ಕೋಲ್ಕತ್ತಾದಲ್ಲಿ 20 ವರ್ಷದ ಯುವತಿಯ ಮೇಲೆ ಆಕೆಯ ಹುಟ್ಟುಹಬ್ಬದಂದು ಇಬ್ಬರು ಪರಿಚಯಸ್ಥರು ಸಾಮೂಹಿಕ ಅತ್ಯಾ೧ಚಾರ ಎಸಗಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಸಂತ್ರಸ್ತೆ ದೂರು ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

ಕೋಲ್ಕತ್ತಾ (ಸೆ.7): ಕೋಲ್ಕತ್ತಾದ ರೀಜೆಂಟ್ ಪಾರ್ಕ್‌ನಲ್ಲಿ 20 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಹುಟ್ಟುಹಬ್ಬದಂದು ಇಬ್ಬರು ಪರಿಚಯಸ್ಥರು ಸಾಮೂಹಿಕ ಅತ್ಯಾ೧ಚಾರ ಎಸಗಿದ ಆಘಾತಕಾರಿ ಘಟನೆ ಶುಕ್ರವಾರ (ಸೆಪ್ಟೆಂಬರ್ 05, 2025) ನಡೆದಿದೆ.

ಆರೋಪಿಗಳಾದ ಚಂದನ್ ಮಲಿಕ್ ಮತ್ತು ದೀಪ್ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಆರಂಭವಾಗಿದೆ. ಪೊಲೀಸರ ಪ್ರಕಾರ, ಹರಿದೇವ್‌ಪುರದ ನಿವಾಸಿಯಾದ ಸಂತ್ರಸ್ತೆಯನ್ನು ಚಂದನ್ ಹುಟ್ಟುಹಬ್ಬದ ಆಚರಣೆಗೆಂದು ದೀಪ್ ಮನೆಗೆ ಕರೆದೊಯ್ದಿದ್ದ. ಊಟದ ನಂತರ ಮನೆಗೆ ಹಿಂದಿರುಗಲು ಎದ್ದಾಗ ಆರೋಪಿಗಳು ಬಾಗಿಲು ಮುಚ್ಚಿ, ಆಕೆಯ ಮೇಲೆ ಅತ್ಯಾ೧ಚಾರ ಎಸಗಿದ್ದಾರೆ.

ಸಂತ್ರಸ್ತೆ ಶನಿವಾರ (ಸೆಪ್ಟೆಂಬರ್ 06, 2025) ಆರೋಪಿಗಳಿಂದ ತಪ್ಪಿಸಿಕೊಂಡು, ಕುಟುಂಬಕ್ಕೆ ವಿಷಯ ತಿಳಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಸದ್ಯ ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ.

ಪೊಲೀಸ್ ಅಧಿಕಾರಿಯೊಬ್ಬರು ಹೇಳುವಂತೆ, ಸಂತ್ರಸ್ತೆ ಚಂದನ್‌ಗೆ ಹಲವು ತಿಂಗಳಿಂದ ಪರಿಚಯವಾಗಿದ್ದಳು. ಅವನು ದಕ್ಷಿಣ ಕೋಲ್ಕತ್ತಾದ ದುರ್ಗಾ ಪೂಜಾ ಸಮಿತಿಯ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ. ಚಂದನ್ ಮೂಲಕ ದೀಪ್‌ಗೆ ಪರಿಚಯವಾಗಿತ್ತು. ಎಂದು ಹೇಳಿದ್ದಾರೆ.

ಸಂತ್ರಸ್ತೆಯ ದೂರಿನಲ್ಲಿ, ಆರೋಪಿಗಳು ಆಕೆಯನ್ನು ಪೂಜಾ ಸಮಿತಿಯಲ್ಲಿ ಸೇರಿಸಿಕೊಳ್ಳುವ ಭರವಸೆ ನೀಡಿದ್ದರು ಎಂದು ತಿಳಿಸಿದ್ದಾಳೆ. ಕೋಲ್ಕತ್ತಾದಲ್ಲಿ ಇದಕ್ಕೂ ಮುಂಚೆಯೂ ಇಂತಹ ಘಟನೆಗಳು ವರದಿಯಾಗಿವೆ. ಜೂನ್ 25, 2025 ರಂದು ಕಾನೂನು ಕಾಲೇಜು ಆವರಣದಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾ೧ಚಾರ ನಡೆದಿತ್ತು. ಪೊಲೀಸರು ಆರೋಪಿಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದು, ತನಿಖೆ ಮುಂದುವರಿದಿದೆ.