Super Market Ideas: ಸೂಪರ್‌ ಮಾರ್ಕೆಟ್‌ಗಳಲ್ಲಿ ಗ್ರಾಹಕರಿಗೆ ಅನುಕೂಲ ಆಗುವ ರೀತಿಯಲ್ಲಿ ಬಾಸ್ಕೆಟ್‌ ಕೊಡುತ್ತಾರೆ ಅಂತ ನೀವು ಅಂದುಕೊಂಡಿರುತ್ತೀರಿ. ಆದರೆ ನಿಜವಾದ ಕಾರಣ ಇದಲ್ಲ. ಮೂರನೇ ರೋದಲ್ಲಿ ಚಾಕಲೇಟ್‌ ಇಡೋದು, ಕಿಟಕಿ ಇಲ್ಲದಿರೋದು, ಅವಶ್ಯಕ ವಸ್ತುಗಳನ್ನು ಕೋಣೆಯಲ್ಲಿ ಇಡೋದು ಯಾಕೆ? 

ಬಂಡವಾಳ ಇದೆ ಎಂದು ಅಥವಾ ರೇಟ್‌ ಜಾಸ್ತಿ ಮಾಡಿದ ತಕ್ಷಣ ಆ ಉದ್ಯಮ ಯಶಸ್ವಿಯಾಗುವುದು ಎಂದು ಹೇಳಲಾಗೋದಿಲ್ಲ. ಇದಕ್ಕೆ ಅದರದ್ದೇ ಆದ ಚಾಣಾಕ್ಷತನ, ತಂತ್ರಗಳು ಬೇಕು. ರಸ್ತೆಯಲ್ಲಿ ಜೋಳ ಮಾರುವವನು ಕೂಡ, ಐವತ್ತು ರೂಪಾಯಿಗೆ ಮೂರು ಜೋಳ ಕೊಡ್ತೀನಿ ಎಂದು ಹೇಳುತ್ತಾನೆಯೇ ಹೊರತು 16 ರೂಪಾಯಿಗೆ ಒಂದು ಜೋಳ ಅಂತ ಹೇಳೋದಿಲ್ಲ. ಹೀಗೆಯೇ ದೊಡ್ಡ ದೊಡ್ಡ ಸೂಪರ್‌ ಮಾರ್ಕೆಟ್‌ಗಳಲ್ಲಿ ( Super Market ) ಬಾಸ್ಕೆಟ್‌ ಕೊಡೋದು, ಕಿಟಕಿ, ವಿಂಡೋ ಇಲ್ಲದಿರೋದು ಹೀಗೆ ಸಾಕಷ್ಟು ವಿಷಯಗಳ ಹಿಂದೆ ಬೇರೆ ಕಾರಣವೇ ಇದೆ. ಈ ಕಾರಣಗಳು ನಿಮಗೆ ಗೊತ್ತಾದರೆ ಪಕ್ಕಾ ಶಾಕ್‌ ಆಗ್ತೀರಿ.

Velaikkaran ಎನ್ನುವ ಸಿನಿಮಾದಲ್ಲಿ ನಟ ಫಹಾದ್‌ ಫಾಸಿಲ್‌ ಹಾಗೂ ಶಿವಕಾರ್ತಿಕೇಯನ್‌ ನಟಿಸಿದ್ದಾರೆ. ಅಲ್ಲಿ ಸೂಪರ್‌ ಮಾರ್ಕೆಟ್‌ ತಂತ್ರಗಳನ್ನು ಫಹಾದ್‌ ಅವರು ಶಿವಕಾರ್ತಿಕೇಯನ್‌ಗೆ ಹೇಳುತ್ತಾರೆ. ಈ ವಿಡಿಯೋ ನೋಡಿದವರು, ಈ ಸಿನಿಮಾ ನೋಡಿದವರು ಈ ತಂತ್ರ ನೋಡಿ ಅಚ್ಚರಿಗೊಂಡಿದ್ದೀರಿ. ಈ ವಿಷಯ ನಮಗೆ ಗೊತ್ತೇ ಇಲ್ಲ ಎಂದು ಹೇಳಿದ್ದಾರೆ.

ಸೂಪರ್‌ ಮಾರ್ಕೆಟ್‌ಗಳಲ್ಲಿ ಬಾಸ್ಕೆಟ್‌ ಕೊಡೋದು ಯಾಕೆ?

ಜನರಿಗೆ ಸಾಮಗ್ರಿಗಳನ್ನು ಹಿಡಿದುಕೊಂಡು ಕೌಂಟರ್‌ಗೆ ಬರಲು ಅನುಕೂಲವಾಗಲಿ ಎಂದು ಬಾಸ್ಕೆಟ್‌ ಇಟ್ಟಿರುತ್ತಾರೆ ಎಂದು ನೀವು ಭಾವಿಸುತ್ತೀರಿ. ಆದರೆ ಇದು ನಿಜವಾದ ಕಾರಣ ಅಲ್ಲ. ಜನರು ಮಾರ್ಕೆಟ್‌ ಒಳಗಡೆ ಬಂದಕೂಡಲೇ ಬಾಸ್ಕೆಟ್‌ ಕೈಗೆ ಕೊಡೋದರ ಹಿಂದೆ ದೊಡ್ಡ ಕಾರಣ ಇದೆ. ಒಂದೆರಡು ಐಟಮ್‌ ತಗೊಳ್ಳಬೇಕು ಅಂತ ಬಂದವರು ಗಿಲ್ಟ್‌ ಫೀಲ್‌ ಆಗಿ ಅವರು ಇನ್ನೊಂದಿಷ್ಟು ಐಟಮ್‌ ತಗೊಳ್ಳಲಿ ಎಂಬುದು ಅವರ ಪ್ಲ್ಯಾನ್.

ಸೂಪರ್‌ ಮಾರ್ಕೆಟ್‌ ಅಲ್ಲಿ ಕಿಟಕಿ ಇರೋದಿಲ್ಲ, ಗಡಿಯಾರ ಇರೋದಿಲ್ಲ

ಜನರಿಗೆ ಹೊರಗಡೆ ಏನಾಗ್ತಿದೆ ಅಂತ ಗೊತ್ತಾಗಬಾರದು ಎಂದು ಅವರು ಕಿಟಕಿ ಇಡೋದಿಲ್ಲ. ಎಷ್ಟು ಸಮಯ ಕಳೆಯುತ್ತಿದ್ದೇವೆ ಎಂದು ಗೊತ್ತಾಗದೆ ಅವರು ಶಾಪಿಂಗ್‌ ಮಾಡಲಿ ಎಂದು ಗಡಿಯಾರ ಇಟ್ಟಿರೋದಿಲ್ಲ.

ಮೂರನೇ ರೋದಲ್ಲಿ ಬಿಸ್ಕೆಟ್‌, ಚಾಕ್ಲೆಟ್‌ ಇಡೋದು ಯಾಕೆ?

ಮಕ್ಕಳಿಗೆ ಬಹುಬೇಗ ಬಿಸ್ಕೆಟ್‌, ಚಾಕ್ಲೇಟ್‌ ಸಿಗಲಿ, ಅವರಿಗೆ ತಗೊಳೋಕೆ ಸುಲಭ ಆಗಲಿ ಅಂತ ಈ ರೀತಿ ಮಾಡಿರುತ್ತಾರೆ.

ಅತ್ಯವಶ್ಯಕ ಸಾಮಗ್ರಿಗಳಾದ ಅಕ್ಕಿ, ಬೇಳೆಯನ್ನು ಕೋಣೆಯಲ್ಲಿ ಇಡೋದು ಯಾಕೆ?

ಎಲ್ಲ ಐಟಮ್‌ಗಳನ್ನು ದಾಟಿ ಆಮೇಲೆ ಅವಶ್ಯಕ ಸಾಮಗ್ರಿಗಳನ್ನು ತಗೊಳ್ಳುತ್ತಾರೆ. ಆಗ ಅವರ ಐಟಮ್‌ ಸೇಲ್‌ ಆಗುತ್ತದೆ.

ಎಂಟ್ರಿ ಡೋರ್‌, ಎಕ್ಸಿಟ್‌ ಡೋರ್‌ ಬೇರೆ ಬೇರೆ ಆಗುತ್ತದೆ?

ಎರಡು ಬಾಗಿಲು ಇಡೋದರಿಂದ ಶಾಪ್‌ನಲ್ಲಿರುವ ಐಟಮ್‌ಗಳೆಲ್ಲವೂ ಜನರ ಕಣ್ಣಿಗೆ ಬೀಳುತ್ತದೆ.

ಬಿಲ್‌ ಕೌಂಟರ್‌ನಲ್ಲಿ ಮಕ್ಕಳ ಐಟಮ್‌ ಇಡೋದ್ಯಾಕೆ?

ಬಿಲ್‌ ಕೌಂಟರ್‌ನಲ್ಲಿ ಸ್ವಲ್ಪ ಹೊತ್ತು ಕಾಯಬೇಕಾಗುವುದು. ಆಗ ಮಕ್ಕಳು ತಿಂಡಿ ಬೇಕು ಎಂದು ಹಠ ಮಾಡುತ್ತಾರೆ.

YouTube video player