ತಂಡದ ಚೇಂಜಸ್ ಮರೆತು ರೋಹಿತ್ ಶರ್ಮಾ ಕಾಲೆಳೆದ ಸೂರ್ಯಕುಮಾರ್, ವಿಡಿಯೋ, ಭಾರಿ ವೈರಲ್ ಆಗುತ್ತಿದೆ. ಓಮನ್ ವಿರುದ್ಧ ಟಾಸ್ ವೇಳೆ ತನ್ನ ಮರೆವನ್ನು ರೋಹಿತ್ ಶರ್ಮಾಗೆ ಹೋಲಿಸಿ ಟ್ರೋಲ್ ಮಾಡಿದ್ದಾರೆ.

ಅಬುಧಾಬಿ (ಸೆ.19) ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಮಾಜಿ ನಾಯಕ ರೋಹಿತ್ ಶರ್ಮಾ ಕಾಲೆಳೆದಿದ್ದಾರೆ. ಓಮನ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ತಂಡದ ಬದಲಾವಣೆ ಕುರಿತು ಕೇಳಿದಾಗ ಸೂರ್ಯಕುಮಾರ್ ಆಟಗಾರರ ಹೆಸರು ಮರೆತಿದ್ದಾರೆ. ಎರಡು ಬದಲಾವಣೆ ಹೇಳಲು ಪರದಾಡಿದ್ದಾರೆ. ಈ ವೇಳೆ ಅಯ್ಯೋ ನಾನು ರೋಹಿತ್ ಶರ್ಮಾ ರೀತಿ ಆಗಿ ಹೋದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ. ಸೂರ್ಯಕುಮಾರ್ ಯಾದವ್ ಈ ಟ್ರೋಲ್ ವಿಡಿಯೋ ಭಾರಿ ವೈರಲ್ ಆಗಿದೆ.

ನಕ್ಕು ನಗಿಸಿದ ಸೂರ್ಯಕುಮಾರ್ ಯಾದವ್

ಓಮನ್ ವಿರುದ್ದ ಟಾಸ್ ಗೆದ್ದ ಸೂರ್ಯಕುಮಾರ್ ಯಾದವ್‌ಗೆ, ರವಿ ಶಾಸ್ತ್ರಿ ನಿಮ್ಮ ಆಯ್ಕೆ ಏನು ಎಂದು ಕೇಳಿದ್ದಾರೆ. ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೂರ್ಯಕುಮಾರ್‌ಗೆ, ತಂಡದ ಬದಲಾವಣೆ ಕುರಿತು ಪ್ರಶ್ನಿಸಲಾಗಿದೆ. ಈ ವೇಳೆ ತಂಡದ ಇಬ್ಬರು ಆಟಗಾರರ ಹೆಸರು ಮರೆತಿದ್ದಾರೆ. ನಾನು ರೋಹಿತ್ ಶರ್ಮಾ ರೀತಿ ಆಗುತ್ತಿದ್ದೇನೆ ಎಂದು ಹೆಸರು ಹೇಳಲು ಪ್ರಯತ್ನಿಸಿದ್ದಾರೆ. ಹರ್ಷಿತ್ ರಾಣಾ ಎಂದು ಹೆಸರು ಹೇಳಿದ ಸೂರ್ಯಕುಮಾರ್ ಯಾದವ್ ಮತ್ತೊಬ್ಬ ಆಟಗಾರನ ಹೆಸರು ಹೇಳಲು ಪ್ರಯತ್ನಿಸಿದ್ದಾರೆ. ಅರೇ ನಾನು ರೋಹಿತ್ ಶರ್ಮಾ ರೀತಿ ಹೆಸರು ಹೇಳಲು ಆಗುತ್ತಿಲ್ಲ ಎಂದಿದ್ದಾರೆ. ಸೂರ್ಯಕುಮಾರ್ ಮಾತಿಗೆ ರವಿ ಶಾಸ್ತ್ರಿ ಕೂಡ ನಕ್ಕು ಸುಸ್ತಾಗಿದ್ದಾರೆ. ರವಿ ಶಾಸ್ತ್ರಿ ಒಂದಷ್ಟು ಆಟಗಾರರ ಹೆಸರನ್ನು ಹೇಳಿದರೂ ಸೂರ್ಯಕುಮಾರ್ ಯಾದವ್‌ಗೆ ಮತ್ತೊಬ್ಬ ಕ್ರಿಕೆಟಿಗನ ಹೆಸರು ನೆನಪಾಗಲೇ ಇಲ್ಲ.

ಪಾಕಿಸ್ತಾನಕ್ಕಿಂತ ಹೆಚ್ಚು ಫೈಟ್ ಕೊಟ್ಟ ಒಮನ್, 189 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಓಮನ್ ವಿರುದ್ದದ ಪಂದ್ಯಕ್ಕೆ ಜಸ್ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡಲಾಗಿತ್ತು. ಇದರ ಬದಲು ಹರ್ಷಿತ್ ರಾಣಾ ಹಾಗೂ ಅರ್ಶದೀಪ್ ಸಿಂಗ್‌ಗೆ ಅವಕಾಶ ನೀಡಲಾಗಿತ್ತು. ಸೂರ್ಯಕುಮಾರ್ ಯಾದವ್ ಅರ್ಶದೀಪ್ ಸಿಂಗ್ ಹೆಸರು ಮರತು ಹೋಗಿತ್ತು.

Scroll to load tweet…

ರೋಹಿತ್ ವಿದಾಯದ ಬಳಿಕ ನಾಯಕನಾದ ಸೂರ್ಯಕುಮಾರ್

ಸೂರ್ಯಕುಮಾರ್ ಯಾದವ್ ಹಾಗೂ ರೋಹಿತ್ ಶರ್ಮಾ ಆತ್ಮೀಯರು. ಇಬ್ಬರು ಮುಂಬೈ ಕ್ರಿಕೆಟಿಗರು. ರೋಹಿತ್ ನಾಯಕತ್ವ ಆಡಿಯಲ್ಲಿ ಸೂರ್ಯಕುಮಾರ್ ಆಡಿದ್ದಾರೆ. ಇತ್ತ ಮುಂಬೈ ಇಂಡಿಯನ್ಸ್ ತಂಡದಲ್ಲೂ ರೋಹಿತ್ ನಾಯಕತ್ವದ ಅಡಿಯಲ್ಲಿ ಆಡಿದ್ದಾರೆ.

ಹೆಸರು ಮಾತ್ರವಲ್ಲ ವಸ್ತುಗಳನ್ನೇ ಮರೆಯುತ್ತಿದ್ದ ರೋಹಿತ್ ಶರ್ಮಾ

ಟಾಸ್ ವೇಳೆ ರೋಹಿತ್ ಶರ್ಮಾ ಆಟಗಾರರ ಹೆಸರು ಮರೆಯುತ್ತಿದ್ದರು. ಹಲವು ಬಾರಿ ರೋಹಿತ್ ಶರ್ಮಾ ಆಟಗಾರರ ಹೆಸರು ಮರೆಯುತ್ತಿದ್ದರು. ಇಷ್ಟೇ ಅಲ್ಲ ಹಲವು ಬಾರಿ ರೋಹಿತ್ ಶರ್ಮಾ ವ್ಯಾಲೆಟ್, ಪಾಸ್‌ಪೋರ್ಟ್ ಸೇರಿದಂತೆ ಹಲವು ವಸ್ತುಗಳನ್ನು ತೆಗೆದಕೊಳ್ಳಲು ಮರೆದ ಘಟನೆಗಳಿವೆ.

ಭಾರತ-ಪಾಕ್ ಟಾಸ್‌ಗೂ 4 ನಿಮಿಷ ಮೊದಲೇ ಬಿಸಿಸಿಐನಿಂದ ರೆಫ್ರಿಗೆ ಬಂದಿತ್ತು ಖಡಕ್ ಸಂದೇಶ! ಆ ಮೆಸೇಜ್‌ನಲ್ಲಿ ಅಂತದ್ದೇನಿತ್ತು?