ಇದು ವಿಶ್ವದ ಅತೀ ಚಿಕ್ಕ ಕಾರು ಅಂದರೆ ಇತರ ಕಾರುಗಳಂತೆ ಗಾತ್ರವಲ್ಲ, ಈ ಕಾರಿನ ಅರ್ಧಭಾಗವೇ ಇಲ್ಲ. ಆದರೂ ಈ ಕಾರು ಚಲಿಸುತ್ತೆ, ಕಾರಿನೊಳಗೆ ಕುಳಿತುಕೊಳ್ಳಬಹುದು. ಈ ವಿಚಿತ್ರ ಕಾರು ಇದೀಗ ವಿಶ್ವದ ಗಮನ ಸೆಳೆದಿದೆ. ಇದರ ಹೆಸರು ಕೂಡ ವಿಚಿತ್ರವಾಗಿದೆ.
ತೈವಾನ್(ಮಾ.27) ಆಟೋಮೊಬೈಲ್ ಕ್ಷೇತ್ರದಲ್ಲಿ ತಂತ್ರಜ್ಞಾನ ಹೆಚ್ಚು ಬಳಕೆ ಮಾಡುವ ಮೂಲಕ ಆರಾಮದಾಯಕ ಪ್ರಯಾಣ, ಡ್ರೈವಿಂಗ್, ಹೆಚ್ಚು ಸುರಕ್ಷತೆ ಫೀಚರ್ಸ್ ನೀಡಲಾಗುತ್ತಿದೆ. ಇನ್ನು ಕಾರಿನ ವಿನ್ಯಾಸ, ಎಂಜಿನ್, ಶಬ್ದ ಎಲ್ಲೂ ಬದಲಾಗಿದೆ. ಆಕರ್ಷಕ ಡಿಸೈನ್ ಸೇರಿದಂತೆ ಹಲವು ವಿಶೇಷತೆಗಳು ಹೊಸ ಕಾರುಗಳಲ್ಲಿವೆ. ಪ್ರಯಾಣಿಕರ ಕಾರು ಕ್ಷೇತ್ರದಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆ ಹಲವರನ್ನು ಅಚ್ಚರಿಗೊಳಿಸಿದೆ. ಇದರ ಭಾಗವಾಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ಪ್ರಕಾರ ಈ ಕಾರನ್ನು ತೈವಾನ್ ದೇಶದ ಹೋಂಡಾ ಆಟೋಮೊಬೈಲ್ ಅಭಿವೃದ್ಧಿಪಡಿಸಿದೆ. ಇದು ವಿಶ್ವದ ಚಿಕ್ಕ ಕಾರು ಎಂದೇ ಗುರುತಿಸಿಕೊಂಡಿದೆ. ಅಂದರೆ ಈ ಕಾರಿನ ಅರ್ಧಭಾಗ ಮಾತ್ರ ಇದೆ. ಆದರೂ ಈ ಕಾರು ಸರಾಗವಾಗಿ ಚಲಿಸುತ್ತೆ, ಪ್ರಯಾಣಿಕರು ಕುಳಿತು ಪ್ರಯಾಣಿಸಬಹುದು. ಇದೀಗ ಈ ಕಾರಿನ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ದೊಡ್ಡ ಕಾರು ಆದರೂ ಗಾತ್ರ ಚಿಕ್ಕದು
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಇದು ತೈವಾನ್ ದೇಶದ ಹೋಂಡಾ ಅಟೋಮೊಬೈಲ್ ಈ ಕಾರನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳುತ್ತಿದೆ. ಹೋಂಡಾ ಸಿವಿಕ್ ಕಾರನ್ನು ಈ ರೀತಿ ಹೊಸ ವಿನ್ಯಾಸ ಹಾಗೂ ಎಲ್ಲರ ಗಮನಸೆಳೆಯುವತೆ ವಿನ್ಯಾಸ ಮಾಡಲಾಗಿದೆ ಎಂದು ವಿಡಿಯೋ ಹೇಳಿದೆ. ಈ ವಿಡಿಯೋ ಕುರಿತು ಸತ್ಯಾಸತ್ಯತೆ ಇನ್ನಷ್ಟೇ ಸ್ಪಷ್ಟವಾಗಿದೆ. ನೋಡಲು ಎಲ್ಲಾ ಕಾರುಗಳಂತೆ ಇದು ಕೂಡ ದೊಡ್ಡ ಕಾರು. ಆದರೆ ಹತ್ತಿ ಕುಳಿತು ಪ್ರಯಾಣ ಮಾಡಲು ಹೋದರೆ ಇದು ಸಣ್ಣ ಕಾರು. ಈ ಕಾರಿನಲ್ಲಿ ಹತ್ತಿ, ಇಳಿಯಲು ಸಾಹಸ ಮಾಡಬೇಕು.
ವಿಚಿತ್ರ ಹೆಸರಿನಿಂದ ಜನಪ್ರಿಯ
ಹಳದಿ ಬಣ್ಣದ ಈ ಕಾರು ರಸ್ತೆಯಲ್ಲಿ ನೋಡಿದರೆ ಬಾಳೇ ಹಣ್ಣಿನ ಸಿಪ್ಪೆ ಬಿದ್ದ ರೀತಿ ಇದೆ. ಹೀಗಾಗಿ ಈ ಕಾರಿನಗೆ ಬನಾನಾ ಪೀಲ್(ಬಾಳೆ ಹಣ್ಣಿನ ಸಿಪ್ಪೆ) ಎಂದು ನಾಮಕರಣ ಮಾಡಲಾಗಿದೆ. ರಸ್ತೆಯಲ್ಲಿ ಈ ಕಾರು ಹೇಗೆ ಕಾಣುತ್ತಿದೆ ಅನ್ನೋದರ ಮೇಲೆ ಹೆಸರು ಇಡಲಾಗಿದೆ. ಆದರೆ ವಿಚಿತ್ರ ಹೆಸರು ಈ ಕಾರಿನ ಜನಪ್ರಿಯತೆಯನ್ನು ಹೆಚ್ಚಿಸಿದೆ.
ಬಂಪರ್, ಗ್ರಿಲ್, ಚಕ್ರ ಯಾವುದು ಇಲ್ಲ
ಈ ಕಾರಿಗೆ ಬಂಪರ್ ಇಲ್ಲ, ಗ್ರಿಲ್ ಇಲ್ಲ, ಚಕ್ರ ಕಾಣಿಸುವುದು ಇಲ್ಲ. ಕಾರಿನ ಟಾಪ್ ಬಳಸಿಕೊಂಡು ಕಾರು ಡೆವಲಪ್ ಮಾಡಲಾಗಿದೆ. ಕಾರಿನ ಒಳಗೆ ಸಣ್ಣ ಚಕ್ರ ಬಳಸಲಾಗಿದೆ ಎಂದು ಈ ವಿಡಿಯೋ ಹೇಳುತ್ತಿದೆ. ಶಾಪಿಂಗ್ ಮಾಲ್ ಸೇರಿದಂತೆ ಹಲವೆಡೆ ಈ ಕಾರನ್ನು ಪ್ರದರ್ಶನಕ್ಕೆ ಇಡಲಾಗಿದೆ. ಚಲಿಸುತ್ತಿರುವ ಈ ಕಾರು ಹಲವರನ್ನು ಅಚ್ಚರಿಗೊಳಿಸಿದೆ. ಒಂದು ಕ್ಷಣ ಎಲ್ಲರೂ ಈ ಕಾರನ್ನೇ ದಿಟ್ಟಿಸಿ ನೋಡುವಂತೆ ಮಾಡುತ್ತಿದೆ.
ರಸ್ತೆಯಲ್ಲಿ ಇಳಿಯಲ್ಲ ಈ ಕಾರು
ಈ ಕಾರು ರಸ್ತೆಯಲ್ಲಿ ಚಲಿಸುವುದಿಲ್ಲ. ಈ ಕಾರು ಚಲಿಸಲು ಟೈಲ್ಸ್, ಮಾರ್ಬಲ್ ಅಥವಾ ಉತ್ತಮ ಫ್ಲೋರ್ ಅವಶ್ಯಕತೆ ಇದೆ. ಕಾರಿನ ಚಕ್ರಗಳು ಅತೀ ಸಣ್ಣ ಗಾತ್ರ ಹೊಂದಿದೆ. ಹೀಗಾಗಿ ರಸ್ತೆಯಲ್ಲಿ ಚಲಿಸಲು ಸಾಧ್ಯವಿಲ್ಲ. ಇದು ಕೇವಲ ಶಾಪಿಂಗ್ ಮಾಲ್ ಸೇರಿದಂತೆ ಇತರೆಡೆ ಪ್ರದರ್ಶನಕ್ಕಿಡಲು ಕಾರು ಅಭಿವೃದ್ಧಪಡಿಸಲಾಗಿದೆ. ಪ್ರಚಾರಕ್ಕಾಗಿ ಹಾಗೂ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಿಸಲು ಈ ಕಾರು ಅಭಿವೃದ್ಧಿಪಡಿಸಲಾಗಿದೆ ಎಂದು ವಿಡಿಯೋ ಹೇಳುತ್ತಿದೆ.
ವಿಡಿಯೋಗೆ ವಿಶ್ರಮ ಪ್ರತಿಕ್ರಿಯೆ
ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಹಲವರು ಇದು ಆಟೋಮೊಬೈಲ್ ಕ್ಷೇತ್ರದ ಹೊಸ ಅಧ್ಯಾಯ ಎಂದು ಬರೆದುಕೊಂಡಿದ್ದಾರೆ. ಆದರೆ ಯಾರಿಗೂ ಉಪಯೋಗವಿಲ್ಲದ ಈ ಕಾರು ಅಭಿವೃದ್ಧಿ ಮಾಡಿದರೆ ಪ್ರಯೋಜನವೇನು? ಎಂದು ಪ್ರಶ್ನಿಸಿದ್ದಾರೆ. ಈ ಕಾರಿನ ಒಳಗೆ ಯಾರು ಇಲ್ಲಾ, ಇದು ರಿಮೋಟ್ ಮೂಲಕ ಚಲಿಸುತ್ತಿದೆ. ಮಕ್ಕಳ ಆಟಿಕೆ ಕಾರಿನಿನ ತಂತ್ರಜ್ಞಾನ ಬಳಸಿ ಈ ಕಾರು ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಹೆಚ್ಚಿನ ವಿಶೇಷತೆ ಇಲ್ಲ ಎಂದು ಒಂದುಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಒಂದಷ್ಟು ಎಂಜಿನೀಯರ್, ತಂತ್ರಜ್ಞಾನರು, ನುರಿತ ಕೆಲಸಗಾರರು ಈ ಕಾರು ಅಭಿವೃದ್ಧಿಪಡಿಸಿದ್ದಾರೆ. ಆದರೆ ಯಾಕೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.


