ಆಟವಾಡುತ್ತಾ ಅಪ್ಪನ ದುಡ್ಡಿಗೆ ಕತ್ತರಿ ಹಾಕಿದ ಮಗಳು: 50 ಸಾವಿರ ಮೌಲ್ಯದ ನೋಟುಗಳು ಪೀಸ್ ಪೀಸ್

Published : Dec 29, 2025, 11:55 AM IST
money management lessons

ಸಾರಾಂಶ

ಚೀನಾದಲ್ಲಿ ಐದು ವರ್ಷದ ಬಾಲಕಿಯೊಬ್ಬಳು, ಹಣದ ಮೌಲ್ಯ ತಿಳಿಯದೆ ತನ್ನ ತಂದೆಯ 6.3 ಲಕ್ಷ ರೂ. ಮೌಲ್ಯದ ಉಳಿತಾಯದ ಹಣವನ್ನು ಕತ್ತರಿಸಿದ್ದಾಳೆ. ನೋಟುಗಳಲ್ಲಿದ್ದ ಮಾವೋ ಝೆಡಾಂಗ್ ಅವರ ಫೋಟೋವನ್ನು ಕತ್ತರಿ ಬಳಸಿ ಬೇರ್ಪಡಿಸಿದ್ದು, ಈ ಘಟನೆಯಿಂದಾಗಿ ಇಡೀ ಹಣ ಬಳಕೆಗೆ ಬಾರದಂತಾಗಿದೆ.

ಬುದ್ಧಿ ಬಾರದ ಮಕ್ಕಳ ಕೈಗೆ ಸಿಗುವಂತೆ ಯಾವುದೇ ಅಮೂಲ್ಯ ವಸ್ತುಗಳನ್ನು ಇಡಲೇಬಾರದು. ಒಂದು ವೇಳೆ ಇಟ್ಟಲ್ಲಿ ನಂತರ ಅಳುವ ಸ್ಥಿತಿ ಪೋಷಕರದ್ದಾಗಬಹುದು. ಹಾಗೆಯೇ ಇಲ್ಲೊಂದು ಕಡೆ ತಂದೆಯೊಬ್ಬರು ಭಾರಿ ಮೊತ್ತದ ಹಣವನ್ನು ಮಗಳ ಕೈಗೆ ಸಿಗುವಂತೆ ಇಟ್ಟಿದ್ದು, ಮಗಳಿಗೆ ಈ ಹಣದ ಮೌಲ್ಯದ ಬಗ್ಗೆ ಸ್ವಲ್ಪವೂ ಅರಿವಿರಲಿಲ್ಲ. ಪುಟ್ಟ ಮಗಳು ಕೈಯಲ್ಲಿ ಕತ್ತರಿ ಹಿಡಿದುಕೊಂಡು ಆ ನೋಟುಗಳಿಗೆಲ್ಲಾ ಕತ್ತರಿ ಹಾಕಿದ್ದಾಳೆ. ಪರಿಣಾಮ ಕುಟುಂಬದ ಕಷ್ಟಕಾಲಕ್ಕೆಂದು ಉಳಿತಾಯ ಮಾಡಿಟ್ಟಿದ್ದ ಬರೋಬ್ಬರಿ ಮೊತ್ತದ ಹಣ ಈಗ ಕಸದ ಬುಟ್ಟಿ ಪಾಲಾಗಿದ್ದು, ತಂದೆ ತನ್ನ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ಅಂದಹಾಗೆ ಈ ಘಟನೆ ನಡೆದಿರುವುದು ಚೀನಾದಲ್ಲಿ.

ಚೀನಾದ ಕ್ವಿಂಗ್ಡಾವೊದಲ್ಲಿ ಈ ಘಟನೆ ನಡೆದಿದೆ. ಐದು ವರ್ಷದ ಬಾಲಕಿಯೊಬ್ಬಳು ಆಟವಾಡುತ್ತಾ ತನ್ನ ತಂದೆ ಉಳಿಸಿಟ್ಟಿದ್ದ 50,000 ಯುವಾನ್ ಅಂದರೆ ಭಾರತೀಯ ರೂಪಾಯಗಳಲ್ಲಿ ಹೇಳುವುದಾದರೆ ಸುಮಾರು 6.3 ಲಕ್ಷ ರೂ. ಮೌಲ್ಯದ ಚೈನೀಶ್ ನೋಟುಗಳಿಗೆ ಕತ್ತರಿ ಹಾಕಿದ್ದಾಳೆ. ನೋಟುಗಳ ಬಂಡಲ್ ನೋಡಿದ ಈ ಬಾಲಕಿ ಆ ನೋಟಿನ ಮೇಲಿದ್ದ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂಸ್ಥಾಪಕ ಮಾವೋ ಝೆಡಾಂಗ್ ಅವರ ಫೋಟೋವನ್ನು ಎಲ್ಲಾ ನೋಟುಗಳಿಂದ ಕತ್ತರಿಸಿ ಪ್ರತ್ಯೇಕ ಮಾಡಿದ್ದಾಳೆ.

ಶಾಂಡೊಂಗ್ ಪ್ರಾಂತ್ಯದಲ್ಲಿರುವ ಕ್ವಿಂಗ್ಡಾವೊದ ತನ್ನ ಪೋಷಕರ ಮನೆಯಲ್ಲಿ ಆಟವಾಡುತ್ತಿದ್ದಾಗ, ಆ ಚಿಕ್ಕ ಹುಡುಗಿಗೆ ತನ್ನ ಕೈಯಲ್ಲಿರುವ ಕಾಗದದ ಮೌಲ್ಯದ ಬಗ್ಗೆ ಯಾವುದೇ ಅರಿವಿರಲಿಲ್ಲ. ಅವಳು ಕತ್ತರಿ ಬಳಸಿ ನೋಟುಗಳನ್ನು ಕತ್ತರಿಸಿ, ಅದರಲ್ಲಿದ್ದ ಚೀನಾದ ಜನಕ ಮಾವೋ ಝೆಡಾಂಗ್‌ನ ಫೋಟೋವನ್ನು ಪ್ರತ್ಯೇಕಗೊಳಿಸಿದ್ದಾರೆ. ಹಣದ ಮೌಲ್ಯದ ಅರಿವಿಲ್ಲದ ಆಕೆಗೆ ಅದೊಂದು ಆಟದ ವಸ್ತುವಾಗಿತ್ತು. ಹೊರಗೆ ಹೋಗಿದ್ದ ಆಕೆಯ ತಂದೆ ಮನೆಗೆ ಹಿಂದಿರುಗಿದಾಗ ಮಗಳ ಈ ಕಿತಾಪತಿ ಕೆಲಸ ಬೆಳಕಿಗೆ ಬಂದಿದೆ. ಚಲಾವಣೆಗೆ ಅರ್ಹವಾಗಿದ್ದ ಆ ನೋಟುಗಳು ಪುಟ್ಟ ಮಗಳ ಕಿತಾಪತಿಯಿಂದಾಗಿ ಕೆಲ ಗಂಟೆಗಳಲ್ಲಿ ಕೆಲಸಕ್ಕೆ ಬಾರದ ಕಸವಾಗಿ ಬದಲಾಗಿದೆ.

ಆ ಪುಟ್ಟ ಬಾಲಕಿ ಭಾರತದ ನೋಟಿನಲ್ಲಿ ಗಾಂಧಿ ತಾತನ ಪೋಟೋ ಇರುವಂತೆ ಚೀನಾ ನೋಟಿನಲ್ಲಿದ್ದ ಚೀನಾದ ಜನ ಮಾವೋ ಝೆಡಾಂಗ್‌ನ ಫೋಟೋವನ್ನೆ ಬಹಳ ನಾಜೂಕಾಗಿ ಎಲ್ಲಾ ನೋಟುಗಳಿಂದ ಕತ್ತರಿಸಿ ತೆಗೆದು ಬೇರೆಯೇ ಜೋಡಿಸಿದ್ದಳು. ಈ ನೋಟುಗಳನ್ನು ಮತ್ತೆ ಜೋಡಿಸುವುದು ಕಷ್ಟದ ಕೆಲಸವಾಗಿತ್ತು. ಏಕೆಂದರೆ ನೋಟಿನ ಸ್ಣ್ಣ ಸಣ್ಣ ಪೀಸುಗಳು ಮಿಸ್ ಆಗಿದ್ದವು.

ಆ ಕುಟುಂಬದ ಗುರುತನ್ನು ಬಹಿರಂಗಪಡಿಸಲಾಗಿಲ್ಲ. ಬಹುಶಃ ಬಾಲಕಿಯ ತಂದೆ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕೆ ಬರಬಹುದೆಂದು ಆ ಹಣವನ್ನು ಮನೆಯಲ್ಲಿ ತೆಗೆದಿರಿಸಿದ್ದರು ಎಂದು ವರದಿಯಾಗಿದೆ. ಆದರೆ ತಮ್ಮ ರಹಸ್ಯ ಉಳಿತಾಯಕ್ಕೆ ಮಗಳಿಂದ ಈ ದುಸ್ಥಿತಿ ಬರಬಹುದೆಂದು ಅವರು ಭಾವಿಸಿರಲಿಲ್ಲ. ಹೊರಗೆ ಹೋಗಿದ್ದ ತಂದೆ ಮರಳಿ ಮನೆಗೆ ಬಂದ ವೇಳೆ ನೋಟಿನ ಸಣ್ಣ ಸಣ್ಣ ತುಂಡುಗಳು ನೆಲದಲ್ಲಿ ಹರಡಿಕೊಂಡಿದ್ದವು. ಅದನ್ನು ಮತ್ತೆ ಜೋಡಿಸಲು ತಂದೆ ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

ಈ ವಿಚಾರ ಈಗ ಹಲವು ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ವೈರಲ್ ಆಗುತ್ತಿವೆ. ಅನೇಕ ನೆಟ್ಟಿಗರು ಹಲವು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಪುಟ್ಟ ಬಾಲಕಿಯಾದರು ಆಖೆ ತುಂಬಾ ಸ್ಪಷ್ಟವಾಗಿ ಅದರಲ್ಲಿದ್ದ ಮಾವೋ ಜೆಡಾಂಗ್‌ನ ಫೋಟೋವನ್ನು ಕತ್ತರಿಸಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ. 5 ವರ್ಷದ ಬಾಲಕಿ ಈ ರೀತಿ ನೋಟುಗಳನ್ನು ಬಹಳ ನೀಟ್ ಆಗಿ ಕತ್ತರಿಸಿರುವುದನ್ನು ನೋಡಿದ ಕೆಲವರು ಪರ್ಫೆಕ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಆದರೆ ಕೆಲವರು ಈ ವಿಚಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 14,19,06,98,900 ಲಾಟರಿ ಗೆದ್ದ ವಿಚಾರ ಯಾರಿಗೂ ಗೊತ್ತಾಗಬಾರದು ಅಂತ ಮುಖವಾಡ ಧರಿಸಿ ಲಾಟರಿ ಹಣ ಪಡೆದ ಯುವಕ

ಈ ಬಾಲಕಿ 500 ಬಾರಿ ಇದನ್ನು ಮಾಡಲು ಸಾಧ್ಯವಿಲ್ಲ ಇದೊಂದು ಸುಳ್ಳು ಎನಿಸುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಚೀನಾದ ಕೇಂದ್ರ ಬ್ಯಾಂಕ್ ಸಾಮಾನ್ಯವಾಗಿ ಹರಿದ ನೋಟುಗಳನ್ನು ಸ್ವೀಕರಿಸಿ ಹೊಸ ನೋಟುಗಳನ್ನು ನೀಡುತ್ತದೆ. ಆದರೆ ಭಾರಿ ಹಾನಿಯಾಗಿದ್ದಲ್ಲಿ, ಅದರಲ್ಲಿದ್ದ ಫೋಟೋಗಳೇ ಹೋಗಿದ್ದಲ್ಲಿ ನೋಟುಗಳನ್ನು ತೆಗೆದುಕೊಳ್ಳುವುದಿಲ್ಲ.

ಇದನ್ನೂ ಓದಿ: ಹಿಮಂತ್ ಅಧಿಕಾರದಲ್ಲಿ ಇರುವವರೆಗೆ ಅಸ್ಸಾಂಗೆ ಬರಬೇಡಿ: ಬೆಂಗಳೂರಿಗೆ ಹೋಗಿ: ಬಾಂಗ್ಲಾದೇಶಿ ಅಕ್ರಮ ನಿವಾಸಿಗಳಿಗೆ ಕರೆ ನೀಡಿದ ಮೀಯಾ ಮುಸ್ಲಿಂ ಮಹಿಳೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

14,19,06,98,900 ಲಾಟರಿ ಗೆದ್ದ ವಿಚಾರ ಯಾರಿಗೂ ಗೊತ್ತಾಗಬಾರದು ಅಂತ ಮುಖವಾಡ ಧರಿಸಿ ಲಾಟರಿ ಹಣ ಪಡೆದ ಯುವಕ
ಹದಿ ಹಂತಕರು ಭಾರತಕ್ಕೆ ಪರಾರಿ: ಬಾಂಗ್ಲಾ ಪೊಲೀಸ್‌ ಆರೋಪ