Business Idea: ಬ್ಯುಸಿನೆಸ್ ಶುರು ಮಾಡ್ಬೇಕು, ಆದ್ರೆ ಯಾವ್ದು ಗೊತ್ತಾಗ್ತಿಲ್ಲ ಎನ್ನುವವರಿಗೆ ಇಲ್ಲೊಂದು ಬೆಸ್ಟ್ ಐಡಿಯಾ ಇದೆ. ಭಾರತದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇರೋ ಈ ವಸ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡಿ.
ಭಾರತ (India) ಹಬ್ಬಗಳ ದೇಶ. ತಿಂಗಳಿಗೆ ನಾಲ್ಕೈದು ಹಬ್ಬ (Festival)ವನ್ನು ಭಾರತೀಯರು ಆಚರಿಸ್ತಾರೆ. ಹಬ್ಬಗಳು ಹತ್ತಿರ ಬರ್ತಿದ್ದಂತೆ ಮಾರ್ಕೆಟ್ ನಲ್ಲಿ ಜನವೋ ಜನ. ಎಲ್ಲಿ ನೋಡಿದ್ರೂ ಹೂ, ಹಣ್ಣು, ಅಗರಬತ್ತಿ, ಪೂಜಾ ಸಾಮಗ್ರಿಗಳು ರಾರಾಜಿಸುತ್ವೆ. ಬರೀ ಹಬ್ಬದ ದಿನ ಮಾತ್ರ ಅಲ್ಲ, ಈ ಪೂಜೆಯ ವಸ್ತುಗಳಿಗೆ ಪ್ರತಿ ದಿನ ಬೇಡಿಕೆ ಇರುತ್ತೆ. ಮನೆ, ದೇವಸ್ಥಾನಗಳಲ್ಲಿ ಪ್ರತಿ ದಿನ ದೇವರ ಪೂಜೆ ನಡೆಯೋದ್ರಿಂದ ಜನರು ಪ್ರತಿ ದಿನ ಹೂ, ಅಗರಬತ್ತಿ, ಎಣ್ಣೆ, ಹೂಬತ್ತಿ, ಕರ್ಪೂರ ಸೇರಿದಂತೆ ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡ್ತಿರುತ್ತಾರೆ. ವ್ಯಾಪಾರ ಶುರು ಮಾಡ್ಬೇಕು ಎನ್ನುವವರಿಗೆ ಪೂಜೆಗೆ ಸಂಬಂದಿಸಿದ ಬ್ಯುಸಿನೆಸ್ ದಿ ಬೆಸ್ಟ್. ಓದು ಮುಗಿಸಿ, ಬ್ಯುಸಿನೆಸ್ (Business) ಮಾಡ್ಬೇಕು ಎನ್ನುವ ಪ್ಲಾನ್ ನಲ್ಲಿ ನೀವಿದ್ರೆ ಇದಕ್ಕೆ ಸಂಬಂಧಿಸಿದ ಸ್ಟಾರ್ಟ್ ಅಪ್ ಶುರು ಮಾಡ್ಬಹುದು. ಭಾರತದಲ್ಲಿ ಸದ್ಯ ಬೆಳೆಯುತ್ತಿರುವ ಮಾರ್ಕೆಟ್ ನಲ್ಲಿ ಇದೂ ಒಂದು. ಈ ವ್ಯಾಪಾರವನ್ನು ಗೋಲ್ಡ್ ಮೈನ್ ಅಂತ ತಜ್ಞರು ಕರೀತಿದ್ದಾರೆ.
ಭಾರತದಲ್ಲಿ ಪೂಜಾ ಬ್ಯುಸಿನೆಸ್ (Pooja Business) 15 ಸಾವಿರ ಕೋಟಿ ಮಾರ್ಕೆಟ್ ಹೊಂದಿದೆ. ಆದ್ರೂ ಇದಕ್ಕೊಂದು ಸೂತ್ರದಾರನಿಲ್ಲ. ಪೂಜಾ ಸಾಮಗ್ರಿಗಳ ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಅಗರಬತ್ತಿ 8000 ಕೋಟಿ ದೇಶಿ ಮಾರ್ಕೆಟ್ ಹೊಂದಿದೆ. ಆದ್ರೆ ಇಲ್ಲೂ ಯಾರ ಪ್ರಾಬಲ್ಯ ಇಲ್ಲ. ಸ್ಥಳೀಯ, ಬ್ರ್ಯಾಂಡ್ ಇಲ್ಲದ ಅಗರಬತ್ತಿ ಹೆಚ್ಚು ಮಾರಾಟ ಆಗ್ತಿದೆ. ಈ ಅಗರಬತ್ತಿ ಮಾರ್ಕೆಟ್ ವಾರ್ಷಿಕ ಶೇಕಡಾ 8ರಷ್ಟು ಬೆಳವಣಿಗೆ ಕಾಣ್ತಿದೆ.
ಭಾರತವು ಯುಎಇ, ಯುಎಸ್ ಮತ್ತು ಯುರೋಪ್ನಂತಹ ದೇಶಗಳಿಗೆ ನೂರಾರು ಕೋಟಿ ಮೌಲ್ಯದ ಪೂಜೆಗೆ ಸಂಬಂಧಿಸಿದ ಉತ್ಪನ್ನಗಳನ್ನು ರಫ್ತು ಮಾಡುತ್ತದೆ. ಧೂಪದ್ರವ್ಯವನ್ನು ಮೀರಿ, ದೀಪದ ಎಣ್ಣೆಗಳು, ತುಪ್ಪ, ಕಪೂರ ಮತ್ತು ದೇವಾಲಯದ ಹೂವಿನ ತ್ಯಾಜ್ಯದ ಮರುಬಳಕೆಯಲ್ಲಿಯೂ ಕೋಟ್ಯಾಂತರ ರೂಪಾಯಿ ಇದೆ. ಬರೀ ತುಪ್ಪದ ಮಾರ್ಕೆಟ್ 3 ಲಕ್ಷ ಕೋಟಿ ವ್ಯವಹಾರ ನಡೆಸ್ತಿದೆ ಅಂದ್ರೆ ನೀವು ನಂಬ್ಲೇಬೇಕು.
ಪ್ರತಿ ದಿನನ ಭಾರತೀಯ ಮನೆಯಲ್ಲಿ ದೀಪದ ಎಣ್ಣೆ, ಅಗರಬತ್ತಿ, ಹೂಗಳನ್ನು ಖರೀದಿ ಮಾಡ್ತಿದ್ದಾರೆ. ಅದ್ರೆ ಇದ್ಯಾವುದಕ್ಕೂ ಸೂಕ್ತ ಬ್ರ್ಯಾಂಡ್ ಇಲ್ಲ. ತುಪ್ಪದಿಂದ ಹಿಡಿದು ಅಗರಬತ್ತಿಯವರೆಗೆ ಎಲ್ಲವೂ ಲೋಕಲ್ ಬ್ರ್ಯಾಂಡ್ ನಲ್ಲಿಯೇ ವ್ಯವಹಾರ ನಡೆಯುತ್ತಿದೆ. ಪ್ರತಿ ದಿನ ದೇವಸ್ಥಾನಗಳಲ್ಲಿ ನೂರಾರು ಟನ್ ಹೂ ಕಸಕ್ಕೆ ಸೇರ್ತಿದೆ. ಅದನ್ನು ಮರುಬಳಕೆ ಮಾಡಿ ಕೆಲ ಕಂಪನಿ ಅಗರಬತ್ತಿ ಸೇರಿದಂತೆ ಬೇರೆ ವಸ್ತುಗಳ ತಯಾರಿ ಆರಂಭಿಸಿದೆ. ಈ ಕ್ಷೇತ್ರದಲ್ಲೂ ಉದ್ಯೋಗವಕಾಶಕ್ಕೆ ಈಗ್ಲೂ ಅವಕಾಶವಿದೆ. ನೀವು ಒಂದು ಬ್ರ್ಯಾಂಡ್ ಮೂಲಕ ಈ ಮಾರುಕಟ್ಟೆ ಪ್ರವೇಶಕ್ಕೆ ಪ್ಲಾನ್ ಮಾಡ್ಬಹುದು. ಇದು ಕೇವಲ ವ್ಯವಹಾರವಲ್ಲ. ಇದು ಭಾರತೀಯ ಸಂಸ್ಕೃತಿ.
ನೀವು ಗ್ರಂಥಿಗೆ ಅಂಗಡಿ ಶುರು ಮಾಡಿ ಲಕ್ಷಾಂತರ ಗಳಿಸಬಹುದು. ಇಲ್ಲವೆ ಬ್ರ್ಯಾಂಡ್ ಹೆಸರಿನಲ್ಲಿ ಪೂಜೆಗೆ ಸಂಬಂಧಿಸಿದ ಎಲ್ಲ ಸಾಮಗ್ರಿಗಳನ್ನು ಮಾರಾಟ ಮಾಡ್ಬಹುದು. ಚಿಕ್ಕ ವ್ಯವಹಾರ ಸಾಕು ಎನ್ನುವವರು ಹೂ ಮಾರಾಟ, ಅಗರಬತ್ತಿ ಉತ್ಪಾದನೆ, ಕರ್ಪೂರ, ಎಣ್ಣೆ ಮಾರಾಟ, ಹೂ ಬತ್ತಿ ಮಾರಾಟ ಸೇರಿದಂತೆ ಸಣ್ಣ ಪ್ರಮಾಣದಲ್ಲಿ ಬ್ಯುಸಿನೆಸ್ ಶುರು ಮಾಡಲೂ ಇಲ್ಲಿ ಅವಕಾಶವಿದೆ. ಜೆನ್ ಜೀಗಳು ಈ ಕ್ಷೇತ್ರಕ್ಕೆ ಆರಾಮವಾಗಿ ಪ್ರವೇಶ ಮಾಡ್ಬಹುದು. ಹೊಸ ಆಲೋಚನೆ, ಐಡಿಯಾ ಮೂಲಕ ಭಾರತೀಯ ಸಂಪ್ರದಾಯವನ್ನು ಉಳಿಸ್ತಾ, ಕೈತುಂಬ ಹಣ ಸಂಪಾದನೆ ಮಾಡ್ಬಹುದು.
