ದೇಶಿಯ ಆಯ್ತು, ಅಂತಾರಾಷ್ಟ್ರೀಯ ವಿಮಾನಯಾನಕ್ಕೂ ದಿನಾಂಕ ಫಿಕ್ಸ್!

By Suvarna NewsFirst Published May 23, 2020, 11:10 PM IST
Highlights

ದೇಶಿಯ ವಿಮಾನ ಹಾರಾಟ ಮೇ 25 ರಿಂದ/ ರೈಲು ಸಂಚಾರ ಜೂನ್ 1 ರಿಂದ/ ಅಂತಾರಾಷ್ಟ್ರೀಯ ವಿಮಾn ಸೇವೆ ಆರಂಭಕ್ಕೆ ದಿನಾಂಕ ಫಿಕ್ಸ್

ನವದೆಹಲಿ(ಮೇ 23) ದೇಶಿಯ  ವಿಮಾನ ಹಾರಾಟ ಯಾವಾಗಿನಿಂದ ಶುರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈಗ ಅಂತಾರಾಷ್ಟ್ರೀಯ ವಿಮಾನ ಸೇವೆಗಳ ಆರಂಭದ ಸೂಚನೆ ಸಿಕ್ಕಿದೆ

ಈ ಬಗ್ಗೆ ಸುಳಿವು ನೀಡಿರುವ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಪುರಿ ಅವರು ಆಗಸ್ಟ್ ಮೊದಲ ವಾರ ಅಥವಾ ಜೂನ್ ಮಧ್ಯಭಾಗದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವುದಾಗಿ ಹೇಳಿದ್ದಾರೆ. ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಕೊರೋನಾ ನಡುವೆ ಮಾನವೀಯತೆ ಮೆರೆದ ಸಚಿವ ಸುಧಾಕರ್

ಶನಿವಾರ ಫೇಸ್‌ಬುಕ್‌ ಲೈವ್‌ನಲ್ಲಿ ಜನರು ಕೇಳಿದ ಪ್ರಶ್ನೆಗೆ ಈ ಮಾಹಿತಿ ನೀಡಿದ್ದಾರೆ. ನಾವು ಉತ್ತಮ ಸಂಖ್ಯೆಗಳ ವಿಮಾನಗಳೊಂದಿಗೆ ಕೆಲಸ ಆರಂಭಿಸಲಿದ್ದು ಎಲ್ಲರಿಗೆ ಅನುಕೂಲ ಮಾಡಿಕೊಡಲಿದ್ದೇವೆ ಎಂದಿದ್ದಾರೆ. 

ರೈಲ್ವೆ ಟಿಕೆಟ್ ಬುಕಿಂಗ್ ಹೇಗೆ? ಇಲ್ಲಿದೆ ಮಾಹಿತಿ

ಮೇ 25 ರಿಂದ ದೇಶಿ ಪ್ರಯಾಣಿಕರ ವಿಮಾನಯಾನಕ್ಕೆ ಅವಕಾಶ ನೀಡಲಾಗಿದೆ. ಆರೋಗ್ಯ ಸೇತು ಅಪ್ಲಿಕೇಶನ್‌ನಲ್ಲಿ ಹಸಿರು ಸೂಚನೆ ಇರುವವರಿಗೆ ಕ್ವಾರಂಟೈನ್ ಇರುವುದಿಲ್ಲ. ಅದಾಗ್ಯೂ ರಾಜ್ಯಗಳಿಗೆ ಈ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಪುರಿ ತಿಳಿಸಿದ್ದಾರೆ.  ಜೂನ್ 1 ರಿಂದ ರೈಲು ಸೇವೆಗಳ ಆರಂಭಕ್ಕೂ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

 

click me!