ಬಾಂಗ್ಲಾದೇಶ ಪ್ರತಿಭಟನೆಯಲ್ಲಿ ಅತೀ ಹೆಚ್ಚು ಹಿಂದೂಗಳು ಗುರಿಯಾಗಿದ್ದಾರೆ. ಹಿಂದೂಗಳ ಮೇಲಿನ ದಾಳಿ ವಿರುದ್ಧ ಇದೀಗ ಸೋಶಿಯಲ್ ಮೀಡಿಯಾದಲ್ಲಿ All eyes on hindus ಅಭಿಯಾನ ತೀವ್ರತೆ ಪಡೆದುಕೊಳ್ಳುತ್ತಿದೆ.
ಢಾಕ(ಆ.13) ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ಅತೀ ಹೆಚ್ಚು ದಾಳಿಗೊಳಗಾದ ಸಮುದಾಯ ಎಂದರೆ ಹಿಂದೂಗಳು. ವಿದ್ಯಾರ್ಥಿಗಳ ಪ್ರತಿಭಟನೆ ಹೈಜಾಕ್ ಆಗಿ ಇದೀಗ ಹಿಂದೂಗಳನ್ನೇ ಟಾರ್ಗೆಟ್ ಮಾಡಿ ದಾಳಿ ನಡೆಯುತ್ತಿದೆ. ಶೇಕ್ ಹಸೀನಾ ಪ್ರಧಾನಿ ಹುದ್ದೆಯಿಂದ ನಿರ್ಗಮನದ ಬಳಿಕ ಇದೀಗ ಮೊಹಮ್ಮದ್ ಯೂನಸ್ ಅಧಿಕಾರ ವಹಿಸಿಕೊಂಡರೂ ದಾಳಿ ಕಡಿಮೆಯಾಗಿಲ್ಲ. ಈ ದಾಳಿ ಖಂಡಿಸಿ ಬಾಂಗ್ಲಾದೇಶದ ಹಿಂದೂಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ ಸೇರಿ ಪ್ರತಿಭಟನೆ ನಡೆಸಿದ್ದಾರೆ. ಭಾರತ, ಅಮೆರಿಕ, ಲಂಡನ್ ಸೇರಿದಂತೆ ವಿಶ್ವದ ಹಲವು ಭಾಗಗಳಲ್ಲಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಕಣ್ಣು ಹಿಂದೂಗಳ ಮೇಲೆ( All eyes on hindus) ಟ್ರೆಂಡ್ ಆಗಿದೆ.
ಆಲ್ ಐಯ್ಸ್ ಆನ್ ಹಿಂದೂಸ್ ಜಾಗೃತಿ ಅಭಿಯಾನದ ಹಿಂದೆ ಮತ್ತೊಂದು ಕತೆ ತೆರೆದುಕೊಳ್ಳುತ್ತಿದೆ. ಗಾಜಾದಲ್ಲಿ ಇಸ್ರೇಲ್ ದಾಳಿಗೆ ಪ್ರತಿಯಾಗಿ ಸೋಶಿಯಲ್ ಮೀಡಿಯಾದಲ್ಲಿ ಆಲ್ ಐಯ್ಸ್ ಆನ್ ರಾಫಾ ಅನ್ನೋ ಸೋಶಿಯಲ್ ಮೀಡಿಯಾ ಅಭಿಯಾನ ನಡೆಸಲಾಗಿತ್ತು. ಸೆಲೆಬ್ರೆಟಿಗಳು, ಅಂತಾರಾಷ್ಟ್ರೀಯ ಗಣ್ಯರು, ಭಾರತದ ಹಲವರು ಈ ಅಭಿಯಾನಕ್ಕೆ ಬೆಂಬಲ ನೀಡಿದ್ದರು. ಇದೀಗ ಬಾಂಗ್ಲಾದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಇದೇ ರೀತಿ ಆಲ್ ಐಯ್ಸನ್ ಆನ್ ಹಿಂದೂಸ್ ಅಭಿಯಾನ ಆರಂಭಿಸಲಾಗಿದೆ. ಆದರೆ ಈ ಬಾರಿ ಹೆಚ್ಚಿನ ಸೆಲೆಬ್ರೆಟಿಗಳು ಮೌನವಾಗಿದ್ದಾರೆ, ಗಣ್ಯರು ದೂರ ಉಳಿದಿದ್ದಾರೆ ಅನ್ನೋ ಆರೋಪಗಳು ಕೇಳಿಬರುತ್ತಿದೆ.
ಪತ್ನಿಯನ್ನು ಬಾಂಗ್ಲಾ ಪ್ರಧಾನಿ ಮಾಡುತ್ತೇನೆ, ಶೇಕ್ ಹಸೀನಾ ಸೀರೆ ಸೂಟ್ ಕದ್ದವನ ವೀರಾವೇಶದ ಮಾತು!
1971ರ ಬಾಂಗ್ಲಾ ವಿಮೋಚನೆಗೆ ಹೋರಾಡಿದ ಸ್ವಾತಂತ್ರ್ಯ ವೀರರ ಮೊಮ್ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಶೇಕಡಾ 30 ರಷ್ಟು ಮೀಸಲಾತಿ ಈ ಹೋರಾಟದ ಹುಟ್ಟು. ವಿದ್ಯಾರ್ಥಿಗಳಿಂದ ಈ ಹೋರಾಟ ಆರಂಭಗೊಂಡಿತ್ತು. ನಿಧಾನವಾಗಿ ಈ ಪ್ರತಿಭಟನೆ ಹೈಜಾಕ್ ಆಗಿತ್ತು ಎಂದು ವರದಿಗಳು ಹೇಳುತ್ತಿದೆ. ಭಾರಿ ಪ್ರತಿಭಟನೆಯಿಂದ ಬಾಂಗ್ಲಾದೇಶ ಸೇನೆ ನೀಡಿದ ಸೂಚನೆ ಮೇರೆಗೆ ಪ್ರಧಾನಿ ಹುದ್ದೆಗೆ ಶೇಕ್ ಹಸೀನಾ ರಾಜೀನಾಮೆ ನೀಡಿ ಪರಾರಿಯಾಗಿದ್ದರು.
ಶೇಕ್ ಹಸೀನಾ ಪರಾರಿಯಾಗುತ್ತಿದ್ದಂತೆ ಪ್ರಧಾನಿ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದರು. ಸಿಕ್ಕ ಸಿಕ್ಕ ವಸ್ತುಗಳನ್ನು ಕದ್ದೊಯ್ದಿದ್ದರು. ಬಳಿಕ ಹಿಂಸಾಚಾರ ತೀವ್ರಗೊಂಡಿತು. ಈ ಪೈಕಿ ಹಿಂದೂಗಳ ಮೇಲೆ ಸತತ ದಾಳಿ ನಡೆದಿದೆ. ಹಿಂದೂ ಹೆಣ್ಣುಮಕ್ಕಳ ಅಪಹರಣ, ದೌರ್ಜನ್ಯಗಳು ಎಗ್ಗಿಲ್ಲದೆ ನಡೆದಿರುವ ಕುರಿತು ವರದಿಯಾಗಿದೆ.
ಹಿಂದೂಗಳ ಮನೆ ನುಗ್ಗಿದ ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಹಲವರು ಬಲಿಯಾಗಿದ್ದಾರೆ, ಗಾಯಗೊಂಡವರ ಸಂಖ್ಯೆ ಪ್ರಮಾಣವೂ ಹೆಚ್ಚಿದೆ. ಹೀಗಾಗಿ ಹಿಂದೂಗಳ ಮೇಲೆ ಎಲ್ಲರ ಕಣ್ಣು ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ತೀವ್ರತೆ ಪಡೆದುಕೊಳ್ಳುತ್ತಿದೆ. ಬಾಂಗ್ಲಾದೇಶದಲ್ಲಿ 7 ಲಕ್ಷ ಅಧಿಕ ಹಿಂದೂಗಳು ದಾಳಿ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಬಾಂಗ್ಲಾದೇಶ ನಮ್ಮ ತಾಯ್ನಾಡು, ಇಲ್ಲಿಂದ ಪರಾರಿಯಾಗುವ ಮಾತಿಲ್ಲ. ನಾವಿಲ್ಲಿ ಶಾಂತಿಯುತವಾಗಿ ಬದುಕಲು ಅವಕಾಶ ಮಾಡಿಕೊಡಿ ಎಂದು ಪ್ರತಿಭಟನೆ ನಡೆಸಿದ್ದರು.
ಬಾಂಗ್ಲಾ ದಂಗೆ ಹಿಂದೆ ಪಾಕ್ ಕೈವಾಡ ಶಂಕೆ : ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಹೈ ಅಲರ್ಟ್
1971ರ ಬಾಂಗ್ಲಾದೇಶ ಸ್ವಾತಂತ್ರ್ಯದ ವೇಳೆ ಬರೋಬ್ಬರಿ 2.5 ಲಕ್ಷ ಹಿಂದೂಗಳ ಹತ್ಯೆ ನಡೆದಿತ್ತು. ಬಳಿಕ ಹಂತ ಹಂತವಾಗಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಲೇ ಬಂದಿದೆ. ಇದೀಗ ಮತೊಮ್ಮೆ ಹಿಂದೂಗಳ ಮೇಲೆ ದಾಳಿಯಾಗುತ್ತಿದೆ. ಹತ್ಯಾಕಾಂಡಕ್ಕೆ ಮುನ್ನುಡಿ ಬರೆಯುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ.