ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗುಡುಗಿದ ವಿಶ್ವಸಂಸ್ಥೆ ಅಧಿಕಾರಿಗೆ ಸಂಕಷ್ಟ, ಮಾನನಷ್ಟ ಕೇಸ್ ದಾಖಲು!

By Suvarna News  |  First Published May 23, 2020, 5:23 PM IST

ಬಿಜೆಪಿ ನಾಯಕ, ಖ್ಯಾತ ವಕೀಲ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗುಡುಗಿದರೆ ಸಂಕಷ್ಟ ತಪ್ಪಿದ್ದಲ್ಲ. ಹಲವು ಬಾರಿ ಸಾಬೀತಾಗಿದೆ. ಆದರೆ ಇದನ್ನು ಅರಿಯದ ವಿಶ್ವಸಂಸ್ಥೆ ಅಧಿಕಾರಿ ಉದ್ದುದ್ದ ಭಾಷಣ ಬಿಗಿದು ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಆದರೆ ಅಧಿಕಾರಿ ಭಾಷಣ ಮುಗಿಸಿ ಕೆಳೆಗಿಳಿಯುವಷ್ಟರಲ್ಲಿ ಸಂಕಷ್ಟ ಶುರುವಾಗಿದೆ. ವಿಶ್ವ ಸಂಸ್ಥೆ ಅಧಿಕಾರಿಯನ್ನು ಸುಬ್ರಮಣಿ ಸ್ವಾಮಿ ಕೋರ್ಟ್‌ಗೆಳೆದಿದ್ದಾರೆ. 


ನವದೆಹಲಿ(ಮೇ.23): ವಿಶ್ವ ಸಂಸ್ಥೆ ಮುಖ್ಯ ಕಾರ್ಯದರ್ಶಿ ಅಡಮಾ ಡಿಯಿಂಗ್ ಭಾರತದಲ್ಲಿನ ಪೌರತ್ವ ಕಾಯ್ದಿ ತಿದ್ದುಪಡಿ ಕುರಿತು ಉದ್ದುದ್ದ ಭಾಷಣ ಬಿಗಿದಿದ್ದಾರೆ. ಈ ವೇಳೆ ಭಾರತ ಮುಸ್ಲಿಂರಿಗೆ ಪ್ರಾಶಸ್ತ್ಯ ನೀಡಬೇಕಿತ್ತು. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆ ಎಂಬ ಕುರಿತು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಅಲ್ಲ ಇದರೊಂದಿಗೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಗಂಭೀರ ಆರೋಪ ಕೂಡ ಮಾಡಿದ್ದಾರೆ. ಇದೇ ಹೇಳಿಕೆ ವಿಶ್ವಸಂಸ್ಥೆ ಮುಖ್ಯ ಕಾರ್ಯದರ್ಶಿಗೆ ಸಂಕಷ್ಟ ತಂದಿಟ್ಟಿದೆ.

ರಾಹುಲ್ ಅಂಕಪಟ್ಟಿ ಶೇರ್ ಮಾಡಿ ವ್ಯಂಗ್ಯವಾಡಿದ ಸ್ವಾಮಿ

Latest Videos

undefined

ಎಲ್ಲರೂ ಸಮಾನರಲ್ಲ ಅದರಲ್ಲೂ ಮುಸ್ಲೀಮರು ಸಮಾನ ವರ್ಗದಲ್ಲಿಲ್ಲ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ. ಈ ಹೇಳಿಕೆ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ.  ಸ್ವಾಮಿ ಇದಕ್ಕೆ ದಂಡ ತೆರಬೇಕಾಗುತ್ತದೆ ಎಂದು  ಅಡಮಾ ಡಿಯಿಂಗ್ ಹೇಳಿದ್ದರು. ವಿಶ್ವ ಸಂಸ್ಥೆ ಕಾರ್ಯದರ್ಶಿ ಗಂಭೀರ ಆರೋಪ ಮಾಡಿದಾಗ ತಕ್ಷಣವೇ ಪ್ರತಿಕ್ರಿಯೆ ನೀಡಿದ ಸ್ವಾಮಿ, ನಾನು ಯಾವುದೇ ಭಾಷಣದಲ್ಲಿ ಅಥವಾ ಸಂದರ್ಶನದಲ್ಲಿ ಇಂತ ಹೇಳಿಕೆ ಕೊಟ್ಟಿಲ್ಲ. ಹೀಗಾಗಿ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದೇನೆ ಎಂದು ಸ್ವಾಮಿ ಹೇಳಿದ್ದಾರೆ.

ಪಾಕ್‌ನ್ನು 4 ಹೋಳು ಮಾಡೋದೊಂದೇ ಪರಿಹಾರ: ಸ್ವಾಮಿ!

ಸುಬ್ರಮಣಿಯನ್ ಸ್ವಾಮಿ ವಿಶ್ವ ಸಂಸ್ಥೆ ಮುಖ್ಯ ಕಾರ್ಯದರ್ಶಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೊಡಿದ್ದಾರೆ. ಬಳಿಕ ಟ್ವೀಟ್ ಮೂಲಕ  ಮಾಹಿತಿ ಬಹಿರಂಗ ಪಡಿಸಿದ್ದಾರೆ. ವಿಶ್ವಸಂಸ್ಥೆ ಕಾರ್ಯದರ್ಶಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡ ಹಾಗೂ ಇತರ ಹಿರಿಯರು ನನಹೆ ಬೆಂಬಲ ಸೂಚಿಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. 

 

I am honoured & encouraged to receive from the BJP National President J.P. Nadda and office bearers their best wishes for success on my endeavour to prosecute for defamation the United Nations Under Secretary General Mr. Adama Dieng. I am also thankful to the MEA for facilitation

— Subramanian Swamy (@Swamy39)

ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದ ವಿಶ್ವ ಸಂಸ್ಥೆ ಕಾರ್ಯದರ್ಶಿ ಇದೀಗ ಪೇಚಿಗೆ ಸಿಲುಕಿದ್ದಾರೆ. ಸ್ವಾಮಿ ಹೇಳಿಕೆಗಳೆನ್ನೆಲ್ಲಾ ಪರಿಶೀಲಿಸಿ ದಾಖಲೆಯಾಗಿ ನೀಡಲು ಹರಸಾಹಸ ಪಡುತ್ತಿದ್ದಾರೆ.

click me!