ವಿದೇಶದಕ್ಕೆ ಹೋಗಿ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸಿಕೊಳ್ಳಲಿ ಎಂದು ಪೋಷಕರು ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದರೆ, ಇಲ್ಲಿಬ್ಬರು ವಿದ್ಯಾರ್ಥಿನಿಯರು ಓದುವುದನ್ನು ಬಿಟ್ಟು ಬೇರೇನೋ ಮಾಡಲು ಹೋಗಿ ಈಗ ಅಮೆರಿಕಾದಲ್ಲಿ ಕಂಬಿ ಎಣಿಸಿದ್ದಾರೆ.
ನ್ಯೂಯಾರ್ಕ್: ವಿದೇಶಗಳಲ್ಲಿ ಓದುವುದು ಈಗ ಟ್ರೆಂಡ್ ಎನಿಸಿದೆ. ಅದರಲ್ಲೂ ತೆಲಂಗಾಣ, ಆಂಧ್ರಪ್ರದೇಶದಲ್ಲಿ ವಿದೇಶದಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಪೋಷಕರು ತಮ್ಮ ಹೊಟ್ಟೆ ಬಟ್ಟೆ ಕಟ್ಟಿಯಾದರೂ ಮಕ್ಕಳನ್ನು ವಿದೇಶದಲ್ಲಿ ಓದಿಸುವುದಕ್ಕೆ ಪಣ ತೊಡುತ್ತಾರೆ. ಹೀಗೆ ವಿದೇಶದಕ್ಕೆ ಹೋಗಿ ಚೆನ್ನಾಗಿ ಓದಿ ಒಳ್ಳೆ ಕೆಲಸ ಗಿಟ್ಟಿಸಿಕೊಳ್ಳಲಿ ಎಂದು ಪೋಷಕರು ಮಕ್ಕಳನ್ನು ವಿದೇಶಕ್ಕೆ ಕಳುಹಿಸಿದರೆ, ಇಲ್ಲಿಬ್ಬರು ವಿದ್ಯಾರ್ಥಿನಿಯರು ಓದುವುದನ್ನು ಬಿಟ್ಟು ಬೇರೇನೋ ಮಾಡಲು ಹೋಗಿ ಈಗ ಅಮೆರಿಕಾದಲ್ಲಿ ಜೈಲು ಎಣಿಸಿದ್ದಾರೆ.
ಅಂಗಡಿಯೊಂದರಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ತೆಲಂಗಾಣ ಹಾಗೂ ಆಂಧ್ರಪ್ರದೇಶದ ತಲಾ ಒಬ್ಬೊಬ್ಬ ಯುವತಿಯರನ್ನು ಅಮೆರಿಕಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಅಮೆರಿಕಾದ ನ್ಯೂ ಜೆರ್ಸಿಗೆ ಉನ್ನತ ಶಿಕ್ಷಣಕ್ಕಾಗಿ ಹೋಗಿದ್ದರು. ಇದರಲ್ಲಿ 20 ವರ್ಷದ ಓರ್ವ ಯುವತಿ ತೆಲಂಗಾಣದ ಹೈದರಾಬಾದ್‌ನವಳು. ಅಮೆರಿಕಾಗೆ ಹೋಗುವ ಮೊದಲು ಹೈದರಾಬಾದ್‌ನಲ್ಲಿ ಓದುತ್ತಿದ್ದು, ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹಾರಿದ್ದಳು. ಮತ್ತೊಬ್ಬ 22 ವರ್ಷದ ವಿದ್ಯಾರ್ಥಿನಿ ಆಂಧ್ರ ಪ್ರದೇಶದ ಗುಂಟೂರು ನಿವಾಸಿಯಾಗಿದ್ದಾಳೆ.
undefined
ಅಮೆರಿಕದಲ್ಲಿ ಮತ್ತೋರ್ವ ಭಾರತೀಯ ವಿದ್ಯಾರ್ಥಿ ನಿಗೂಢ ಸಾವು, ತಿಂಗಳಲ್ಲಿ ನಡೆದ 4ನೇ ಘಟನೆ
ಹೊಬೆಕನ್ ಶಾಪ್‌ರೈಟ್‌ನಲ್ಲಿ ಕೆಲ ಸಾಮಾನುಗಳನ್ನು ಖರೀದಿಸಿ ಇವರು ಹಣ ಪಾವತಿ ಮಾಡಿಲ್ಲ ಎಂದು ಅಂಗಡಿ ಸಿಬ್ಬಂದಿ ಇವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೊಬೆಕೆನ್ ನಗರ ಪೊಲೀಸ್ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ವಿದ್ಯಾರ್ಥಿನಿಯರು ತಪ್ಪು ಮಾಡಿದ್ದಾರೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಇದರಲ್ಲಿ ಓರ್ವ ವಿದ್ಯಾರ್ಥಿನಿ ಪೊಲೀಸರ ಮುಂದೆ ನಾವು ಈ ಹಿಂದೆ ಪಾವತಿ ಮಾಡಿಲ್ಲ, ಹಾಗಾಗಿ ಎಲ್ಲದಕ್ಕೂ ಒಟ್ಟಿಗೆ ಪೇ ಮಾಡುತ್ತೇವೆ ಎಂದು ಹೇಳಿದ್ದಾಳೆ. ಆದರೆ ಮತ್ತೊಬ್ಬ ವಿದ್ಯಾರ್ಥಿನಿ ತಾವು ಇನ್ನು ಮುಂದೆಂದೂ ಆ ರೀತಿ ಮಾಡುವುದಿಲ್ಲ ನಮ್ಮನ್ನು ಹೋಗಲು ಬಿಡಿ ಎಂದು ಮನವಿ ಮಾಡಿದ್ದಾಳೆ. ಆದರೆ ಪೊಲೀಸರು ಕಾನೂನು ಪ್ರಕ್ರಿಯೆಯ ನಂತರವೇ ಅವರನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
4 ವರ್ಷದಿಂದ ಅಮೆರಿಕದಲ್ಲಿ ನಾಪತ್ತೆಯಾದ ಭಾರತೀಯ ವಿದ್ಯಾರ್ಥಿನಿ: ಹುಡುಕಿಕೊಟ್ಟವ್ರಿಗೆ ಭಾರಿ ಬಹುಮಾನ ಘೋಷಿಸಿದ ಎಫ್‌ಬಿಐ