ಇಷ್ಟು ದಿನ ಬಿಬಿಎಂಪಿ ಎಂದು ಅಲೆದಾಡಿದ ಮಂದಿಗೆ ಬಿಬಿಎಂಪಿ ಹೆಸರು ಇನ್ನು ನೆನಪು ಮಾತ್ರ. ಇದೀಗ ಗ್ರೇಟರ್ ಬೆಂಗಳೂರು ಎಂದು ನಾಮಪಲಕ ಅಳವಡಿಸಲಾಗಿದೆ.

ಬೆಂಗಳೂರು (ಸೆ.02) ಬಿಬಿಎಂಪಿ ಇದೀಗ ನೆನಪು ಮಾತ್ರ. ಡಿಕೆ ಶಿವಕುಮಾರ್ ಕನಸಿನ ಬ್ರ್ಯಾಂಡ್ ಬೆಂಗಳೂರಿನ ಭಾಗವಾಗಿ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದೆ. ಬಿಬಿಎಂಪಿಗೆ ಗುಡ್ ಬೈ ಹೇಳಿರುವ ರಾಜ್ಯ ಸರ್ಕಾರ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ವಿಂಗಡಿಸಿ ಆಡಳಿತಕ್ಕೆ ಅನುಕೂಲಕ ವಾತಾವರಣ ನಿರ್ಮಾಣ ಮಾಡಲಾಗಿದೆ. ಇದರ ಬೆನ್ನಲ್ಲೇ ಬಿಬಿಎಂಪಿ ಕಚೇರಿ ನಾಫಮಲಕವೂ ಬದಲಾಗಿದೆ. ಇದೀಗ ಬಿಬಿಎಂಪಿ ಕಚೇರಿಯ ನಾಮಫಲಕವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಬದಲಾಯಿಸಲಾಗಿದೆ.

ಇಂದಿನಿಂದ ಜಿಬಿಎ ಆಡಳಿತ ಜಾರಿ ಹಿನ್ನೆಲೆಯಲ್ಲಿ ಬಿಬಿಎಂಪಿ ನಾಮಫಲಕ ಬದಲಾವಣೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದಿದ್ದ ನಾಮಫಲಕ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ಬದಲಾವಣೆ. ಕಾರ್ಪೋರೇಷನ್ ಸರ್ಕಲ್ ಬಳಿ ಇರುವ ಜಿಬಿಎ ಕೇಂದ್ರ ಕಚೇರಿ ಇದೀಗ ಹೊಸ ನಾಮಫಲಕದ ಮೂಲಕ ಕಂಗೊಳಿಸುತ್ತಿದೆ.

ಗ್ರೇಟರ್ ಬೆಂಗಳೂರು ಕುರಿತು ಡಿಕೆ ಶಿವಕುಮಾರ್ ಪ್ರತ್ರಿಕ್ರಿಯೆ

ಕ್ಷೇತ್ರ ಡೈವರ್ಟ್ ಬಗ್ಗೆ ಬಿಜೆಪಿ ಶಾಸಕರ ಅಪಸ್ವರ ವಿಚಾರದ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಎಲ್ಲಾ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಮ್ಮನೆ ನನ್ನನ್ನು ಬೈಯೋಕೆ ಮಾತನಾಡಿರಬಹುದು. ಆದರೆ ಎಲ್ಲಾ ಶಾಸಕರು ಬಹಳ ಸಂತಸದಿಂದ ಇದ್ದಾರೆ. ಯಾರಿಗೂ ಯಾವುದೇ ಅಸಮಾಧಾನ ಇಲ್ಲ. ನಿಮ್ಮ ಮುಂದೆ ಬೇಕಂತಲೇ ಬೇಸರ ಹೊರಹಾಕಬಹುದು ಎಂದು ಡಿಕೆ ಶಿವುಕಮಾರ್ ಹೇಳಿದ್ದಾರೆ.

ನಿಮ್ಮ ಮುಂದೆ ಬೇಕಂತಲೇ ಬೇಸರ ಹೊರಹಾಕಬಹದು. ನವೆಂಬರ್ 1 ರಂದು ವಾರ್ಡ್ ವಿಂಗಣೆ ಫೈನಲ್ ಆಗಲಿದೆ. ನವೆಂಬರ್ 31ಕ್ಕೆ ಮೀಸಲಾತಿ ವರ್ಗೀಕರಣ ಆಗಲಿದೆ. ಸಮಸ್ಯೆಗಳನ್ನು ನಾವು ಪರಿಹರಿಸಲಿದ್ದೇವೆ. ನೀರಿನ ಸಮಸ್ಯೆ ನೀರಿನ ಸಮಸ್ಯೆ ಬಿಡಬ್ಲ್ಯುಎಸ್ ಎಸ್ ಬಿಗೆ ಸೇರುತ್ತೆ.ಕಸ ಮಾಮೂಲಿ ಕಸ ಸಂಗ್ರಹದವರೇ ಮಾಡುತ್ತಾರೆ. ಇವರ ಜೊತೆ ಸಮನ್ವಯ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಾಡಲಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.