ಇತ್ತೀಚೆಗಷ್ಟೇ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಮರಳಿ ನೇಮಕಗೊಂಡ ಶೇಖ್ ಹಸೀನಾ ಅವರ ಪದಚ್ಯುತಿಯಲ್ಲಿ ಪಾತ್ರ ವಹಿಸಿತ್ತೇ ಎಂದು ತಿಳಿಯಲು ಅದರ ಕಾರ್ಯತಂತ್ರದ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.
ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಒಂದು ಅಘೋಷಿತ ಸ್ಥಳದಲ್ಲಿ ಸುರಕ್ಷಿತವಾಗಿ ವಾಸಿಸುತ್ತಿದ್ದಾರೆ. ಆದರೆ, ಶೇಖ್ ಹಸೀನಾ ಅವರು ಅಮೆರಿಕಾದ ಮೇಲೆ ಒಂದು ಗಂಭೀರ ಆರೋಪವನ್ನೇ ಹೊರಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿರುವ ಸೈಂಟ್ ಮಾರ್ಟಿನ್ಸ್ ದ್ವೀಪದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕಾ ಪ್ರಯತ್ನ ನಡೆಸಿ, ಅದಕ್ಕಾಗಿ ತನ್ನನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಹಸೀನಾ ಆರೋಪಿಸಿದ್ದಾರೆ. ಅದರೊಡನೆ, ತಾನು ಪ್ರತಿಭಟನಾಕಾರ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ರಜಾಕಾರರೆಂದು ಕರೆದಿರಲಿಲ್ಲ ಎಂದು ಶೇಖ್ ಹಸೀನಾ ಸ್ಪಷ್ಟಪಡಿಸಿದ್ದಾರೆ. 1971ರ ಬಾಂಗ್ಲಾ ವಿಮೋಚನಾ ಯುದ್ಧದ ಸಂದರ್ಭದಲ್ಲಿ ರಜಾಕಾರರು ಪಾಕಿಸ್ತಾನದ ಜೊತೆ ಕೈ ಜೋಡಿಸಿ, ಆವಾಮಿ ಲೀಗ್‌ನ ಸ್ವಾತಂತ್ರ್ಯ ಹೋರಾಟಗಾರರ, ಅದರಲ್ಲೂ ಹಿಂದೂಗಳ ಮೇಲೆ ಮೇರೆಯಿಲ್ಲದ ದೌರ್ಜನ್ಯಗಳನ್ನು ಎಸಗಿದ್ದರು.
undefined
ಮುಖ್ಯಭೂಮಿಯ ಆಚೆಗಿದೆ ಬಾಂಗ್ಲಾದ ದ್ವೀಪ
ಸ್ಥಳೀಯವಾಗಿ 'ನಾರಿಕೇಲ್ ಜಿ಼ಂಜಿರಾ' (ಅಂದರೆ, ಬೆಂಗಾಲಿ ಭಾಷೆಯಲ್ಲಿ ತೆಂಗಿನ ದ್ವೀಪ ಎಂದು ಅರ್ಥ) ಎಂದು ಕರೆಯಲ್ಪಡುವ ಸೈಂಟ್ ಮಾರ್ಟಿನ್ಸ್ ದ್ವೀಪ, ಇತ್ತೀಚೆಗಷ್ಟೇ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಮರಳಿ ನೇಮಕಗೊಂಡ ಶೇಖ್ ಹಸೀನಾ ಅವರ ಪದಚ್ಯುತಿಯಲ್ಲಿ ಪಾತ್ರ ವಹಿಸಿತ್ತೇ ಎಂದು ತಿಳಿಯಲು ಅದರ ಕಾರ್ಯತಂತ್ರದ ಮಹತ್ವವನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿರುವ ಸೈಂಟ್ ಮಾರ್ಟಿನ್ಸ್ ದ್ವೀಪ, ಬಾಂಗ್ಲಾದೇಶದ ಕಾಕ್ಸ್ ಬಜಾರ್ - ಟೆಕ್ನಾಫ್ ಪರ್ಯಾಯ ದ್ವೀಪದಿಂದ ಅಂದಾಜು 9 ಕಿಲೋಮೀಟರ್ ದೂರದಲ್ಲಿದೆ.
ಮಾಸ್ಕೋದಲ್ಲಿ ಮೋದಿ: ರಾಜತಾಂತ್ರಿಕತೆ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಮತೋಲನದ ನಾಜೂಕಿನ ಹಾದಿ
ಶೇಖ್ ಹಸೀನಾ ಅವರ ಬೆಂಬಲಿಗರು ಈ ಕುರಿತು ಆರೋಪಗಳನ್ನು ಮಾಡುತ್ತಿದ್ದು, ಹಸೀನಾ ಎದುರಾಳಿ, ಮಾಜಿ ಪ್ರಧಾನ ಮಂತ್ರಿ ಖಲೀದಾ ಜಿಯಾ ಅವರು ದ್ವೀಪವನ್ನು ಮಾರಿಬಿಡಲು ಆಲೋಚಿಸುತ್ತಿದ್ದಾರೆ ಎಂದಿದ್ದಾರೆ. ಖಲೀದಾ ಜಿಯಾ ಸೈಂಟ್ ಮಾರ್ಟಿನ್ಸ್ ದ್ವೀಪವನ್ನು ಅಮೆರಿಕಾದ ಕಾರ್ಯತಂತ್ರಗಳಿಗೆ ಅದರ ಕೈಗೊಪ್ಪಿಸಿ, ಅದಕ್ಕೆ ಪ್ರತಿಯಾಗಿ ಮರಳಿ ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೇರುವ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹಸೀನಾ ಬೆಂಬಲಿಗರು ದೂರಿದ್ದಾರೆ. ಆದರೆ, ಅಮೆರಿಕಾ ಇಂತಹ ಆರೋಪಗಳನ್ನು ಅಲ್ಲಗಳೆದಿದ್ದು, ತಾನು ಬಾಂಗ್ಲಾದೇಶದ ಸಾರ್ವಭೌಮತ್ವಕ್ಕೆ ಸಂಪೂರ್ಣ ಗೌರವ ನೀಡುತ್ತೇನೆ, ಮತ್ತು ಬಾಂಗ್ಲಾದೇಶದ ಆಂತರಿಕ ವಿಚಾರಗಳಲ್ಲಿ ಮಧ್ಯಪ್ರವೇಶ ಮಾಡುವ ಯಾವುದೇ ಉದ್ದೇಶ ತನ್ನ ಮುಂದಿಲ್ಲ ಎಂದು ಹೇಳಿಕೆ ನೀಡಿದೆ.
ಸಾಂಸ್ಕೃತಿಕ ಮೂಲಗಳು: ಬಾಂಗ್ಲಾದೇಶ ಟೂರಿಸಂ ಕಾರ್ಪೋರೇಷನ್ ಪ್ರಕಾರ, ಈ ದ್ವೀಪಕ್ಕೆ ಮಾರ್ಟಿನ್ ಎಂಬ ಕ್ರೈಸ್ತ ಮಿಷನರಿಯ ಹೆಸರನ್ನು ಇಡಲಾಗಿದೆ. 1890ರ ದಶಕದಲ್ಲಿ, ಈ ದ್ವೀಪದಲ್ಲಿ ಮೀನುಗಾರರು ನೆಲೆಸಲು ಆರಂಭಿಸಿದರು. ಅವರಲ್ಲಿ ಬೆಂಗಾಳಿಗಳು ಮತ್ತು ರಖಿನ್ ಸಮುದಾಯಕ್ಕೆ ಸೇರಿದ ಜನರೂ ಇದ್ದರು. ಆದರೆ ಕಾಲ ಕಳೆದಂತೆ, ಸೈಂಟ್ ಮಾರ್ಟಿನ್ಸ್ ದ್ವೀಪದಲ್ಲಿ ಬಹುಪಾಲು ಬಂಗಾಳಿ ಭಾಷಿಕರು ಹೆಚ್ಚಾದರು. ಇಂದು ಸೈಂಟ್ ಮಾರ್ಟಿನ್ಸ್ ದ್ವೀಪ ಬಾಂಗ್ಲಾದೇಶದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಐತಿಹಾಸಿಕ ಸಂಪರ್ಕಗಳು: ಸೈಂಟ್ ಮಾರ್ಟಿನ್ಸ್ ದ್ವೀಪ ಆರಂಭದಲ್ಲಿ ಪೂರ್ವ ಪಾಕಿಸ್ತಾನದ ಭಾಗವಾಗಿತ್ತು. 1971ರಲ್ಲಿ ಪೂರ್ವ ಪಾಕಿಸ್ತಾನ ಬಾಂಗ್ಲಾದೇಶವಾಗಿ ಮಾರ್ಪಾಡಾದ ಬಳಿಕ, ಅದು ಬಾಂಗ್ಲಾದೇಶದ ಭಾಗವಾಯಿತು. ಅಂದಿನಿಂದ ಅದು ನಿರಂತರವಾಗಿ ಬಾಂಗ್ಲಾದೇಶದ ಅವಿಭಾಜ್ಯ ಅಂಗವಾಗಿದೆ.
ಭೌಗೋಳಿಕ ಸ್ಥಾನ: ಸೈಂಟ್ ಮಾರ್ಟಿನ್ಸ್ ದ್ವೀಪ ಬಾಂಗ್ಲಾದೇಶದ ಕರಾವಳಿ ತೀರದಿಂದ ಕೇವಲ 9 ಕಿಲೋಮೀಟರ್ ದೂರದಲ್ಲಿದೆ. ಆದ್ದರಿಂದ ಈ ದ್ವೀಪ ಮಯನ್ಮಾರ್‌ಗಿಂತ ಹೆಚ್ಚಾಗಿ ಬಾಂಗ್ಲಾದೇಶಕ್ಕೆ ಹತ್ತಿರವಿದೆ. ಮಯನ್ಮಾರ್ ಪೂರ್ವ ದಿಕ್ಕಿನಲ್ಲಿ ಇನ್ನಷ್ಟು ದೂರದಲ್ಲಿದೆ.
ಸಮುದ್ರದ ಗಡಿ: ತೀರಾ ಇತ್ತೀಚಿನ ತನಕವೂ ಬಾಂಗ್ಲಾದೇಶ ಮತ್ತು ಮಯನ್ಮಾರ್ ನಡುವಿನ ಸಾಗರ ಗಡಿಯನ್ನು ಸ್ಪಷ್ಟವಾಗಿ ಗುರುತಿಸಲಾಗಿರಲಿಲ್ಲ. ಮಾತುಕತೆಗಳು ಮತ್ತು ಅಂತಾರಾಷ್ಟ್ರೀಯ ನಿರ್ಣಯಗಳ ಮೂಲಕ ಬಾಂಗ್ಲಾದೇಶ ದ್ವೀಪದ ಮೇಲೆ ತನ್ನ ಹಕ್ಕು ಬಲಪಡಿಸಿತು. ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ದ್ವೀಪ ಬಾಂಗ್ಲಾದೇಶದ ಆರ್ಥಿಕ ವಲಯಕ್ಕೆ ಸೇರುತ್ತದೆ.
ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧ: ಸೈಂಟ್ ಮಾರ್ಟಿನ್ಸ್ ದ್ವೀಪದ ಬಹುಪಾಲು ಜನರು ಬಾಂಗ್ಲಾದೇಶಿಗಳಾಗಿದ್ದು, ವ್ಯಾಪಾರ, ಸಂಪನ್ಮೂಲ, ಹಾಗೂ ಮೂಲಭೂತ ವ್ಯವಸ್ಥೆಗಳಿಗಾಗಿ ಬಾಂಗ್ಲಾದೇಶದ ಮೇಲೆ ಅವಲಂಬನೆ ಹೊಂದಿದ್ದಾರೆ.
ಆಡಳಿತಾತ್ಮಕ ಒಳಗೊಳ್ಳುವಿಕೆ: ಸೈಂಟ್ ಮಾರ್ಟಿನ್ಸ್ ದ್ವೀಪ ಬಾಂಗ್ಲಾದೇಶದ ಆಗ್ನೇಯ ಭಾಗದ ಕಾಕ್ಸ್ ಬಜಾರ್ ಜಿಲ್ಲೆಯ ಭಾಗವಾಗಿದ್ದು, ಬಾಂಗ್ಲಾದೇಶದ ಕಾನೂನುಗಳು ಅಲ್ಲಿಗೂ ಅನ್ವಯಿಸುತ್ತವೆ.
ದ್ವೀಪದ ಆರ್ಥಿಕತೆ: ಸೈಂಟ್ ಮಾರ್ಟಿನ್ಸ್ ದ್ವೀಪ ಅಂದಾಜು 3,700 ಜನಸಂಖ್ಯೆ ಹೊಂದಿದ್ದು, ಮುಖ್ಯವಾಗಿ ಮೀನುಗಾರಿಕೆ, ಭತ್ತದ ಬೆಳೆ, ತೆಂಗು ಬೆಳೆ ಮತ್ತು ಸಮುದ್ರ ಕಳೆಗಳ ಸಂಗ್ರಹದ ಕಾರ್ಯ ನಡೆಸುತ್ತಾರೆ. ಅವರು ತಮ್ಮ ಉತ್ಪನ್ನಗಳನ್ನು ಒಣಗಿಸಿ, ಮಯನ್ಮಾರ್‌ಗೆ ರಫ್ತು ಮಾಡುತ್ತಾರೆ. ಈ ಮೂಲಕ, ಸೈಂಟ್ ಮಾರ್ಟಿನ್ ದ್ವೀಪ ಪ್ರವಾಸೋದ್ಯಮ ಮತ್ತು ವ್ಯಾಪಾರ ಎರಡರಲ್ಲೂ ಮುಖ್ಯವಾಗಿದೆ. ಇದೊಂದು ಬಹಳ ಸಣ್ಣ ದ್ವೀಪವಾಗಿದ್ದು, ಕೇವಲ 3 ಚದರ ಕಿಲೋಮೀಟರ್ ವ್ಯಾಪ್ತಿ ಹೊಂದಿದೆ. ವಿಶಾಲ ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಸೈಂಟ್ ಮಾರ್ಟಿನ್ಸ್ ದ್ವೀಪವಿದೆ.
ಸೈಂಟ್ ಮಾರ್ಟಿನ್ಸ್ ದ್ವೀಪದ ಕಾರ್ಯತಂತ್ರದ ಮಹತ್ವ
* ಸೈಂಟ್ ಮಾರ್ಟಿನ್ಸ್ ದ್ವೀಪ ತನ್ನ ಸ್ಥಾನದ ಕಾರಣದಿಂದಾಗಿ ಕಾರ್ಯತಂತ್ರದಲ್ಲಿ ಮಹತ್ತರ ಮೇಲುಗೈ ಒದಗಿಸಬಲ್ಲದು. ಯಾವುದೇ ದೇಶ ಇಲ್ಲಿ ಮಿಲಿಟರಿ ನೆಲೆ ಸ್ಥಾಪಿಸಲು ಸಾಧ್ಯವಾದರೆ, ಅದರಿಂದ ಭಾರೀ ಅನುಕೂಲಗಳಿವೆ. ಮುಖ್ಯವಾಗಿ, ಈ ದ್ವೀಪ ಮಲಾಕ್ಕಾ ಜಲಸಂಧಿಯ ಸನಿಹದಲ್ಲಿದ್ದು, ಇದು ಚೀನಾ ಸಾಗಾಣಿಕೆಗೆ ಅತ್ಯಧಿಕವಾಗಿ ಬಳಸುವ ಸಮುದ್ರ ಮಾರ್ಗವಾಗಿದೆ.
* ಸೈಂಟ್ ಮಾರ್ಟಿನ್ಸ್ ದ್ವೀಪ ಇರುವ ವಿಶಿಷ್ಟ ಸ್ಥಾನದಿಂದಾಗಿ, ಚೀನಾ ಮಾತ್ರವಲ್ಲದೆ, ಮಯನ್ಮಾರ್, ಮತ್ತು ಭಾರತದ ಚಟುವಟಿಕೆಗಳನ್ನೂ ಗಮನಿಸಲು ಸಾಧ್ಯವಾಗುತ್ತದೆ.
* ಇಂಡೋ ಪೆಸಿಫಿಕ್ ಪ್ರದೇಶದ ಮೇಲೆ ಚೀನಾ ತನ್ನ ಪ್ರಭಾವ ಬೀರಲು ಪ್ರಯತ್ನ ನಡೆಸುವುದನ್ನು ಮುಂದುವರಿಸಿದೆ. ಆದರೆ, ಈ ದ್ವೀಪ ಚೀನಾದ ಉಪಸ್ಥಿತಿಗೆ ಸವಾಲೆಸೆಯುವ ಮಹತ್ತರ ಸ್ಥಾನದಲ್ಲಿದೆ.
* ಇನ್ನು ಇಂಧನ ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ, ತೀರದಿಂದ ದೂರದ ಸಂಭಾವ್ಯ ಅನಿಲ ನಿಕ್ಷೇಪಗಳಿಗೆ ಸೈಂಟ್ ಮಾರ್ಟಿನ್ಸ್ ದ್ವೀಪ ಸನಿಹದಲ್ಲಿರುವ ಸಾಧ್ಯತೆಗಳಿಂದ, ಇಂಧನ ಅನ್ವೇಷಣೆ ಮತ್ತು ಉತ್ಪಾದನೆಯಲ್ಲಿ ಇದು ಮಹತ್ತರ ತಾಣವಾಗಿದೆ.
ಸಿಲಿಕಾನ್ ಸಿಟಿಯ ಕರಾಳ ಮುಖ: ಬೆಂಗಳೂರಿನ ಸುವ್ಯವಸ್ಥೆಗೆ ಸವಾಲಾದ ಬೈಕರ್ ಗ್ಯಾಂಗ್‌ಗಳು ಮತ್ತು ಭ್ರಷ್ಟಾಚಾರ
ಬಾಂಗ್ಲಾದೇಶವನ್ನು ಹೊರತುಪಡಿಸಿ, ಅಮೆರಿಕಾದಂತಹ ಯಾವುದಾದರೂ ವಿದೇಶೀ ಶಕ್ತಿ ಸೈಂಟ್ ಮಾರ್ಟಿನ್ಸ್ ದ್ವೀಪದ ಮೇಲೆ ಹಿಡಿತ ಸಾಧಿಸಿದರೆ, ಇದು ಮಿಲಿಟರಿ, ಕಾರ್ಯತಂತ್ರ ಮತ್ತು ಆರ್ಥಿಕ ಕ್ರಮಗಳು ಸೇರಿದಂತೆ, ಬಾಂಗ್ಲಾದೇಶದ ಎಲ್ಲ ಚಟುವಟಿಕೆಗಳ ಮೇಲೆ ಕಣ್ಣಿಡಲು ಕಣ್ಗಾವಲು ತಾಣದಂತಾಗುತ್ತದೆ. ಇಂತಹ ನಿಯಂತ್ರಣದ ಕಾರಣದಿಂದಾಗಿ, ಇತರ ಪ್ರಾದೇಶಿಕ ಶಕ್ತಿಗಳು ಈ ಪ್ರದೇಶದಲ್ಲಿ ಪ್ರಭಾವ ಹೊಂದಲು ಸಾಧ್ಯವಾಗುವುದಿಲ್ಲ. ಇಂತಹ ಹೆಜ್ಜೆ ಮಯನ್ಮಾರ್ ಮೂಲಕ ಬಾಂಗ್ಲಾದೇಶವನ್ನು ತಲುಪುವ ಚೀನಾದ ಮಹತ್ವಾಕಾಂಕ್ಷಿ 'ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್'ಗೆ ಭಾರೀ ಹಿನ್ನಡೆ ಉಂಟುಮಾಡಬಲ್ಲದು. ಇದರಿಂದ ಚೀನಾಗೆ ಆರ್ಥಿಕ ಮತ್ತು ಕಾರ್ಯತಂತ್ರದ ಮೇಲುಗೈ ಸಾಧಿಸುವುದು ಕಷ್ಟಕರವಾಗಬಹುದು.