ಟ್ರಾಫಿಕ್ ದಂಡ ವಸೂಲಿಗೆ ಬೆಂಗಳೂರು ಪೊಲೀಸ್ ಬಿಗ್ ಆಫರ್ ನೀಡಿದೆ. ಇದರ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸರು ಒಂದೇ ದಿನದಲ್ಲಿ ದಾಖಲೆ ಬರೆದಿದ್ದಾರೆ. 

ಬೆಂಗಳೂರು (ಸೆ.02) ಬೆಂಗಳೂರು ಟ್ರಾಫಿಕ್ ದಂಡ ವಸೂಲಿಯಲ್ಲಿ ಬಿಗ್ ಆಫರ್ ನೀಡಿದ್ದಾರೆ. ಟ್ರಾಫಿಕ್ ದಂಡ ಈಗ ಅರ್ಧ ಪಾವತಿಸದರೇ ಸಾಕು. ಹೀಗಾಗಿ ಹಲವರು ದಂಡ ಕಟ್ಟಲು ಮುಂದಾಗಿದ್ದಾರೆ. ಅರ್ಧ ಪಾವತಿಸಿ ದಂಡ ಕ್ಲಿಯರ್ ಮಾಡಲು ಉತ್ತಮ ಅವಕಾಶ ಮಾಡಲಾಗಿದೆ. ಇದರ ಬೆನ್ನಲ್ಲೇ ಕಬ್ಬನ್ ಪಾರ್ಕ್ ಪೊಲೀಸರು ಒಂದೇ ದಿನದಲ್ಲಿ ದಾಖಲೆ ಬರೆದಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರು ಒಂದೇ ದಿನದಲ್ಲಿ 6 ಲಕ್ಷದ 28 ಸಾವಿರ ದಂಡ ವಸೂಲಿ ಮಾಡಲಾಗಿದೆ. ಈ ಪೈಕಿ ಎಸ್ಐ ಜಯಣ್ಣ 2 ಲಕ್ಷ ರೂಪಾಯಿಗೂ ಅಧಿಕ ದಂಡ ವಸೂಲಿ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಒಂದೇ ದಿನದಲ್ಲಿ ಒಂದು ಠಾಣೆಯಲ್ಲಿ 2190ಕೇಸ್ ಹಾಕಿ ದಂಡ ವಸೂಲಿ ಮಾಡಲಾಗಿದೆ. ಬೆಂಗಳೂರಲ್ಲಿ ಒಂದೇ ದಿನ 2 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಲಾಗಿದೆ. ಕಬ್ಬನ್ ಪಾರ್ಕ್ ಸಂಚಾರಿ ಠಾಣೆಯ ಎಎಸ್ಐ ಜಯಣ್ಣರಿಂದ ದಂಡ ವಸೂಲಿಗೆ ಪೊಲೀಸ್ ಅದಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಒಂದೇ ದಿನ 2.20.250 ಹಣ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. 776 ಐಎಂಇ ಪ್ರಕರಣಗಳಲ್ಲಿ ದಂಡ ವಸೂಲಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಟ್ರಾಫಿಕ್ ಫೈನ್‌ ಕಟ್ಟಲು 50 % ಡಿಸ್ಕೌಂಟ್

ಬೆಂಗಳೂರು ಟ್ರಾಫಿಕ್ ದಂಡ ಕಟ್ಟಲು ಭರ್ಜರಿ 50 ಪರ್ಸೆಂಟ್ ಡಿಸ್ಕೌಂಟ್ ನೀಡಲಾಗಿದೆ. ಡಿಸ್ಕೌಂಟ್ ಗೆ ವಾಹನ ಸವಾರರಿಂದ ಭರ್ಜರಿ‌ ರೆಸ್ಪಾನ್ಸ್ ಸಿಕ್ಕಿದೆ. ಆಫರ್ ಶುರುವಾಗಿ 1 ವಾರದಲ್ಲಿ ₹21 ಕೋಟಿ 86 ಸಾವಿರದ 700 ರೂಪಾಯಿ ಬಾಕಿ ದಂಡ ಪಾವತಿ ಮಾಡಲಾಗಿದೆ. ಇದೀಗ ಪ್ರತಿ ದಿನ ದಾಖಲೆ ನಿರ್ಮಾಣವಾಗುತ್ತಿದೆ. 7,43,160 ಬಾಕಿ ಕೇಸ್‌ಗಳಿಗೆ ಮಾಲೀಕರು ದಂಡ ಪಾವತಿ ಮಾಡಿದ್ದಾರೆ. ಆಗಸ್ಟ್ 23ರಿಂದ ರಿಯಾಯಿತಿ ನೀಡಲಾಗಿದೆ. ಸೆಪ್ಟೆಂಬರ್ 9ರ ವರೆಗೆ ಬಾಕಿ ದಂಡ ಪಾವತಿಸಲು 50% ಆಫರ್ ನೀಡಲಾಗಿದೆ.