
ಇದು ಆನ್‌ಲೈನ್ ಯುಗ ಹಣ ಹಾಗೂ ಒಂದು ಸ್ಮಾರ್ಟ್‌ಫೋನ್ ಇದ್ದರೆ ಸಾಕು ಪ್ರತಿಯೊಂದು ಆನ್‌ಲೈನ್ ಮೂಲಕ ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಆದರೆ ಹೀಗೆ ಆನ್‌ಲೈನ್ ಮೂಲಕ ಮನೆ ಬಾಗಿಲಿಗೆ ಸೇವೆ ನೀಡುವ ಈ ವ್ಯವಸ್ಥೆಯಲ್ಲೂ ಹಲವು ಲೋಪದೋಷಗಳಿವೆ. ಕೆಲವೊಮ್ಮೆ ನಾವು ನೋಡಿದ್ದು ಒಂದಾಗಿದ್ದರೆ ನಮಗೆ ಬರುವ ವಸ್ತು ಇನ್ನೊಂದಾಗಿರುತ್ತದೆ. ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವ ಅನೇಕರಿಗೆ ಇದರ ಅನುಭವ ಆಗಿರಬಹುದು. ಕೆಲ ದಿನಗಳ ಹಿಂದಷ್ಟೇ ಆನ್‌ಲೈನ್‌ನಲ್ಲಿ ಈರುಳ್ಳಿ ರಿಂಗ್( ಈರುಳ್ಳಿಯ ಕರಿದ ತಿನಿಸು) ಬುಕ್ ಮಾಡಿದ ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ದುಂಡಗೆ ಕತ್ತರಿಸಿದ ಈರುಳ್ಳಿಯ ತುಂಡುಗಳು ತಲುಪಿದ್ದವು.
ಹಾಗೆಯೇ ಈಗ ಆನ್‌ಲೈನ್ ಶಾಪಿಂಗ್ ದೈತ್ಯ ಅಮೆಜಾನ್‌ನಿಂದ ಚರ್ಮದ ಕುರ್ಚಿಯನ್ನು ಆರ್ಡರ್ ಮಾಡಿದ ಮಹಿಳೆಯೊಬ್ಬರಿಗೆ ಅಚ್ಚರಿಯ ಜೊತೆ ಆಘಾತವಾಗಿತ್ತು, ಇವರು ಬುಕ್ ಮಾಡಿದ ಚೇರ್ ಜೊತೆ ಅವರಿಗೆ ರಕ್ತ ಸಂಗ್ರಹಿಸುವ ಸೀಸೆಯೂ ಕೂಡ ಬಂದಿತ್ತು. ಇದನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಮೆಜಾನ್‌ನಿಂದ ನಾನು ಆರ್ಡರ್ ಮಾಡಿದ ಚರ್ಮದ ಕುರ್ಚಿಯನ್ನು ರಕ್ತ ಸಂಗ್ರಹಣಾ ಟ್ಯೂಬ್‌ನೊಂದಿಗೆ ಪ್ಯಾಕ್ ಮಾಡಲಾಗಿದೆ ಎಂದು ನಾನು ನಿಮಗೆ ಹೇಳಿದರೆ ನೀವು ನಂಬುವಿರೇ ಆ ಟ್ಯೂಬ್ ಸಂಪೂರ್ಣ ರಕ್ತದಿಂದ ತುಂಬಿದೆ. ಇದನ್ನು ನೋಡಿ ನನಗೆ ವಿವರಿಸಲು ಪದಗಳೇ ಬರುತ್ತಿಲ್ಲ. ನಾನು ಗೊಂದಲಕ್ಕೊಳಗಾಗಿದ್ದೇನೆ. ಈ ಬಗ್ಗೆ ಆರಂಭದಲ್ಲಿ ನಾನು ಆಮೇಜಾನ್‌ನಿಂದ ವಿವರ ಕೇಳಿದೆ ಆದರೆ ನಂತರ ಅವರು ನನ್ನನ್ನು ಸಂಪರ್ಕಿಸಿಲ್ಲ ಎಂದು ಮಹಿಳೆ ಹೇಳಿದ್ದಾಳೆ.
ಯುವತಿಗೆ ಮಿಸ್ ಯೂ ಮೆಸೇಜ್ ಕಳುಹಿಸಿದ ಡೆಲಿವರಿ ಬಾಯ್: ರಿಫ್ಲೈ ಮಾಡಿದ ಸ್ವಿಗ್ಗಿ
ಈ ವಿಡಿಯೋವನ್ನು ಐದು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದರು, ಕಾಮೆಂಟ್ ಸೆಕ್ಷನ್‌ಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ವಿಚಿತ್ರವಾಗಿದೆ. ರಕ್ತದ ಟ್ಯೂಬ್‌ಗಳಲ್ಲಿ ಸಾಮಾನ್ಯವಾಗಿ ರೋಗಿಯ ಹೆಸರನ್ನು ಬರೆದಿರಲಾಗುತ್ತದೆ. ಇದು ಹೇಗೆ ಈ ಡೆಲಿವರಿಯೊಂದಿಗೆ ಸೇರಿಕೊಂಡಿತ್ತು. ಅಮೇಜಾನ್ ಗೋದಾಮಿನಲ್ಲಿ ಏನಾದರೂ ಹೆಲೊವೆನ್ ಅಲಂಕಾರ ಇದೆಯೋ ಹೇಗೆ ಎಂದು ಗ್ರಾಹಕರು ಪ್ರಶ್ನಿಸಿದ್ದಾರೆ. ಇದೊಂದು ಗಂಭೀರವಾದ ವಿಚಾರ ಎಂದು ನೋಡುಗರು ಪ್ರತಿಕ್ರಿಯಿಸಿದ್ದಾರೆ.
ಕೆಲ ದಿನಗಳ ಹಿಂದೆ ಯುವಕನೋರ್ವ ಆನ್‌ಲೈನ್‌ನಲ್ಲಿ ಈರುಳ್ಳಿಯ ಕರಿದ ಉತ್ಪನ್ನ(onion rings)ವನ್ನು ಆರ್ಡರ್ ಮಾಡಿದ್ದ. ಸ್ವಲ್ಪ ಹೊತ್ತಿನ ನಂತರ ಮನೆಗೆ ಬಂದ ಆಹಾರದ ಪೊಟ್ಟಣವನ್ನು ಬಿಚ್ಚಿ ನೋಡಿದ್ದ ಆತನಿಗೆ ಶಾಕ್ ಕಾದಿತ್ತು. ಏಕೆಂದರೆ ಅಲ್ಲಿ ಈತನಿಗೆ ಈರುಳ್ಳಿಯ ಕರಿದ ಉತ್ಪನ್ನದ ಬದಲು ದುಂಡನೆಯಾಗಿ ಕತ್ತರಿಸಲ್ಪಟ್ಟ ಹಸಿ ಈರುಳ್ಳಿಯ ತುಂಡುಗಳು ಬಂದಿದ್ದವು. ಇದನ್ನು ಆತ ವಿಡಿಯೋ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ನಗೆ ಗಡಲಲ್ಲಿ ತೇಲಿದ್ದಾರೆ ಜೊತೆಗೆ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಆನ್‌ಲೈನ್‌ನಲ್ಲಿ Onion Rings ಬುಕ್ ಮಾಡಿದವನಿಗೆ ಏನ್ ಬಂತು ನೋಡಿ
ಆನ್‌ಲೈನ್‌ನಲ್ಲಿ ಈರುಳ್ಳಿಯ ಕರಿದ ಉತ್ಪನ್ನ ಆಹಾರ ಬುಕ್ ಮಾಡಿದ ಈತನಿಗೆ ಆರು ತುಂಡು ಈರುಳ್ಳಿ ಬಂದಿದೆ. ಆನ್‌ಲೈನ್ ಬುಕ್ ಮಾಡಿದ ನನಗೆ ಏನು ಬಂತು ನೋಡಿ ಎಂದು ಆತ ಸಣ್ಣ ಪಾರದರ್ಶಕ ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ರೆಸ್ಟೋರೆಂಟ್‌ನಿಂದ ಪಡೆದ ಹಸಿ ಈರುಳ್ಳಿಯ ಆರು ಹೋಳುಗಳನ್ನು ತೋರಿಸಿದ್ದಾನೆ. ದೆಹಲಿಯ Instagram ಬಳಕೆದಾರ Ubaidu ಅವರಿಗೆ ಈ ಅನುಭವ ಆಗಿದೆ. ಅವರು ಲೈಟ್ ಆಗಿ ಏನನ್ನಾದರೂ ತಿನ್ನಬೇಕು ಎಂದು ಬಯಸಿದ್ದರು. ಹಾಗಾಗಿ ಗರಿಗರಿಯಾದ ಕರಿದ ಈರುಳ್ಳಿಯನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದಾರೆ. ಆದಾಗ್ಯೂ, ಡೆಲಿವರಿ ತಲುಪಿದಾಗ ಬೆಚ್ಚಿ ಬೀಳುವ ಸ್ಥಿತಿ ಅವರದಾಗಿತ್ತು. ಅಸಮಾಧಾನಗೊಂಡ ಅವರು ತಮ್ಮ ಕಷ್ಟವನ್ನು ಇನ್ಸ್ಟಾಗ್ರಾಮ್ ರೀಲ್‌ನಲ್ಲಿ ಹಾಕಿದ್ದಾರೆ. ತಾನು ಆರ್ಡರ್ ಮಾಡಿದ್ದೇನು ತನಗೆ ಏನು ಬಂತು ಎಂಬುದನ್ನು ಅವರು ತೋರಿಸಿದರು. ರೀಲ್ಸ್‌ನಲ್ಲಿ ಹಸಿ ಈರುಳ್ಳಿ ಉಂಗುರಗಳನ್ನು ಕೈಯಲ್ಲಿ ಹಾಕಿ ವಿಜಯ ಸಂಕೇತವನ್ನು ಅವರು ನಗುತ್ತಾ ತೋರಿಸುತ್ತಿರುವುದನ್ನು ನೋಡಿದರೆ ನೋಡುಗರಿಗೆ ನಗು ಉಕ್ಕಿ ಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ