Bengaluru Cricket Coach Matthew ತನ್ನ ಮೊಬೈಲ್‌ನಲ್ಲಿ 2500ಕ್ಕೂ ಅಧಿಕ ಮಹಿಳೆಯರ ಅಶ್ಲೀಲ ವಿಡಿಯೋಗಳಿವೆ ಎಂಬ ಆರೋಪದ ಬಗ್ಗೆ ಬೆಂಗಳೂರಿನ ಕ್ರಿಕೆಟ್ ಕೋಚ್ ಮ್ಯಾಥ್ಯೂ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು (ಸೆ.27): ಮೊಬೈಲ್‌ನಲ್ಲಿ 2500ಕ್ಕಿಂತ ಅಧಿಕ ಮಹಿಳೆಯರ ಜೊತೆ ನನ್ನ ವಿಡಿಯೋ ಇರುವ ವಿಚಾರ ನನಗೆ ಗೊತ್ತಿಲ್ಲ. AI , Chat GPT ವಿಡಿಯೋ ಇರಬಹುದು. ವಿಡಿಯೋ ಬಗ್ಗೆ ಅವರನ್ನೇ ಕೇಳಬೇಕು. ನನಗೆ ವಿಡಿಯೋಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಬೆಂಗಳೂರಿನ ಕಾಮುಕ ಕ್ರಿಕೆಟ್ ಕೋಚ್ ಮ್ಯಾಥ್ಯೂ ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ವಿವಾಹಿತಿ ಮಹಿಳೆಯನ್ನು ಗರ್ಭಿಣಿ ಮಾಡಿ ನಾಪತ್ತೆಯಾಗಿದ್ದ ಕ್ರಿಕೆಟ್‌ಕೋಚ್ ಮ್ಯಾಥ್ಯೂ ವಿರುದ್ಧ ಮೀರಾ ಎನ್ನುವ ಮಹಿಳೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ನೀಡಿದ್ದ ವೇಳೆ ತಮ್ಮ ವೈಯಕ್ತಿಕ ದೂರಿನೊಂದಿಗೆ ಮ್ಯಾಥ್ಯೂ ಅವರ ಮೊಬೈಲ್‌ನಲ್ಲಿ 2500ಕ್ಕೂ ಅಧಿಕ ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳಿವೆ ಎನ್ನುವ ಮೂಲಕ ಬಾಂಬ್ ಎಸೆದಿದ್ದರು. ಇದು ಪ್ರಜ್ವಲ್ ರೇವಣ್ಣ ರೀತಿಯ ಇನ್ನೊಂದು ಕೇಸ್ ಎನ್ನುವ ವಿಚಾರಕ್ಕೂ ಸಾಕಷ್ಟು ಕುತೂಹಲ ಮೂಡಿಸಿತ್ತು.
ದೂರು ಕೊಟ್ಟ ಬಳಿಕ ಮಾಧ್ಯಮದ ಎದುರು ಮಾತನಾಡಿದ್ದ ಮೀರಾ, ಆತನ ಮೊಬೈಲ್‌ನಲ್ಲಿದ್ದ ವಿಡಿಯೋಗಳ ಪೈಕಿ ಒಬ್ಬಳು ಮಾತ್ರ ಮೈನರ್ ಮತ್ತೆಲ್ಲವೂ ಆಂಟಿಯರ ಜೊತೆಗೆ ಇರುವ ವಿಡಿಯೋ ಎಂದಿದ್ದರು. ಒಮ್ಮೆ ಮೈಸೂರಿಗೆ ಹೋಗುವಾಗ ಅವರ ತಮ್ಮ ಒಂದು ಮೊಬೈಲ್‌ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಈ ವೇಳೆ ಅವರ ಮೊಬೈಲ್‌ನಲ್ಲಿದ್ದ ವಿಡಿಯೋಗಳನ್ನು ನೋಡಿ ನಾನು ಪ್ರಶ್ನೆ ಮಾಡಿದ್ದೆ. ಈ ವೇಳೆ ಮ್ಯಾಥ್ಯೂ, ಮೊಬೈಲ್ ಮುಟ್ಟುವ ಹಕ್ಕು ನಿನಗಿಲ್ಲ ಎಂದಿದ್ದರು. ಎರಡು ದಿನಗಳ ಬಳಿಕ ಮೈಸೂರಿನಿಂದ ವಾಪಾಸ್ ಬಂದು ಆ ವಿಡಿಯೋಗಳನ್ನು ಡಿಲೀಟ್ ಮಾಡಿದ್ದರು. ಆದರೆ, ನಾನು ಕೆಲವೊಂದು ವಿಡಿಯೋಗಳನ್ನು ತೆಗೆದಿಟ್ಟುಕೊಂಡದ್ದೆ' ಎಂದಿದ್ದರು.
ಯಾವ ವಿಡಿಯೋ ಬಗ್ಗೆಯೂ ನನಗೆ ಗೊತ್ತಿಲ್ಲ
ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾತನಾಡಿದ ಮ್ಯಾಥ್ಯೂ, 'ನನಗೆ ಮೀರಾ ಅವರು ಮಗಳ ಮೂಲಕ ಪರಿಚಯವಾಗಿದ್ದರು. ಮೀರಾ ಮಗಳು ಓದುತ್ತಿದ್ದ ಶಾಲೆಯಲ್ಲಿ ನಾನು ಪಿಟಿ ಟೀಚರ್ ಆಗಿದ್ದೆ. ಆಗ ಮೀರಾ ಪರಿಚಯ ಆಯ್ತು, ಆಕೆಯೇ ನನ್ನ ಫೋನ್ ನಂಬರ್ ತೆಗೆದುಕೊಂಡಿದ್ದಳು. ಮೊದಲು ಸ್ಪೋರ್ಟ್ ವಿಚಾರಕ್ಕೆ ಮಾತು ಶುರು ಆಯ್ತು. 2 ಸಾವಿರ ಕೇಳಿದ್ದರು. ಮೊದಲು ಕೊಡಲಿಲ್ಲ ಆಮೇಲೆ ಕೊಟ್ಟೆ. ಗಂಡ ಟಾರ್ಚರ್ ಕೊಡುತ್ತಾನೆ ಎಂದು ಮೀರಾ ಮಾತು ಶುರು ಮಾಡಿದ್ದಳು. ಗಂಡ ಟಾರ್ಚರ್ ಆತನನ್ನು ಬಿಟ್ಟು ಬಂದಿದಿನಿ ನಂಗೆ ರೂಮ್ ಬೇಕು ಎಂದಿದ್ದರು. ಸಹಾಯ ಮಾಡಿದೆ.. ಆಮೇಲೆ ಮನೆಯಲ್ಲಿ ಇರು ಎಂದಿದ್ದರು. ನಾನು ಇರಲು ಆರಂಭಿಸಿದೆ ಎಂದು ಹೇಳಿದ್ದಾರ.
'ನನ್ನ ಮದುವೆ ಆಗುವಂತೆ ಪೀಡಿಸುತ್ತಾ ಇದ್ದರು. ಮದುವೆ ಆಗಿದ್ದು ನಿಜ, ಒಟ್ಟಿಗೆ ಇದ್ದಿದ್ದು ನಿಜ. ಯಾವುದೇ ವಿಡಿಯೋ ವಿಚಾರ ನನಗೆ ಗೊತ್ತಿಲ್ಲ. ನನ್ನ ಫೋನ್ ಅನ್ನು ನಾನು ತೆಗೆದುಕೊಂಡು ಹೋಗಿದ್ದೆ. ಜಮೀನು ವಿಚಾರಕ್ಕೆ ಊರಿಗೆ ಹೋಗಿದ್ದೆ. ಈಗ ಕೇಸ್ ಏನಿದೆ ಅದನ್ನು ನಾನು ಎದುರಿಸುತ್ತೇನೆ' ಎಂದಿದ್ದಾರೆ.
