452 ಕೋಟಿ ಮೌಲ್ಯದ ಡ್ರಗ್ಸ್: ಅಂತಾರಾಷ್ಟ್ರೀಯ ಜಾಲಕ್ಕೆ ಟೊರಂಟೋ ಪೊಲೀಸರ ಬ್ರೇಕ್!

By Suvarna NewsFirst Published Jun 28, 2021, 11:55 AM IST
Highlights

* ಅಂತಾರಾ‍ಷ್ಟ್ರೀಯ ಡ್ರಗ್ಸ್ ಜಾಲ ಬೇಧಿಸಿದ ಟೊರಂಟೋ ಪೊಲೀಸರು

* 452 ಕೋಟಿ ಮೌಲ್ಯದ ಡ್ರಗ್ಸ್ ವಶ

* ಡ್ರಗ್ಸ್ ದಂಧೆ ನಡೆಸುತ್ತಿದ್ದ ಇಪ್ಪತ್ತು ಮಂದಿ ಅರೆಸ್ಟ್, ಇವರಲ್ಲಿ ಓರ್ವ ಅಪ್ರಾಪ್ತ

ಟೊರಂಟೋ(ಜೂ.28): ಟೊರಂಟೋ ಪೊಲೀಸರು ಜೂನ್ 23ರಂದು 61 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವರದಿಗಳನ್ವಯ ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ 20 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. 

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್‌ ಅರೆಸ್ಟ್​!

1,000 ಕೆಜಿ ಡ್ರಗ್ಸ್ ಹಾಗೂ ಒಂದು ಮಿಲಿಯನ್ ಅಮೆರಿಕನ್ ಡಾಲರ್‌ ನಗದು ವಶಪಡಿಸಿಕೊಳ್ಲಲಾಗಿದೆ. ಟೊರಂಟೋ ಸನ್ ವರದಿಯನ್ವಯ ಬಂಧಿಸಲಾದ 20 ಮಂದಿಯಲ್ಲಿ ಓರ್ವ ಅಪ್ರಾಪ್ತ ಬಾಲಕ ಎನ್ನಲಾಗಿದೆ. ಇನ್ನು ಟೊರಂಟೋ ಪೊಲೀಸ್ ಮುಖ್ಯಸ್ಥ ಜೇಮಗ್ಸ್ ರಾಮರ್ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನಿಡಿದ್ದಾರೆ. ಅಲ್ಲದೇ ಈ ಪ್ರಮಾಣದಲ್ಲಿ ಒಂದು ಜಾಲ ಬೆಧಿಸಿದ್ದು ಇದೇ ಮೊದಲು ಎಂದಿದ್ದಾರೆ.

ಟೊರೊಂಟೊ ಸನ್ ಪ್ರಕಾರ, ಪ್ರಾಜೆಕ್ಟ್ ಬ್ರಿಸಾ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲವನ್ನು ನಾಶಪಡಿಸಿದೆ. ಹಾಗೂ ಒಂದು ತಿಂಗಳ ಡ್ರಗ್ಸ್ ರಾಕೆಟ್‌ ಬೆಧಿಸಿ 61 ಮಿಲಿಯನ್ ಡಾಲರ್‌ಗೂ ಹೆಚ್ಚಿನ ಹಣವನ್ನು ಗಳಿಸಿತದೆ ಎಂದು ವಿವರಿಸಿದೆ. ಈ 2020ರ ನವೆಂಬರ್‌ನಲ್ಲಿ ಆರಂಭವಾದ ಈ ಜಾಲ ಮೇ 10ರಂದು ಕೊನೆಗೊಂಡಿದೆ. ಆರು ತಿಂಗಳ ತನಿಖೆಯಲ್ಲಿ ಯಾರ್ಕ್ ಪ್ರಾದೇಶಿಕ ಪೊಲೀಸ್, ಒಂಟಾರಿಯೊ ಪ್ರಾಂತೀಯ ಪೊಲೀಸ್ (ಒಪಿಪಿ), ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (ಆರ್‌ಸಿಎಂಪಿ), ಕೆನಡಾ ಬಾರ್ಡರ್ ಸರ್ವೀಸಸ್, ಯುಎಸ್ ಹೋಮ್ಲ್ಯಾಂಡ್ ಸೆಕ್ಯುರಿಟಿ ಮತ್ತು ಯುಎಸ್ ಡ್ರಗ್ ಎನ್‌ಫೋರ್ಸ್‌ಮೆಂಟ್ ಏಜೆನ್ಸಿ ಸೇರಿದಂತೆ ಕನಿಷ್ಠ ಹತ್ತು ಏಜೆನ್ಸಿಗಳ ಸಹಕಾರವಿತ್ತೆನ್ನಲಾಗಿದೆ.

ಡ್ರಗ್ ಕೇಸ್: ಸುಶಾಂತ್ ಗೆಳೆಯ ಸಿದ್ಧಾರ್ಥ್ ಫಿಥಾನಿಗೆ 10 ದಿನ ಪೆರೋಲ್ ಮೇಲೆ ಬಿಡುಗಡೆ

ದಕ್ಷಿಣ ಅಮೆರಿಕಾದಲ್ಲಿ ಕೆಲವು ಕಾರ್ಟೆಲ್‌ಗಳ ಪಾಲುದಾರಿಕೆ ಸ್ಪಷ್ಟವಾಗಿ ಕುಸಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೆಕ್ಸಿಕೊದಿಂದ ಕ್ಯಾಲಿಫೋರ್ನಿಯಾ ಮತ್ತು ಕೆನಡಾಕ್ಕೆ ಟ್ರಾಕ್ಟರ್-ಟ್ರೇಲರ್ಗಳ ಮೂಲಕ ಕೊಕೇನ್ ಮತ್ತು ಕ್ರಿಸ್ಟಲ್ ಆಮದು ಮಾಡಲಾಗುತ್ತಿತ್ತು. ಇದರ ಮೇಲೆ ಕಣ್ಣಿರಿಸಿದ್ದ ಪೊಲೀಸರು ಪ್ರಾಜೆಕ್ಟ್ ಬ್ರಿಸಾದಡಿ ಈ ಡ್ರಗ್ಸ್ ಜಾಲವನ್ನು ಬೇಧಿಸಿದೆ ಎಂದು ಸನ್ ವರದಿ ಮಾಡಿದೆ. 

click me!