ನಿವೃತ್ತಿ ಜೀವನದಲ್ಲಿ ಆರ್ಥಿಕ ಸಮಸ್ಯೆ ಎದುರಾಗದಂತೆ ಜೀವನ ಸಾಗಿಸಲು ಹಲವು ಹೂಡಿಕೆ ಪ್ಲಾನ್‌ಗಳಿವೆ. ಹಿರಿಯ ನಾಗರೀಕರಿಗೆ ಟ್ಯಾಕ್ಸ್ ಉಳಿತಾಯದ ಜೊತೆಗೆ ಉತ್ತಮ ಹೂಡಿಕೆ ಪ್ಲಾನ್ ಯಾವುದು?
ನವದೆಹಲಿ (ಆ.11) ದೇಶದಲ್ಲಿ ಹಲವು ಹೂಡಿಕೆ ಪ್ಲಾನ್ ಲಭ್ಯವಿದೆ. ಈ ಪೈಕಿ ಹಿರಿಯ ನಾಗರೀಕರಿಗೆ ಅತೀ ಹೆಚ್ಚು ರಿಟರ್ನ್ಸ್ ನೀಡುವ ಹಲವು ಪ್ಲಾನ್ ಚಾಲ್ತಿಯಲ್ಲಿದೆ. ಈ ಪೈಕಿ ತೆರಿಗೆ ಉಳಿಸಿ, ಉತ್ತಮ ರಿಟರ್ನ್ಸ್ ಪಡೆಯುವ ಹಲವು ಹೂಡಿಕೆ ಯೋಜನೆಗಳಿವೆ. ನಿವೃತ್ತಿ ಜೀವನದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಎದುರಾಗದಂತೆ ಜೀವನ ಸಾಹಿಸಲು ಹಲವು ಪ್ಲಾನ್‌ಗಳು ಲಭ್ಯವಿದೆ. ಹಿರಿಯ ನಾಗರೀಕರು ಟ್ಯಾಕ್ಸ್ ಉಳಿತಾಯ ಮಾಡಿ, ಹೂಡಿಕೆ ಪ್ಲಾನ್ ಕುರಿತು ವಿವಿರ ಇಲ್ಲಿದೆ.
ಫಿಕ್ಸೆಡ್ ಡೆಪಾಸಿಟ್ ಹಾಗೂ ಆರ್‌ಡಿ ಸ್ಕೀಮ್
ಫಿಕ್ಸೆಡ್ ಡೆಪಾಸಿಟ್ ಹಾಗೂ ರಿಕರಿಂಗ್ ಡೆಪಾಸಿಟ್ (ಆರ್‌ಡಿ ) ಯೋಜನೆಗಳಲ್ಲಿ ನಿಗಧಿತ ಮೊತ್ತವನ್ನು ಸ್ಥಿರ ಠೇವಣಿಯಾಗಿ ಇಡಲಾಗುತ್ತದೆ. ಎಲ್ಲಾ ಬ್ಯಾಂಕ್‌ಗಳಲ್ಲಿ ಈ ಸೌಲಭ್ಯವಿದೆ. ಎಲ್ಲಾ ವಯಸ್ಸಿನವರಿಗೆ ಈ ಸೌಲಭ್ಯವಿದೆ. 5 ವರ್ಷ, 10 ವರ್ಷ ಸೇರಿದಂತೆ ಇಂತಿಷ್ಟು ವರ್ಷದ ವರೆಗೆ ಫಿಕ್ಸೆಡ್ ಡೆಪಾಸಿಟ್ ಇಡಲಾಗುತ್ತದೆ.ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿದರ ನೀಡಲಾಗುತ್ತದೆ. ಫಿಕ್ಸೆಡ್ ಡೆಪಾಸಿಟ್‌ಗೆ ತೆರಿಗೆ ಅನ್ವಯವಾಗುತ್ತದೆ. ಆದರೆ ಹಿರಿಯ ನಾಗರೀಕರು ಫಾರ್ಮ್ 15ಹೆಚ್ ಸಲ್ಲಿಕೆ ಮಾಡಿ ತೆರಿಗೆಯಿಂದ ವಿನಾಯಿತಿ ಪಡೆಯಬಹುದು. ಹಿರಿಯ ನಾಗರೀಕರು 80ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿ ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಹಿರಿಯ ನಾಗರೀಕರ ಫಿಕ್ಸೆಡ್ ಡಾಪಾಸಿಟ್ ಹಲವು ಪ್ರಯೋಜನ ನೀಡುತ್ತದೆ. ಮಾರುಕಟ್ಟೆ ಏರಿಳಿತಗಳಿಂದ ಸ್ಥಿರ ಠೇವಣಿ ಮೊತ್ತಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಹೂಡಿಕೆ ಮೊತ್ತ ಹಾಗೂ ರಿಟರ್ನ್ಸ ತಕ್ಕ ಸಮಯಕ್ಕೆ ಖಾತೆಗೆ ಜಮೆ ಆಗಲಿದೆ.
ಸಿನೀಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ (SCSS)
ಹಿರಿಯ ನಾಗರೀಕರಿಗ ಉಳಿತಾಯ ಯೋಜನೆ 2004ರಲ್ಲಿ ಜಾರಿಗೆ ಬಂದಿದೆ. ಸರ್ಕಾರ ಬೆಂಬಲಿತ ಈ ಯೋಜನೆ ನಿಗಧಿತ ಹೂಡಿಕೆ, ಫಿಕ್ಸೆಡ್ ಬಡ್ಡಿ ಸಿಗಲಿದೆ. 5 ವರ್ಷಗಳ ಅವಧಿ ಲಾಕ್ ಪಿರಿಯೇಡ್ ಇರುತ್ತದೆ. ಸದ್ಯ SCSS ಯೋಜನೆಯಲ್ಲಿ ಹಿರಿಯ ನಾಗರೀಕರಿಗೆ 8.2 ರಷ್ಟು ಬಡ್ಡಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ 1,000 ರೂಪಾಯಿ, ಗರಿಷ್ಠ ಹೂಡಿಕೆ 30 ಲಕ್ಷ ರೂಪಾಯಿ.
ಪ್ರಧಾನ ಮಂತ್ರಿ ವಯ ವಂದನ ಯೋಜನೆ
ಪ್ರಧಾನ ಮಂತ್ರಿ ವಯ ವಂದನೆ ಯೋಜನೆ ಪಿಂಚಣಿ ಜೊತೆಗೆ ವಿಮೆಯನ್ನೂ ಒದಗಿಸಲಿದೆ. ಕನಿಷ್ಠ ಹೂಡಿಗೆ 1.5 ಲಕ್ಷ ರೂಪಾಯಿ, ಗರಿಷ್ಠ 15 ಲಕ್ಷ ರೂಪಾಯಿ. 2017ರಲ್ಲಿ ಆರಂಭಿಸಿದ ಈ ಯೋಜನೆ 2020ರ ವರೆಗೆ ನೀಡಲಾಗಿತ್ತು. ಬಳಿಕ 2023ರ ವರೆಗೆ ವಿಸ್ತರಿಸಲಾಗಿತ್ತು.
ಹಿರಿಯ ನಾಗರೀಕರಿಗೆ ಇದರ ಜೊತೆಗೆ ಇತರ ಹೂಡಿಕೆಗಳಲ್ಲೂ ತೆರಿಗೆ ಉಳಿತಾಯ ಹೂಡಿಕೆಗಳಿವೆ. ಹಿರಿಯ ನಾಗರೀಕರು ಬಹತೇಕ ಹೂಡಿಕೆ ಯೋಜನೆಗಳಲ್ಲಿ ತೆರಿಗೆ ಉಳಿತಾಯ ಪ್ರಯೋಜನ ಪಡೆಯಬಹುದು.
ನ್ಯಾಷನಲ್ ಪೆನ್ಶನ್ ಯೋಜನೆ
ಪಬ್ಲಿಕ್ ಪ್ರೊವಿಡೆಂಟ್ ಫಂಡ್
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ
