮಾಡಿಕೊಂಡೇ ಫೇಮಸ್​ ಆಗಿ ಬಿಗ್​ಬಾಸ್​ ಮನೆಗೆ ಹೋಗಿದ್ದ ಅರ್ಮಾನ್​ ಮಲೀಕ್​ಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಕೋರ್ಟ್​ ಸಮನ್ಸ್​ ಜಾರಿ ಮಾಡಿದೆ. ಏನಿದು ವಿಷ್ಯ? 

ಪ್ರಸಿದ್ಧ ಯೂಟ್ಯೂಬರ್, ಬಿಗ್​ಬಾಸ್​ ಖ್ಯಾತಿಯ ಅರ್ಮಾನ್ ಮಲಿಕ್ (Armaan Malik) ಕೆಲ ವರ್ಷಗಳಿಂದ ಬಹಳ ಸುದ್ದಿಯಲ್ಲಿ ಇದ್ದಾರೆ. ತಮ್ಮ ಇಬ್ಬರು ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿ ಸುದ್ದಿಯಾದವರು ಅರ್ಮಾನ್​. ತಮ್ಮ ಪತ್ನಿಯರ ನಡುವೆ ಜಗಳ ಮಾಡಿಸುವ ನಾಟಕವಾಡಿಸಿ, ಅದನ್ನು ನಿಜವೆಂಬಂತೆ ಬಿಂಬಿಸಿ ಯೂಟ್ಯೂಬ್​ನಲ್ಲಿ ಲಕ್ಷಾಂತರ ವ್ಯೂಸ್​ಗಳನ್ನು ಪಡೆದುಕೊಳ್ಳುವಲ್ಲಿ ಇವರು ನಿಸ್ಸೀಮರು. ಇವರ ಇಬ್ಬರು ಪತ್ನಿಯರು ಕೂಡ ತಾವು ನಿಜವಾಗಿಯೂ ಜಗಳವಾಡುತ್ತಿರುವಂತೆ ಪೋಸ್​ ಕೊಡುವಲ್ಲಿ ಗಂಡನನ್ನು ಮೀರಿಸುತ್ತಾರೆ. ಕೆಲವೊಂದು ವಿಡಿಯೋಗಳಲ್ಲಿ ತಾವು ಮಾಡಿದ್ದ ತಮಾಷೆ ಎಂದು ಕೊನೆಯಲ್ಲಿ ಹೇಳಿದರೂ, ಹಲವು ವಿಡಿಯೋಗಳಲ್ಲಿ ಇವರ ಫ್ಯಾನ್ಸ್​ ಇದು ನಿಜವೇ ಎಂದು ನಂಬಿ ಇಬ್ಬರು ಪತ್ನಿಯರ ಜಗಳದ ಮಜ ತೆಗೆದುಕೊಳ್ಳುತ್ತಾರೆ. ಅದಕ್ಕೆ ತಕ್ಕಂತೆ ಥಹರೇವಾರಿ ಕಮೆಂಟ್​ ಹಾಕುತ್ತಾರೆ.

ಇವೆಲ್ಲಾ ಸುಳ್ಳೆ ಆಗಿದ್ದರೂ ಇಬ್ಬರೂ ಪತ್ನಿಯರಂತೂ ಒಟ್ಟಿಗೇ ಗರ್ಭಿಣಿ (Pregnant) ಮಾಡಿ ಸದ್ದು ಮಾಡಿದ್ದರು. ಇಬ್ಬರು ಪತ್ನಿಯರಿಂದ ನಾಲ್ವರು ಮಕ್ಕಳನ್ನು ಪಡೆದಿದ್ದಾರೆ ಇವರು. ಅಷ್ಟಕ್ಕೂ ಅರ್ಮನ್​ ಮಲಿಕ್​ ಅವರ ಇತಿಹಾಸ ಕುತೂಹಲಕಾರಿಯಾಗಿದೆ. ಅದೇನೆಂದರೆ, ಅಸಲಿಗೆ ಗಾಯಕ ಅರ್ಮಾನ್​ ಮಲಿಕ್​ ಮೂಲತಃ ಹಿಂದೂ ವ್ಯಕ್ತಿ. ಹೆಸರು ಸಂದೀಪ್​ (Sandeep) ಎಂದು. ಆದರೆ ಮೊದಲ ಹೆಂಡತಿ ಇರುವಾಗಲೇ ಇನ್ನೊಂದು ಮದುವೆಯಾದರು. ಹಿಂದೂ ಸಂಪ್ರದಾಯದಲ್ಲಿ ಎರಡು ಮದುವೆಗೆ ಅವಕಾಶ ಇಲ್ಲದ ಕಾರಣ, ಇಸ್ಲಾಂಗೆ ಮತಾಂತರಗೊಂಡರು. ಈಗ ಅವರು ಕಾನೂನುಬದ್ಧವಾಗಿ ಎರಡು ಪತ್ನಿಯನ್ನು (two wives) ಪಡೆದಂತಾಗಿದೆ. ಮೊದಲ ಪತ್ನಿಯಿಂದ ಒಂದು ಗಂಡು ಮಗುವನ್ನು ಹೊಂದಿರುವ ಅವರು, ಈಗ ಇಬ್ಬರೂ ಪತ್ನಿಯರನ್ನು ಒಟ್ಟಿಗೇ ಗರ್ಭಿಣಿ ಮಾಡಿ, ನಾಲ್ಕು ಮಕ್ಕಳನ್ನು ಪಡೆದಿದ್ದಾರೆ.

ಇದೀಗ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಾರಣ, ಪದೇ ಪದೇ ತಮ್ಮ ಇಬ್ಬರೂ ಪತ್ನಿಯರ ಜೊತೆ ಸೋಷಿಯಲ್​ ಮೀಡಿಯಾದಲ್ಲಿ ಫೋಟೋಗಳನ್ನು ಹಾಕುವ ಮೂಲಕ ಬಹುಪತ್ನಿತ್ವಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎನ್ನುವ ಕಾರಣಕ್ಕೆ. ಇದರ ಜೊತೆಗೆ, ಹಿಂದೂ ಭಾವನೆಗಳಿಗೆ ಧಕ್ಕೆ ತರುವಂಥ ಪೋಸ್ಟ್​ಗಳನ್ನು ಮಾಡುತ್ತಿರುವುದಕ್ಕೆ. ಅಷ್ಟಕ್ಕೂ ಅರ್ಮಾನ್​ ಈಗ ಇಸ್ಲಾಂಗೆ ಮತಾಂತರಗೊಂಡಿರುವವರು. ಅಲ್ಲಿ ನಾಲ್ಕು ಮದುವೆಗೆ ಅವಕಾಶವಿದೆ. ಆದರೆ ಈ ಹಿಂದೆ ಇವರ ಒಬ್ಬ ಪತ್ನಿ ಕಾಳಿ ಮಾತೆಯ ವೇಷ ಧರಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತಂದು ಕೊನೆಗೆ ಕ್ಷಮೆಯಾಚಿಸಿದ್ದರು. ಇದೀಗ ಪದೇ ಪದೇ ತಮ್ಮ ಇಬ್ಬರು ಪತ್ನಿಯರ ಜೊತೆ ಕಾಣಿಸಿಕೊಂಡು ಬಹು ಪತ್ನಿತ್ವಕ್ಕೆ ಪ್ರಚೋದನೆ ನೀಡುತ್ತಿರುವುದಾಗಿ ದೂರು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ, ಪಟಿಯಾಲ ಜಿಲ್ಲಾ ನ್ಯಾಯಾಲಯವು ಅರ್ಮಾನ್ ಮಲಿಕ್ ಮತ್ತು ಅವರ ಇಬ್ಬರು ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಅವರಿಗೆ ನೋಟಿಸ್​ ಜಾರಿಗೊಳಿಸಿದ್ದು, ಸೆಪ್ಟೆಂಬರ್ 2 ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆ ಖ್ಯಾತ ಗಾಯಕ ಅರ್ಮಾನ್​ ಮಲಿಕ್​ ಅವರು ಈ ಯೂಟ್ಯೂಬರ್​ ಕುರಿತು ಕೆಂಡಾಮಂಡಲವಾಗಿದ್ದರು. ಮದುವೆಯಾಗುವ ಸಲುವಾಗಿ ಮತಾಂತರಗೊಂಡು ಇಬ್ಬರನ್ನೂ ಗರ್ಭಿಣಿ ಮಾಡಿರುವ ಸುದ್ದಿ ಬಹಳ ಸದ್ದು ಮಾಡುತ್ತಲೇ, ನಿಜವಾದ ಅರ್ಮಾನ್​ ಮಲಿಕ್​ ಅರ್ಥಾತ್​ ಗಾಯಕನಿಗೆ ಇದನ್ನು ಸಹಿಸಲು ಆಗಿರಲಿಲ್ಲ. ತಮ್ಮದೇ ಹೆಸರು ಇಟ್ಟುಕೊಂಡು ಹೇಸಿಗೆ ಕೃತ್ಯ ಮಾಡುವ ವಿಷಯ ದಿನನಿತ್ಯ ನೋಡಿ ಅಸಹ್ಯ ಹುಟ್ಟಿದೆ. ದಯವಿಟ್ಟು ಯಾರೂ ಅವರನ್ನು ನನ್ನ ಹೆಸರಿನಲ್ಲಿ ಕರೆಯಬೇಡಿ. ಬದಲಿಗೆ ಅವರ ಅಸಲಿ ಹೆಸರು ಸಂದೀಪ್​ ಎಂದು ಕರೆಯಿರಿ ಎಂದು ಅರ್ಮನ್​ ಮನವಿ ಮಾಡಿಕೊಂಡಿದ್ದರು.