
ಮೆಲ್ಬೋರ್ನ್(ಮೇ.23): ಮೇಜ್ ಡೌನ್ಲೋಡ್ ಆಗ್ತಿಲ್ಲ, ವಿಡಿಯೋ ಪ್ಲೇ ಆಗ್ತಿಲ್ಲ, ಮೈಲ್ ಓಪನ್ ಆಗ್ತಿಲ್ಲ, ಫೇಸ್‍ಬುಕ್ ಲಾಗಿನ್ ಆಗ್ತಿಲ್ಲ. ಹೀಗೆ ಇಂಟರ್ನೆಟ್ ಸ್ಲೋ ಎಂದರೆ ಎದುರಿಸುವ ಸಮಸ್ಯೆ ಸಾವಿರ. ಲಾಕ್‌ಡೌನ್ ಸಮಯದಲ್ಲಿ ಮನೆಯಿಂದ ಕೆಲಸ ಮಾಡುವ ಬಹುತೇಕರಿಗೆ ನೆಟ್ ಸ್ಲೋ ಸಮಸ್ಯೆ ಆಗತ್ತಲೇ ಇದೆ. ಈ ಸಮಸ್ಯೆಗಳಿಗೆ ಮುಕ್ತಿ ನೀಡಲು ಇದೀಗ ಹೊಸ ಇಂಟರ್ನೆಟ್ ಸಂಶೋಧನೆ ಮಾಡಲಾಗಿದೆ. ಇದು ವಿಶ್ವದಲ್ಲೇ ಅತ್ಯಂತ ವೇಗದ ಇಂಟರ್ನೆಟ್ ಎಂಬ ದಾಖಲೆ ಬರೆದಿದೆ.
ಜಿಯೋ ವರ್ಕ್ ಫ್ರಂ ಹೋಂ ಧಮಾಕಾ; ವರ್ಷವಿಡಿ ಎಂಜಾಯ್ ಮಾಡಿ
1000 HD ಸಿನಿಮಾವನ್ನು ಅರ್ಧ ಸೆಕೆಂಡ್‌ನಲ್ಲಿ ಡೌನ್ಲೋಡ್ ಮಾಡಬಹುದು. ಕೇವಲ ಸಿಂಗಲ್ ಆಪ್ಟಿಕಲ್ ಚಿಪ್ ಬಳಕೆ ಮಾಡಿ ಆಸ್ಟ್ರೇಲಿಯಾದ RMIT, ಮೋನಾಶ್ ಹಾಗೂ ಸ್ವೈನ್‌ಬರ್ನ್ ವಿಶ್ವವಿದ್ಯಾಲಯ ಈ ಇಂಟರ್ನೆಟ್ ಸಂಶೋಧನೆ ಮಾಡಿದೆ.
ಹಲವು ದೇಶಗಳು ಇಂಟರ್ನೆಟ್ ಕುರಿತು ಸಂಶೋಧನೆ ನಡೆಸುತ್ತಿದೆ. ಆದರೆ ಆಸ್ಟ್ರೇಲಿಯಾ ಒಂದು ಹೆಜ್ಜೆ ಮುಂದೆ ಹೋಗಿ ಇದೀಗ ಅತ್ಯಂತ ವೇಗದ ಇಂಟರ್ನೆಟ್ ಸಂಶೋಧನೆ ಮಾಡಿದೆ. ಸಂಶೋಧನಾ ತಂಡವನ್ನು ಮುನ್ನಡೆಸಿದ ಮೋನಾಶ್ ವಿಶ್ವವಿದ್ಯಾಲಯದ ಫ್ರೋಫೆಸರ್ ಬಿಲ್ ಕೊರ್‌ಕೊರನ್ ಹಾಗೂ RMIT ವಿಶ್ವವಿದ್ಯಾಲಯದ ಅರ್ನನ್ ಮಿಚೆಲ್ ಹೊಸ ದಾಖಲೆ ಬರೆದಿದ್ದಾರೆ. ಸಂಶೋಧನೆಯಲ್ಲಿ ನೂತನ ಇಂಟರ್ನೆಟ್ ಸ್ಪೀಡ್ ಪ್ರತಿ ಸೆಕೆಂಡ್‌ಗೆ 44.2 ಟೆರಾಬೈಟ್ ಸ್ಪೀಡ್ ದಾಖಲಾಗಿದೆ.
ಸದ್ಯ ಆಪ್ಟಿಕಲ್ ಫೈಬರ್ ಲಿಂಕ್ಸ ಮೂಲಕ ಇಂಟರ್ನೆಟ್ ಸೇವೆ ನೀಡಲಾಗುತ್ತಿದೆ. ಆದರ ನೂತನ ಸಂಶೋಧನೆಯಲ್ಲಿ ಸಿಂಗಲ್ ಫೋಟೋನಿಕ್ ಚಿಪ್ ಬಳಕೆ ಮಾಡಲಾಗಿದೆ. ಹೀಗಾಗಿ ಇಂಟರ್ನೆಟ್ ಬೆಲೆಯೂ ಅಗ್ಗವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ