ಕ್ಲಿನಿಕ್ ಬಗ್ಗೆ ತಪ್ಪು ರಿವೀವ್: ಗೂಗಲ್ ಮ್ಯಾಪ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ 60 ವೈದ್ಯರು

By Anusha KbFirst Published Apr 19, 2024, 12:58 PM IST
Highlights

ತಮ್ಮ ಕ್ಲಿನಿಕ್ ಬಗ್ಗೆ ಗೂಗಲ್ ಮ್ಯಾಪ್‌ನಲ್ಲಿ ಕೆಟ್ಟದಾಗಿ ವಿಮರ್ಶಾ ಕಾಮೆಂಟ್ ಇದ್ದಿದ್ದರಿಂದ ಜಪಾನ್‌ನ 60 ವೈದ್ಯರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. 

ಟೋಕಿಯೋ: ಗೂಗಲ್‌ನಲ್ಲಿ ಸಿಗದಿರುವ ವಿಚಾರವೇ ಇಲ್ಲ, ಸರ್ಚ್ ಎಂಜಿನ್ ಆಗಿರುವ ಗೂಗಲ್‌ನಲ್ಲಿ ಪ್ರಪಂಚದ ಯಾವ ಮೂಲೆಯ ಎಂತಹ ವಿಚಾರವನ್ನಾದರು ಬಗೆದು ತೆಗೆಯಬಹುದಾಗಿದೆ.ಆದರೆ ಇಂತಹ ಗೂಗಲ್‌ನ ಗೂಗಲ್ ಮ್ಯಾಪ್ ವಿರುದ್ಧ ಈಗ ಜಪಾನ್‌ನ 60 ವೈದ್ಯರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದಕ್ಕೆ ಕಾರಣವಾಗಿದ್ದು, ರಾಂಗ್ ರಿವೀವ್.  ತಮ್ಮ ಕ್ಲಿನಿಕ್ ಬಗ್ಗೆ ಗೂಗಲ್ ಮ್ಯಾಪ್‌ನಲ್ಲಿ ಕೆಟ್ಟದಾಗಿ ವಿಮರ್ಶಾ ಕಾಮೆಂಟ್ ಇದ್ದಿದ್ದರಿಂದ ಜಪಾನ್‌ನ 60 ವೈದ್ಯರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ.  ಅಲ್ಲದೇ ತಮ್ಮ ಸಂಸ್ಥೆಯ ವಿರುದ್ಧ ಕೆಟ್ಟ ರಿವೀವ್ ನಿಂದ ತಮಗೆ ಹಾನಿಯಾಗಿದ್ದು, 1.4 ಮಿಲಿಯನ್ ಯೇನ್ ಅಂದರೆ 9 ಸಾವಿರ ಡಾಲರ್ (ಭಾರತದ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ 7,51,706.10 ರೂಪಾಯಿ) ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

ಗುರುವಾರ ಜಪಾನ್‌ನ ವೈದ್ಯರು ಗೂಗಲ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಗೌಪ್ಯತೆ ಬಹಿರಂಗಪಡಿಸಲು ಸಾಧ್ಯವಿಲ್ಲದ ಕಾರಣ ಈ ಹಾನಿಕಾರಕ ವಿಮರ್ಶೆಗಳಿಗೆ ಪ್ರತಿಕ್ರಿಯಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಎಲ್ಲೋ ಕುಳಿತು ಆನ್‌ಲೈನ್‌ನಲ್ಲಿ ಏನನ್ನು ಬೇಕಾದರೂ ಪೋಸ್ಟ್ ಮಾಡಬಹುದು. ಇದು ಇದೊಂದು ಮೌಖಿಕ ನಿಂದನೆಯಾಗಿದೆ ಎಂದು ದೂರು ದಾಖಲಿಸಿದ ವೈದ್ಯರೊಬ್ಬರು ಹೇಳಿದ್ದಾರೆ. ಇದೊಂದು ರೀತಿ ನಾವು ಪಂಚಿಂಗ್ ಬ್ಯಾಗ್‌ ಆದಂತಾಗಿದೆ. 

ಗೂಗಲ್‌ ಮ್ಯಾಪ್‌ನಲ್ಲಿ ಸಣ್ಣ ಸೆಟ್ಟಿಂಗ್‌ ಮಿಸ್ ಮಾಡಿದ್ದಕ್ಕೆ ಜೈಲು ಪಾಲಾದ ಯುವಕ? ಏನಿದು ಕಥೆ!

ಟೋಕಿಯೊ ಜಿಲ್ಲಾ ನ್ಯಾಯಾಲಯದಲ್ಲಿ ಈ  ಪ್ರಕರಣ ದಾಖಲಾಗಿದ್ದು, ಜಪಾನ್‌ನಲ್ಲಿ ನಕಾರಾತ್ಮಕ ಆನ್‌ಲೈನ್ ವಿಮರ್ಶೆಗಳ ಬಗ್ಗೆ ಸಂಸ್ಥೆಯನ್ನು ಗುರಿಯಾಗಿಸಿ ದಾಖಲಿಸಿದ  ಮೊದಲ ಮೊಕದ್ದಮೆ ಇದು ಎನ್ನಲಾಗುತ್ತಿದೆ ಎಂದು ದೂರುದಾರರ ಪರ ವಕೀಲರು ಹೇಳಿದ್ದಾರೆ. ಈ ವಿಮರ್ಶೆಗಳು ತಪ್ಪು ಎನಿಸಿದರು ಇದನ್ನು ಡಿಲೀಟ್ ಮಾಡುವುದು ಬಹಳ ಕಷ್ಟದ ಕೆಲಸವಾಗಿದೆ ಎಂದು ವಕೀಲ ಯುಚಿ ನಕಝವ ಹೇಳಿದ್ದಾರೆ. ಅಲ್ಲದೇ ಈ ವಿಮರ್ಶೆಗಳಿಂದಾಗಿ ವೈದ್ಯರು ಆತಂಕದಿಂದ ಕೆಲಸ ಮಾಡುವಂತಾಗಿದೆ. 

ಅನೇಕ ವೈದ್ಯಕೀಯ ಸಂಸ್ಥೆಗಳ ಉದ್ದೇಶ ರೋಗಿಯನ್ನು ತೃಪ್ತಿಪಡಿಸುವುದು ಆಗಿರುವುದಿಲ್ಲ, ವೃತ್ತಿಪರರಾಗಿ ರೋಗಿಗಳಿಗೆ ಉಂಟಾಗಿರುವ ಕಾಯಿಲೆಯನ್ನು ನಿಭಾಯಿಸುವುದಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ರೋಗಿಗಳಿಗೆ ಸರಿಯಾದ ರೋಗ ನಿರ್ಣಯವನ್ನು ಮಾಡುವ ಮತ್ತು ಹೇಳಿದ  ಔಷಧಿಗಳನ್ನು ಸೂಚಿಸುವ ಆಸ್ಪತ್ರೆಗಳು ವೈದ್ಯಕೀಯವಾಗಿ ಸೂಕ್ತವಲ್ಲ, ಆದರೆ ರೋಗಿಗಳಿಂದ ಹೆಚ್ಚು ಪ್ರಶಂಸಿಸಲ್ಪಡುತ್ತವೆ. ಅಲ್ಲದೇ ವೈದ್ಯರ ಕೆಲಸದ ಸ್ವರೂಪದಿಂದಾಗಿ ಕೆಲವೊಮ್ಮೆ ವೈದ್ಯರೊಂದಿಗೆ ಹಗೆತನವನ್ನು ಹೊಂದಿರುವ ರೋಗಿಗಳು ಈ ಆನ್‌ಲೈನ್ ದಾಳಿ ನಡೆಸಬಹುದು ಎಂದು ವೈದ್ಯರ ಪರ ವಕೀಲರು ಹೇಳಿದ್ದಾರೆ. ಜಪಾನ್‌ನಲ್ಲಿ ಗೂಗಲ್ ಮ್ಯಾಪನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ದೈನಂದಿನ ಜೀವನದಲ್ಲಿ ಅದು ಮೂಲಭೂತ ಸೌಕರ್ಯದಂತೆ ಕೆಲಸ ಮಾಡುತ್ತದೆ. ಹೀಗಾಗಿ ಗೂಗಲ್ ಸುಲಭವಾಗಿ ವೈದ್ಯಕೀಯ ಉದ್ಯಮದ ಅನಾನುಕೂಲತೆಗಳನ್ನು ಗುರುತಿಸಬಹುದಾಗಿದೆ ದೂರುದಾರರ ಪರ ವಕೀಲ ಯುಚಿ ನಕಝವ ಹೇಳಿದ್ದಾರೆ. 

ಜಿಪಿಎಸ್ ನೋಡ್ಕೊಂಡು ಗಾಡಿ ಓಡಿಸಿ ಸಮುದ್ರಕ್ಕಿಳಿಸಿದ ಕುಡುಕಿ: ವಿಡಿಯೋ ವೈರಲ್

ಗೂಗಲ್ ಕೆಲವು ಮ್ಯಾಪ್ ವಿಮರ್ಶೆಗಳನ್ನು ತನ್ನ ಮಾರ್ಗಸೂಚಿಗೆ ತಕ್ಕಂತೆ ತೆಗೆದು ಹಾಕುತ್ತದೆ. ಆದರೆ ಈ ಮಾರ್ಗಸೂಚಿ ಪಾರದರ್ಶಕವಾಗಿಲ್ಲ, ಕೆಲವೊಂದನ್ನು ಮಾತ್ರ ಅಳಿಸಿ ಹಾಕಲಾಗುತ್ತದೆ ಎಂದು ದೂರಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗೂಗಲ್ ಪ್ರತಿಕ್ರಿಯಿಸಿದ್ದು, ದಾರಿ ತಪ್ಪಿಸುವಂತಹ ಅಥವಾ ಗೊಂದಲ ಮೂಡಿಸುವಂತಹ ಕಂಟೆಂಟ್‌ಗಳನ್ನು ತೆಗೆದು ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದೆ. ಕೆಲವು ಮಾನವ ಹಾಗೂ ಕಂಪ್ಯೂಟರ್ ಸಂಯೋಜನೆಯೊಂದಿಗೆ ನಾವು ಕಂಪನಿಗಳ ಪ್ರೊಫೈಲ್‌ಗಳನ್ನು ದಿನದ 24 ಗಂಟೆಯೂ ರಕ್ಷಿಸುತ್ತಿದ್ದೇವೆ. ಹಾಗೆಯೇ ಕೆಲವು ಸರಿ ಎನಿಸದ ವಿಮರ್ಶೆಗಳನ್ನು ತೆಗೆದು ಹಾಕುತ್ತೇವೆ ಎಂದು ಗೂಗಲ್ ಹೇಳಿದೆ. ಸರ್ಚ್ ಎಂಜಿನ್ ಆಗಿರುವ ಗೂಗಲ್‌ನಲ್ಲಿ ಪ್ರಪಂಚದ ಯಾವ ಮೂಲೆಯ ಎಂತಹ ವಿಚಾರವನ್ನಾದರು ಬಗೆದು ತೆಗೆಯಬಹುದು ಅನ್ನೋದು ಸತ್ಯ. ಆದರೆ ಇದು ಎಷ್ಟು ಸರಿಯಾಗಿರುತ್ತದೆ ಎಂಬ ಬಗ್ಗೆ ಚಿಂತಿಸಬೇಕಿದೆ.

ಗೂಗಲ್‌ ಮ್ಯಾಪ್ ನಂಬ್ಕೊಂಡು ಹೋದ ಇಬ್ಬರು ನೀರುಪಾಲು: ಹುಟ್ಟುಹಬ್ಬದ ದಿನವೇ ಬಲಿಯಾದ ಯುವ ವೈದ್ಯ!

click me!