ಲಾಕ್‌ಡೌನ್ ನಡುವೆ ಮನೆಯಲ್ಲಿರುವವರಿಗೊಂದು ಚಾಲೆಂಜ್| ಕಣ್ಣೆದುರಿರುವ ಹಾವಿಗೆ ಆರಂಭವಾಗಿದೆ ಹುಡುಕಾಟ| ವೈರಲ್ ಆಗ್ತಿರೋ ಫೋಟೋದಲ್ಲಿ ನೀವು ಹುಡುಕಬಲ್ಲಿರಾ ಹಾವನ್ನು?
ಕ್ಯಾನ್‌ಬೆರಾ(ಏ.16): ಹಲವಾರು ಬಾರಿ ಅನೇಕ ವಿಚಾರಗಳು, ವಸ್ತುಗಳು ನಮ್ಮ ಕಣ್ಣೆದುರಿಗೇ ಇದ್ದರೂ ಕಾಣಿಸುವುದಿಲ್ಲ. ಕೇವಲ ನಾವು ಹುಡುಕಾಡುವ ಸಂಗತಿ ಬಿಟ್ಟು ಬೇರೆ ಎಲ್ಲಾ ವಿಚಾರಗಳೂ ಕಾಣ ಸಿಗುತ್ತವೆ. ಸದ್ಯ ವೈರಲ್ ಆಗುತ್ತಿರುವ ಫೋಟೋ ಕುಡಾ ಇಂತಉದೇ ಅನುಭವ ನೀಡುತ್ತದೆ. ಲಾಕ್‌ಡೌನ್fನಲ್ಲಿ ಹೊರಗೆ ಓಡಾಡಲಾಗದೇ ಮನೆಯಲ್ಲೇ ಉಳಿದು ಬೇಜಾರಾದ ಜನ ಇಂತಹ ಕೆಲ ಚಾಲೆಂಜ್‌ಗಳಿಗೆ ಉತ್ತರ ಕಂಡುಕೊಂಡುವಲ್ಲಿ ಬ್ಯೂಸಿಯಾಗಿದ್ದಾರೆ.
ಹೌದು ಸದ್ಯ ಗಿಡ ಮರಗಳಿರುವ ಕಾಡಿನ ಫೋಟೋ ವೈರಲ್ ಆಗುತ್ತಿದ್ದು, ಈ ಫೋಟೋದಲ್ಲಿ ಅಡಗಿರುವ ಹಾವು ನಿಮಗೆ ಕಾಣಿಸುತ್ತಾ ಎಂಬ ಚಾಲರೆಂಜ್ ನಿಡಲಾಗಿದೆ. ಅನೇಕ ಮಂದಿ ಈ ಹಾವು ಹುಡುಕುವಲ್ಲಿ ತಲ್ಲೀನರಾಗಿದ್ದಾರೆ. ಹಾಗಾದ್ರೆ ನೀವೂ ಹುಡುಕುತ್ತೀರಾ ಹಾವನ್ನು?
ಆಸ್ಟ್ರೇಲಿಯಾದ ಸ್ನೇಕ್ ಕ್ಯಾಚರ್ಸ್ ನಾರ್ದರ್ನ್ ರಿವರ್ಸ್ 24/7 ಎಂಬ ಫೇಸ್‌ಬುಕ್ ಪೇಜ್‌ನಲಲಿ ಶೇರ್ ಮಾಡಲಾಗಿದ್ದು, ಸದ್ಯ ಭಾರೀ ವೈರಲ್ ಆಗಿದೆ. ಅಲ್ಲದೇ ನೀವು ಕೂಡಾ ಹಾವನ್ನು ಹುಡುಕಿ, ನಿಮಗೂ ಕಂಡು ಬರುತ್ತಾ? ಎಂದು ನೊಡೋಣ ಎಂಬ ಸಂದೇಶವನ್ನೂ ಬರೆಯಲಾಗಿದೆ.
ಇನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡು ಬಂದ ಹಾವಿನ ಫೋಟೋವನ್ನು ಮಾರ್ಕ್ ಮಾಡಿ ಹಲವಾರು ಮಂದಿ ಈ ಸವಾಲಿಗೆ ಉತ್ತರಿಸಿದ್ದಾರೆ. ಇನ್ನು ಸವಾಲೆಸೆದ ಫೇಸ್‌ಬುಕ್ ಪೇಜ್‌ನಲ್ಲೂ ಹಾವನ್ನು ಮಾರ್ಕ್ ಮಾಡಿ ನೆಟ್ಟಿಗರ ಗೊಂದಲ ನಿವಾರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ