ಕೊರೋನಾ ಪೀಡಿತರಲ್ಲಿ ಕಂಡು ಬರುವ ಪ್ರಮುಖ ಲಕ್ಷಣಗಳೇನು?| ಜ್ವರ, ಕೆಮ್ಮು ಹೊರತುಪಡಿಸಿ ಪ್ರಮುಖವಾಗಿ ಕಂಡು ಬರುವ ಪ್ರಮುಖ ಲಕ್ಷಣ
ಲಾಸ್ ಏಂಜಲೀಸ್(ಏ.16): ವಾಸನೆ ಹಾಗೂ ರುಚಿಯನ್ನು ಗುರುತಿಸಲು ಸಾಧ್ಯವಾಗದಿರುವುದು ಕೊರೋನಾ ವೈರಸ್ ತಗಲಿರುವುದರ ಪ್ರಮುಖ ಲಕ್ಷಣ ಎಂಬುದು ಹೊಸ ಅಧ್ಯಯನದಲ್ಲಿ ಸಾಬೀತಾಗಿದೆ. ಹೀಗಾಗಿ ಇನ್ನುಮುಂದೆ ಕೊರೋನಾ ಶಂಕಿತರ ತಪಾಸಣೆಯಲ್ಲಿ ಈ ಎರಡು ಅಂಶಗಳನ್ನು ವೈದ್ಯರು ಪ್ರಮುಖವಾಗಿ ಪರಿಗಣಿಸುವ ಸಾಧ್ಯತೆಗಳಿವೆ.
ಇಂಟರ್‌ನ್ಯಾಷನಲ್ ಫೋರಮ್ ಆಫ್ ಅಲರ್ಜಿ ಆ್ಯಂಡ್ ರೈನಾಲಜಿಯ ಜರ್ನಲ್‌ನಲ್ಲಿ ಅಮೆರಿಕದ ಸ್ಯಾನ್ ಡಿಯಾಗೋದ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯ ಸಂಶೋಧಕರು ಈ ಕುರಿತು ಅಧ್ಯಯನ ನಡೆಸಿ ಸಂಶೋಧನಾ ಪ್ರಬಂಧ ಪ್ರಕಟಿಸಿದ್ದಾರೆ. ಅದರ ಪ್ರಕಾರ, ಕೊರೋನಾ ಸೋಂಕಿನ ಮೊದಲ ಪ್ರಮುಖ ಲಕ್ಷಣ ಜ್ವರ. ಎರಡನೆಯ ಪ್ರಮುಖ ಲಕ್ಷಣ ಸುಸ್ತು ಹಾಗೂ ಮೂರನೆಯದು ವಾಸನೆ ಮತ್ತು ರುಚಿ ತಿಳಿಯದಿರುವುದು.
ವಾಸನೆ ಮತ್ತು ರುಚಿ ಗುರುತಿಸಲಾಗದವರಿಗೆ ಈ ಲಕ್ಷಣ ಇಲ್ಲದಿರುವವರಿಗಿಂತ ಕೊರೋನಾ ಸೋಂಕು ತಗಲಿರುವ ಸಾಧ್ಯತೆ 10 ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಕೊರೋನಾದ ಇನ್ನಿತರ ಲಕ್ಷಣಗಳೆಂದರೆ ನೆಗಡಿ, ಕೆಮ್ಮು ಹಾಗೂ ತೀವ್ರವಾದ ಉಸಿರಾಟದ ತೊಂದರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ