ಹಿಜಾಬ್ ಧರಿಸಿಲ್ಲ ಎಂದು ಮಹಿಳೆಗೆ ಗುಂಡಿಕ್ಕಿದ ಪೊಲೀಸ್

By Anusha KbFirst Published Aug 13, 2024, 3:35 PM IST
Highlights

ಹಿಜಾಬ್ ವಿರೋಧಿಸಿ ಬಳಿಕ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದ  ಮಹ್ಶಾ ಅಮಿನಿ ಪ್ರಕರಣ ನಡೆದು ಅಂದಾಜು ಒಂದೂವರೆ ವರ್ಷದ ನಂತರ ಇರಾನ್‌ನಲ್ಲಿ ಮತ್ತೊಂದು ಹಿಜಾಬ್ ಸಂಬಂಧಿತ ಗಲಾಟೆಯಲ್ಲಿ ಯುವತಿಯೊಬ್ಬಳಿಗೆ ಪೊಲೀಸರು ಗುಂಡಿಕ್ಕಿದ್ದಾರೆ.

ತೆಹ್ರಾನ್: ಹಿಜಾಬ್ ವಿರೋಧಿಸಿ ಬಳಿಕ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲೇ ಸಾವನ್ನಪ್ಪಿದ್ದ  ಮಹ್ಶಾ ಅಮಿನಿ ಪ್ರಕರಣ ನಡೆದು ಅಂದಾಜು ಒಂದೂವರೆ ವರ್ಷದ ನಂತರ ಇರಾನ್‌ನಲ್ಲಿ ಮತ್ತೊಂದು ಹಿಜಾಬ್ ಸಂಬಂಧಿತ ಗಲಾಟೆಯಲ್ಲಿ ಯುವತಿಯೊಬ್ಬಳಿಗೆ ಪೊಲೀಸರು ಗುಂಡಿಕ್ಕಿದ್ದಾರೆ. ಈ ಘಟನೆ ಈಗ ಇರಾನ್‌ನಲ್ಲಿ ಮತ್ತೊಮ್ಮೆ ಕಡ್ಡಾಯ ಹಿಜಾಬ್ ವಿರೋಧಿ ಬೃಹತ್ ಹೋರಾಟಕ್ಕೆ ಪುಷ್ಠಿ ನೀಡುವ ಸಾಧ್ಯತೆ ಇದೆ.

ವಾಹನ ಚಾಲನೆಯಲ್ಲಿದ್ದ 31 ವರ್ಷದ ಇರಾನ್ ಮಹಿಳೆ ಅರಿಝೋ ಬದ್ರಿ ಎಂಬುವವರಿಗೆ ಸರಿಯಾಗಿ ಹಿಜಾಬ್ ಧರಿಸಿಲ್ಲ ಎಂದು ಪೊಲೀಸರು ಗುಂಡಿಕ್ಕಿದ್ದಾರೆ. ಇದರಿಂದ ಆಕೆ ಪಾರ್ಶ್ವವಾಯುವಿಗೆ ಒಳಗಾಗಿದ್ದಾಳೆ. ಕಡ್ಡಾಯವಾದ ಕಠಿಣ ಹಿಜಾಬ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಘಟನೆ ನಡೆಯುವ ವೇಳೆ ಆಕೆ ತನ್ನ ಸೋದರಿ ಜೊತೆ ವಾಹನ ಚಾಲನೆ ಮಾಡಿಕೊಂಡು ಉತ್ತರ ಇರಾನ್‌ನ ನೂರು ನಗರದಲ್ಲಿರುವ ತನ್ನ ಮನೆಯತ್ತ ಹೋಗುತ್ತಿದ್ದಳು.

Latest Videos

WATCH: ಹಿಜಾಬ್ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಹಾಡು ಹಾಡಿದ್ದಕ್ಕೆ ಬಂಧಿಸಿ ಜೈಲಿಗಟ್ಟಿದ ಇರಾನ್!

ವರದಿಗಳ ಪ್ರಕಾರ ಜೂನ್‌ 22 ರಂದು ಈ ಗುಂಡಿಕ್ಕಿದ ಘಟನೆ ನಡೆದಿದ್ದು, ಪೊಲೀಸರ ಬುಲೆಟ್‌ ಆಕೆಯ ಶ್ವಾಸಕೋಶವನ್ನು ಸೇರಿದೆ ಜೊತೆಗೆ ಆಕೆಯ ಬೆನ್ನುಹುರಿಗೆ ಗಂಭೀರವಾದ ಹಾನಿ ಮಾಡಿದೆ. ಇದರ ಜೊತೆಗೆ ಆಕೆಗೆ ಉಂಟಾಗಿರುವ ಪಾರ್ಶ್ವವಾಯು ತಾತ್ಕಾಲಿಕವಾದುದ್ದೇ ಅಥವಾ ಶಾಶ್ವತವಾದುದ್ದೇ ಎಂಬುದು ಕೂಡ ಗೊತ್ತಾಗಿಲ್ಲ, ಆಕೆಯ ದೇಹದ ಸೊಂಟದ ಕೆಳಭಾಗ ಪೂರ್ತಿ ಪಾರ್ಶ್ವವಾಯುವಿಗೆ ತುತ್ತಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಅಂದು ನಡೆದಿದ್ದೇನು?

ಜೂನ್ 22 ರಂದು ಪೊಲೀಸರು ಅರಿಝೋ ಬದ್ರಿ ಡ್ರೈವ್ ಮಾಡ್ತಿದ್ದ ಕಾರನ್ನು ಪೊಲೀಸರು ಪಕ್ಕಕ್ಕೆ ಹಾಕಲು ಹೇಳಿದ್ದಾರೆ. ಆದರೆ ಆಕೆ ಅವರ ಆದೇಶಕ್ಕೆ ಕ್ಯಾರೇ ಅನ್ನದಿದ್ದಾಗ ಆಕೆಗೆ ಗುಂಡಿಕ್ಕಿದ್ದಾರೆ. ಇದಾಗಿ ಸುಮಾರು 10 ದಿನಗಳ ನಂತರ ಆಕೆಯ ದೇಹದಿಂದ ಬುಲೆಟ್ ಹೊರತೆಗೆಯಲಾಗಿದೆ. ಗುಂಡೇಟಿಗೆ ಒಳಗಾದ ಅರಿಝೋಳನ್ನು ನೂರ್‌ ನಗರದ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಅಲ್ಲದೇ ನಂತರ ತೆಹ್ರಾನ್‌ನಲ್ಲಿರುವ ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಆಕೆಯನ್ನು ಪ್ರಾದೇಶಿಕ ರಾಜಧಾನಿ ಸರಿಯಲ್ಲಿರುವ ಆಸ್ಪತ್ರೆಗೂ ಕರೆದೊಯ್ಯಲಾಗಿತ್ತು. ಆದರೆ ಘಟನೆ ನಡೆದ 10 ದಿನದ ನಂತರವಷ್ಟೇ ಆಕೆಯ ದೇಹದಿಂದ ಬುಲೆಟ್ ಹೊರತೆಗೆಯಲಾಯ್ತು. 

ಇರಾನ್‌ಗೆ ಪ್ರಯಾಣಿಸೋ ಭಾರತೀಯರು ಸೇರಿ 33 ದೇಶಗಳಿಗೆ ಇನ್ಮುಂದೆ ವೀಸಾ ಬೇಡ: ಇಸ್ಲಾಂ ದೇಶದ ಮಹತ್ವದ ನಿರ್ಧಾರ!

2022ರಲ್ಲಿ ಇದೇ ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದ ಮಹ್ಶಾ ಅಮಿನಿಯನ್ನು ಪೊಲೀಸರು ಬಂಧಿಸಿದ್ದರು. ಇದಾದ ನಂತರ ಆಕೆ ಪೊಲೀಸ್ ಲಾಕಪ್‌ನಲ್ಲೇ ಸಾವನ್ನಪ್ಪಿದ್ದಳು. ಪೊಲೀಸ್ ಕಸ್ಟಡಿಯಲ್ಲಿ ಆಕೆಯ ಅಸಹಜ ಸಾವು ಖಂಡಿಸಿ ಇರಾನ್‌ನಲ್ಲಿ ಬೃಹತ್ ಹೋರಾಟ ನಡೆದಿತ್ತು. ಇರಾನ್ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದು ವಿಶ್ವದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಹಿಜಾಬ್ ವಿರೋಧಿ ಪ್ರತಿಭಟನಾಕಾರರು ದೇಶದಲ್ಲಿ ಇಸ್ಲಾಮಿಕ್ ಆಡಳಿತದ ಅಂತ್ಯಕ್ಕೆ ಕರೆ ನೀಡಿದ್ದರು. ಈ ಪ್ರತಿಭಟನೆಯನ್ನು ಕಠಿಣ ಕ್ರಮಗಳ ಮೂಲಕ ಅಲ್ಲಿನ ಇಸ್ಲಾಮಿಕ್ ಸರ್ಕಾರ ಹತ್ತಿಕ್ಕಿತ್ತು. 

ಕಾಲೇಜಲ್ಲಿ ಹಿಜಾಬ್‌ ನಿಷೇಧ ತಪ್ಪಲ್ಲ: ಬಾಂಬೆ ಹೈಕೋರ್ಟ್‌

1979ರಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನಲ್ಲಿ ಮಹಿಳೆಯರಿಗೆ ಕಠಿಣ ಹಾಗೂ ಶಿಸ್ತುಬದ್ಧವಾದ ವಸ್ತ್ರಸಂಹಿತೆ ಇದೆ. ಮಹಿಳೆಯರಿಗಾಗಿ ಕಠಿಣ ಹಿಜಾಬ್ ಕಾನೂನು ಇದ್ದು, ಹಿಜಾಬ್ ಧರಿಸದೇ ಇರುವವರನ್ನು ಕಠಿಣವಾಗಿ ಶಿಕ್ಷಿಸಲಾಗುತ್ತದೆ. ಈ ಕಾನೂನಿನಡಿ ಹಿಜಾಬ್ ಧರಿಸದವರಿಗೆ ಜೈಲು ಶಿಕ್ಷೆಯೂ ಆಗುತ್ತದೆ. ಆದರೆ ಇದಕ್ಕೂ ಮೊದಲು ಇರಾನ್‌ನಲ್ಲಿಯೂ ಮಹಿಳೆಯರು ಇತರ ಪಾಶ್ಚಿಮಾತ್ಯ ದೇಶಗಳಂತೆ ಬಿಂದಾಸ್ ಬಟ್ಟೆಗಳನ್ನು ಧರಿಸಿ ಓಡಾಡುತ್ತಿದ್ದರು. 

click me!