Self Employment Business Ideas: ಒಂದೇ ಕೆಲಸದಿಂದ ಬೇಸತ್ತಿದ್ದೀರಾ? ನಿಮ್ಮದೇ ಆದ ವ್ಯಾಪಾರ ಆರಂಭಿಸಲು ಬಯಸುವಿರಾ? ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಗಳಿಸುವ ಕೆಲವು ಟ್ರೆಂಡಿಂಗ್ ವ್ಯಾಪಾರಗಳ ಬಗ್ಗೆ ತಿಳಿದುಕೊಳ್ಳಿ.

Business Idea: ಹಲವು ವರ್ಷಗಳಿಂದ ಒಂದೇ ರೀತಿಯ ಉದ್ಯೋಗ ಮಾಡಿದ್ದೀರಾ? ಇನ್ನೂ ಮುಂದುವರಿಸೋಕೆ ಆಗ್ತಿಲ್ವಾ? ನಿಮ್ಮದೇ ಆದ ಹೊಸತನ ಶುರು ಮಾಡಬೇಕು ಅಂತಿದ್ದೀರಾ? ನಿಮ್ಮ ಫ್ರೆಂಡ್ಸ್ ತಮ್ಮದೇ ವ್ಯಾಪಾರ ಶುರು ಮಾಡಿದ್ದಾರೆ, ನಿಮಗೂ ಅದೇ ಆಸೆಯಾ? ಕಡಿಮೆ ಬಂಡವಾಳ ಹೂಡಿಕೆ ಮಾಡಿ ಇಂದು ಹೆಚ್ಚು ಲಾಭ ಮಾಡಿಕೊಳ್ಳಬಬಹುದು. ಇತ್ತೀಚಿನ ದಿನಗಳಲ್ಲಿ ಅಂದ್ರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಟ್ರೆಂಡಿಂಗ್‌ನಲ್ಲಿರುವ ಕೆಲ ವ್ಯವಹಾರಗಳಿವೆ. ಹಾಗಿದ್ರೆ ನಿಮಗಾಗಿ ವ್ಯಾಪಾರ ಶುರು ಮಾಡಲು ಕೆಲವು ಸಲಹೆಗಳು ಇಲ್ಲಿವೆ.

ಆಟೋಮೊಬೈಲ್ ಬ್ಯುಸಿನೆಸ್

ಮೊದಲು ಆಟೋಮೊಬೈಲ್ ಬ್ಯುಸಿನೆಸ್ ಬಗ್ಗೆ ತಿಳಿದುಕೊಳ್ಳೋಣ. ಬೈಕ್, ಸ್ಕೂಟರ್ ರಿಪೇರಿಗೆ ಶೋ ರೂಮ್‌ನಲ್ಲಿ ತುಂಬಾ ಖರ್ಚಾಗುತ್ತದೆ. ನೀವೇ ಈ ಕೆಲಸ ಕಲಿತುಕೊಂಡ್ರೆ ಹೇಗೆ? ಕೆಲಸ ಕಲಿತುಕೊಂಡು ಹೋಮ್ ಸರ್ವಿಸ್ ಕೊಡಬಹುದು ಅಥವಾ ನಿಮ್ಮ ಏರಿಯಾದಲ್ಲಿ ರಿಪೇರಿಂಗ್ ಅಂಗಡಿ ಶುರು ಮಾಡಬಹುದು. ಬೈಕ್, ಸ್ಕೂಟರ್ ಜೊತೆಗೆ ಮೊಬೈಲ್ ರಿಪೇರಿಂಗ್ ಟ್ರೈನಿಂಗ್ ಕೂಡ ತೆಗೆದುಕೊಳ್ಳಬಹುದು.

ಫುಡ್ ಹೋಮ್ ಡೆಲಿವರಿ ಬ್ಯುಸಿನೆಸ್ ಐಡಿಯಾ

ಇತ್ತೀಚಿನ ದಿನಗಳಲ್ಲಿ ಫುಡ್ ಹೋಮ್ ಡೆಲಿವರಿ ಬ್ಯುಸಿನೆಸ್ ತುಂಬಾ ಚಾಲ್ತಿಯಲ್ಲಿದೆ. ನೀವು ಕೂಡ ಈ ವ್ಯಾಪಾರ ಶುರು ಮಾಡಬಹುದು. ಮನೆಯಲ್ಲೇ ಕೂತು ಈ ವ್ಯಾಪಾರ ಶುರು ಮಾಡಬಹುದು. ಅಡುಗೆಯಲ್ಲಿ ನಿಪುಣರಾಗಿರಬೇಕಾಗಿಲ್ಲ, ದಿನನಿತ್ಯದ ಅಡುಗೆಯ ಪರಿಚಯ ಇದ್ರೆ ಸಾಕು. ಇಂದಿನ ಈ ಬ್ಯುಸಿ ಲೈಫ್‌ನಲ್ಲಿ ಈ ವ್ಯಾಪಾರಕ್ಕೆ ಬೇಡಿಕೆ ತುಂಬಾ ಇದೆ. ಆಫೀಸ್ ಏರಿಯಾದಲ್ಲಿ ಟಿಫಿನ್ ಅಥವಾ ಲಂಚ್ ಸರ್ವಿಸ್ ಶುರು ಮಾಡಿದ್ರೆ ಚೆನ್ನಾಗಿ ನಡೆಯುತ್ತೆ ಮತ್ತು ಲಾಭವೂ ಸಹ ಹೆಚ್ಚಾಗುತ್ತದೆ.

ಎಲೆಕ್ಟ್ರಿಷಿಯನ್ ಡೋರ್‌ಸ್ಟೆಪ್ ಸರ್ವಿಸ್

ಡೋರ್‌ಸ್ಟೆಪ್ ಸರ್ವಿಸ್‌ಗೂ ಇತ್ತೀಚೆಗೆ ಬೇಡಿಕೆ ಹೆಚ್ಚಿದೆ. ಮನೆಯಲ್ಲಿ ಏನಾದ್ರೂ ಎಲೆಕ್ಟ್ರಾನಿಕ್ ವಸ್ತುಗಳು ಹಾಳಾದ್ರೆ ಎಲೆಕ್ಟ್ರಿಷಿಯನ್ ಬೇಕಾಗುತ್ತೆ. ಹಾಗಾಗಿ ಎಲೆಕ್ಟ್ರಿಷಿಯನ್ ಕೆಲಸ ಕಲಿತುಕೊಂಡು ಡೋರ್‌ಸ್ಟೆಪ್ ಸರ್ವಿಸ್ ಕೊಡಬಹುದು. ಇಂಟರ್ನೆಟ್ ಮೂಲಕ ಬ್ಲಾಗಿಂಗ್ ಕೂಡ ಮಾಡಬಹುದು. ಬ್ಲಾಗಿಂಗ್ ಮೂಲಕ ವ್ಯಾಪಾರ ಕೂಡ ಮಾಡಬಹುದು. ಕಡಿಮೆ ಬಂಡವಾಳ ಹೂಡಿ ಬ್ಲಾಗಿಂಗ್ ಬ್ಯುಸಿನೆಸ್ ಶುರು ಮಾಡಬಹುದು.

ಮಕ್ಕಳಿಗೆ ಪ್ರೈವೇಟ್ ಟ್ಯೂಷನ್

ಅದೇ ರೀತಿ ಪ್ರೈವೇಟ್ ಟ್ಯೂಷನ್ ಕೂಡ ಮಾಡಬಹುದು. ಇತ್ತೀಚೆಗೆ ಮಕ್ಕಳಿಗೆ ಶಾಲೆಗೆ ಸೇರಿಸುವ ಮುನ್ನವೇ ಟ್ಯೂಷನ್ ಹುಡುಕುತ್ತಾರೆ. ಕೆಲವು ಪೋಷಕರು ಕೋಚಿಂಗ್ ಸೆಂಟರ್ ಇಷ್ಟಪಡುವುದಿಲ್ಲ. ಅಂಥವರಿಗೆ ಪ್ರೈವೇಟ್ ಟ್ಯೂಷನ್ ಒಳ್ಳೆಯ ಆಯ್ಕೆ. ಹೀಗೆ ಟೀಚಿಂಗ್ ಮೂಲಕ ಹಣ ಗಳಿಸಬಹುದು. ಈ ಟ್ಯೂಷನ್ ಮೂಲಕ ಗಂಟೆಗಳ ಲೆಕ್ಕದಲ್ಲಿ ಹಣ ಸಂಪಾದಿಸಬಹುದು. ದಿನದಲ್ಲಿ ಕೆಲವೇ ಗಂಟೆ ಕೆಲಸ ಮಾಡಿ ತಿಂಗಳಿಗೆ 20 ರಿಂದ 30 ಸಾವಿರ ರೂಪಾಯಿ ಹಣವನ್ನು ಸಂಪಾದಿಸಬಹುದಾಗಿದೆ.

ಪೆಟ್ ಕೇರ್ ಸರ್ವಿಸ್

ಇತ್ತೀಚೆಗೆ ಬಹಳಷ್ಟು ಮನೆಗಳಲ್ಲಿ ಪೆಟ್ ಇರುತ್ತೆ. ಮನೆಯವರು ಕೆಲವು ದಿನಗಳ ಕಾಲ ಹೊರಗೆ ಹೋದಾಗ ಪೆಟ್‌ಗಳನ್ನು ನೋಡಿಕೊಳ್ಳಲು ಪೆಟ್ ಕೇರ್ ಸರ್ವಿಸ್ ಬೇಕಾಗುತ್ತೆ. ನೀವು ಪೆಟ್‌ಗಳಿಗೆ ಹೆದರದಿದ್ದರೆ ಈ ವ್ಯಾಪಾರ ನಿಮಗೆ ಸೂಕ್ತ. ಸೋಶಿಯಲ್ ಮೀಡಿಯಾದಲ್ಲಿ ಹೋಮ್‌ಮೇಡ್ ಕೇಕ್‌ಗಳನ್ನು ನೋಡಿರಬಹುದು. ಕೇಕ್ ತಯಾರಿಸುವುದನ್ನು ಕಲಿತು ಯಾವುದೇ ಸಮಾರಂಭಗಳಿಗೆ ಅಥವಾ ಆರ್ಡರ್ ಮೇರೆಗೆ ಕೇಕ್ ಡೆಲಿವರಿ ಮಾಡಬಹುದು. ಹೋಮ್‌ಮೇಡ್ ಕೇಕ್ ಡೆಲಿವರಿ ಲಾಭದಾಯಕ ವ್ಯಾಪಾರ. ನಿಮ್ಮ ಕೇಕ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕರೆ ಅಂಗಡಿಗಳು ನಿಮ್ಮಿಂದ ಕೇಕ್ ಖರೀದಿಸಬಹುದು.

ಬಟ್ಟೆ ಮತ್ತು ಆಭರಣಗಳ ವ್ಯಾಪಾರ

ಫ್ಯಾಷನ್ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಬಟ್ಟೆ ವ್ಯಾಪಾರ ಶುರು ಮಾಡಬಹುದು. ನೀವು ಫ್ಯಾಷನ್ ಡಿಸೈನರ್ ಆಗಿದ್ದರೆ ಇನ್ನೂ ಒಳ್ಳೆಯದು. ನೀವೇ ಬಟ್ಟೆಗಳನ್ನು ಡಿಸೈನ್ ಮಾಡಿ ಸೋಶಿಯಲ್ ಮೀಡಿಯಾ ಮೂಲಕ ಮಾರಾಟ ಮಾಡಬಹುದು. ಅದೇ ರೀತಿ ಆಭರಣಗಳ ವ್ಯಾಪಾರ ಕೂಡ ಮಾಡಬಹುದು. ಆಭರಣ ತಯಾರಿಸುವುದನ್ನು ಕಲಿತು ವ್ಯಾಪಾರ ಮಾಡಬಹುದು ಅಥವಾ ಹೋಲ್‌ಸೇಲ್‌ನಲ್ಲಿ ಆಭರಣಗಳನ್ನು ಖರೀದಿಸಿ ಮಾರಾಟ ಮಾಡಬಹುದು.

ಸಿಸಿಟಿವಿ, ಫ್ರಿಡ್ಜ್, ಕಂಪ್ಯೂಟರ್ ಸೇರಿದಂತೆ ಇನ್ನಿತರ ಉಪಕರಣಗಳ ಸರ್ವಿಸ್

CCTV ಸರ್ವಿಸ್‌ಗೂ ಬೇಡಿಕೆ ಹೆಚ್ಚುತ್ತಿದೆ. ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೆ ಎಲ್ಲೆಡೆ ದೊಡ್ಡ ದೊಡ್ಡ ಕಾಂಪ್ಲೆಕ್ಸ್‌ಗಳು ನಿರ್ಮಾಣವಾಗುತ್ತಿವೆ. ಅಲ್ಲಿ CCTV ಅಳವಡಿಸಲಾಗುತ್ತದೆ. ಅವುಗಳಿಗೆ ಸರ್ವಿಸ್ ಕೂಡ ಬೇಕಾಗುತ್ತದೆ. CCTV ಸರ್ವಿಸ್ ಕಲಿತು ಸಣ್ಣದಾಗಿ ವ್ಯಾಪಾರ ಶುರು ಮಾಡಬಹುದು. ಅದೇ ರೀತಿ ಫ್ರಿಡ್ಜ್, ಟಿವಿ, ವಾಷಿಂಗ್ ಮೆಷಿನ್, ಮೈಕ್ರೋವೇವ್, ಎಸಿ ರಿಪೇರಿ ಕೆಲಸ ಕಲಿತು ಸಣ್ಣ ವ್ಯಾಪಾರ ಶುರು ಮಾಡಬಹುದು.

ಲ್ಯಾಪ್‌ಟಾಪ್, ಕಂಪ್ಯೂಟರ್ ಹಳೆಯದಾದಾಗ ಅದನ್ನು ರಿಪೇರಿ ಮಾಡಲು ಕಂಪ್ಯೂಟರ್ ಸರ್ವಿಸ್ ಬಗ್ಗೆ ತಿಳಿದಿರಬೇಕು. ಲಾಕ್‌ಡೌನ್ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ ಆದ್ದರಿಂದ ಈ ವ್ಯಾಪಾರಕ್ಕೆ ಬೇಡಿಕೆ ಹೆಚ್ಚಿದೆ. ಒಬ್ಬಂಟಿಯಾಗಿ ವ್ಯಾಪಾರ ಮಾಡುವವರಿಗೆ ಅಕೌಂಟೆಂಟ್ ಬೇಕಾಗುತ್ತದೆ. ಹಣ ನಿರ್ವಹಣೆ ವ್ಯಾಪಾರದ ಪ್ರಮುಖ ಅಂಶ. ಒಬ್ಬ ಚತುರ ಅಕೌಂಟೆಂಟ್ ಇದನ್ನು ಮಾಡಬಲ್ಲ. ಈ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದ್ದರೆ ಅಕೌಂಟಿಂಗ್ ವ್ಯಾಪಾರ ನಿಮಗೆ ಸೂಕ್ತ.

Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.