ರಷ್ಯಾ ಉಕ್ರೇನ್ ನಡುವಿನ ಯುದ್ಧದಿಂದ ಅಕ್ಷರಶಃ ನರಕವಾಗಿರುವ ಉಕ್ರೇನ್‌ನಲ್ಲಿ ಜನರ ಜೀವನೋತ್ಸಾಹವೇನೋ ಕಡಿಮೆ ಆಗಿಲ್ಲ. ಯುದ್ಧದ ನಡುವೆಯೇ ಜನ ವಿವಾಹ ಮಾಡಿಕೊಳ್ಳುತ್ತಾ ಇದ್ದಿದ್ದರಲ್ಲಿ ಖುಷಿ ಕಾಣಲು ಬಯಸುತ್ತಿದ್ದಾರೆ. ಈ ಮಧ್ಯೆ ಉಕ್ರೇನ್‌ನಲ್ಲಿ ಜೋಡಿಯೊಂದು ಮಿಲಿಟರಿ ಸಮವಸ್ತ್ರ ಧರಿಸಿ ಮದುವೆಯಾಗಿದ್ದು, ಅದರ ವಿಡಿಯೋ ಇದೀಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವ ಆಂಟನ್ ಗೆರಾಶ್ಚೆಂಕೊ ಅವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿ 24 ರಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ಮೇಲೆ ದಾಳಿ ಮಾಡಲು ಆದೇಶಿಸಿದರು. ಅಂದಿನಿಂದ, ಉಕ್ರೇನ್ ಅಕ್ಷರಶಃ ನರಕವಾಗಿದೆ. ಉಕ್ರೇನ್‌ನ ಎಲ್ಲಾ ನಗರಗಳು ಬಾಂಬ್ ದಾಳಿಯಿಂದಾಗಿ ಸಂಪೂರ್ಣ ಧ್ವಂಸವಾಗಿವೆ. ಸಾವಿರಾರು ಮುಗ್ಧ ಜೀವಗಳು ಪ್ರಾಣ ಕಳೆದುಕೊಂಡಿದ್ದರೆ ಲಕ್ಷಾಂತರ ಮಂದಿ ದೇಶ ತೊರೆದು ವಲಸೆ ಹೋಗಿದ್ದರು. ಹೀಗಾಗಿ ಉಕ್ರೇನ್ ಸಂಪೂರ್ಣ ಸ್ಮಶಾನದಂತಾಗಿದೆ. ಇಂತಹ ಸ್ಥಿತಿಯಲ್ಲಿ ಈ ಮದುವೆಗಳು ಕತ್ತಲಿನಲ್ಲಿ ಸೂರ್ಯನ ಬೆಳಕಿನಂತೆ ಕಾಣಿಸಿದೆ.
ವಿಡಿಯೋದಲ್ಲಿ ಮಿಲಿಟರಿ ಉಡುಗೆಯನ್ನು ಧರಿಸಿದ ನವ ದಂಪತಿಗಳು ಚರ್ಚ್‌ನಿಂದ ಹೊರ ಬರುವುದನ್ನು ಕಾಣಬಹುದು. ಆದರೆ ವಧು ತಲೆಯ ಮೇಲೆ ಬಿಳಿ ಮುಸುಕನ್ನು ಧರಿಸಿದ್ದಳು. ಮದುವೆಯ ನಂತರ ನೋಡುಗರು ಹರ್ಷೋದ್ಘಾರ ಮಾಡುತ್ತಿದ್ದಂತೆ ವರ, ವಧುವನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡಿದ್ದಾರೆ. ಈಗಿನ ದಿನಗಳಲ್ಲಿ ನಡೆಯುತ್ತಿರುವ ಉಕ್ರೇನ್ ವಿವಾಹಗಳಲ್ಲಿ ಬಿಳಿ ಗವನ್ ಹಾಗೂ ಟುಕ್ಸೆಡೋಗಳಿಲ್ಲ. ಆದರೆ ಸಾಕಷ್ಟು ಪ್ರೀತಿ ಮತ್ತು ಸಂತೋಷವಿದೆ ಎಂದು ಈ ಮದುವೆಯ ವಿಡಿಯೋ ಪೋಸ್ಟ್ ಮಾಡಿ ಬರೆದಿದ್ದಾರೆ. ಈ ವಿಡಿಯೋವನ್ನು 93 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಇಂತಹ ವಿಶಿಷ್ಟ ವಿವಾಹಗಳು ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್‌ನ ಪ್ರತಿರೋಧದ ಸಂಕೇತಗಳಾಗಿವೆ ಎಂದು ಹಲವರು ಬರೆದಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಜಗತ್ತಿನ ಮೇಲೆ ವ್ಯಾಪಕವಾದ ಪರಿಣಾಮ ಬೀರಿತ್ತು. ಕಚ್ಚಾ ತೈಲ, ಅಡುಗೆ ಅನಿಲ ಸೇರಿದಂತೆ ಬಹುತೇಕ ಎಲ್ಲಾ ವಸ್ತುಗಳ ಮೇಲೆ ಭಾರಿ ಏರಿಕೆ ಆಗಿತ್ತು. ಕಲಿಯುಗದ ಘನಘೋರ ಯುದ್ಧಕ್ಕೆ ರಷ್ಯಾಧಿಪತಿ ವ್ಲಾದಿಮಿರ್ ಪುಟಿನ್ ಫೆಬ್ರವರಿ 24 ರಂದು ರಣಕಹಳೆ ಊದಿದ್ದರು. ಈ ಯುದ್ಧದಲ್ಲಿ ಗೆದ್ದೇ ಗೆಲ್ತಿನಿ ಅನ್ನೋ ವಿಶ್ವಾಸದಿಂದ ಸಾವಿರಾರು ಸೈನಿಕರನ್ನು ಪುಟ್ಟ ರಾಷ್ಟ್ರ ಉಕ್ರೇನ್ ಮೇಲೆ ಛೂ ಬಿಟ್ಟಿದ್ದರು. ಆದ್ರೆ ಎಲ್ಲವೂ ನಂತರ ಉಲ್ಟಾ ಆಗಿತ್ತು. ಸಾವಿರಾರು ರಷ್ಯಾ ಸೈನಿಕರು ಯುದ್ಧಭೂಮಿಯಲ್ಲಿ ಕೊಳೆತು ಹೋಗಿದ್ದರು. ಮೃತದೇಹಗಳನ್ನ ಟ್ರೇನ್ ಮೂಲಕ ಸಾಗಿಸಲಾಗಿತ್ತು. ಈ ರೈಲಿನಲ್ಲಿ ಬರಿ ಮೃತದೇಹಗಳನ್ನು ಮಾತ್ರ ಹೊತ್ತೋಯ್ಯದೇ, ಉಕ್ರೇನ್‌ನಲ್ಲಿ ಲೂಟಿ ಮಾಡಿದ ಚಿನ್ನಾಭರಣಗಳನ್ನೂ ರಷ್ಯನ್ನರು ಹೊತ್ತೊಯ್ದಿದ್ದರು.
Putin Health ರಷ್ಯಾ ಅಧ್ಯಕ್ಷ ಪುಟಿನ್ ಬದುಕುಳಿಯುವುದು 3 ವರ್ಷ ಮಾತ್ರ, ಗುಪ್ತಚರ ಅಧಿಕಾರಿ ಸ್ಫೋಟಕ ಮಾಹಿತಿ!
ಪೂರ್ವ ಉಕ್ರೇನಿನ ಸಿವರ್‌ಸ್ಕಿ ಡೊನೆಟ್ಸ್ ನದಿ ದಾಟಲು, ರಷ್ಯಾ ಪಡೆಗಳು ಬಳಸುತ್ತಿದ್ದ ಪಾಂಟೂನ್ ಸೇತುವೆಯನ್ನು ಉಕ್ರೇನ್ ಸೇನೆ ನಾಶಪಡಿಸಿತ್ತು. ರಷ್ಯಾದ ಸುಮಾರು ಒಂದು ಸಾವಿರ ಸೈನಿಕರು ಹಾಗೂ ಅಪಾರ ಸಂಖ್ಯೆಯ ಸೇನಾ ವಾಹನಗಳನ್ನು ಉಕ್ರೇನ್ ಹೊಡೆದುರುಳಿಸಿದೆ. ಇಷ್ಟೆಲ್ಲಾ ನರಮೇದದ ಮಧ್ಯೆ ರಷ್ಯಾ ಪಕ್ಕಾ ಸೋಲುಂಡು, ವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆ ಗೆಲುವು ಸಿಗುತ್ತೆ ಅಂತ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಮೂರು ತಿಂಗಳಾದ್ರು ಉಕ್ರೇನ್ ವಿರುದ್ಧ ಬಲಿಷ್ಟ ರಷ್ಯಾ ಗೆಲುವು ಸಾಧಿಸಲು ಹೆಣಗಾಡ್ತಿದೆ.. ಈ ನಡುವೆಯೇ ವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆಲುವು ಸಾಧಿಸಲಿದೆ ಅನ್ನೋ ಮಾಹಿತಿಯನ್ನ ಗುಪ್ತಚರ ಇಲಾಖೆ ಮುಖ್ಯಸ್ಥರೊಬ್ಬರು ನೀಡಿದ್ದಾರೆ.
Russia Ukraine War: 100 ದಿನದ ಮಹಾಯುದ್ಧ ಗೆದ್ದಿದ್ಯಾರು? ಸೋತಿದ್ಯಾರು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ