ಡೆಲ್ಟಾ ವೈರಸ್ ಭೀತಿ: ಹಲವು ದೇಶಗಳಲ್ಲಿ ಮತ್ತೆ ಲಾಕ್‌ಡೌನ್!

By Kannadaprabha NewsFirst Published Jun 28, 2021, 7:31 AM IST
Highlights

* ಡೆಲ್ಟಾ ಕೊರೋನಾ ವೈರಸ್‌ ಭೀತಿ ಮತ್ತು ಏಕಾಏಕಿ ಏರಿಕೆ

* ಡೆಲ್ಟಾ ಭೀತಿ: ಹಲವು ದೇಶಗಳಲ್ಲಿ ಮತ್ತೆ ಲಾಕ್ಡೌನ್‌

* ಸಿಡ್ನಿ ಎರಡು ವಾರ, ಬಾಂಗ್ಲಾದಲ್ಲಿ ಒಂದು ವಾರ ನಿರ್ಬಂಧ

ಸೆಂಟ್‌ಪೀಟ​ರ್‍ಸ್ಬರ್ಗ್‌(ಜೂ.28): ಡೆಲ್ಟಾಕೊರೋನಾ ವೈರಸ್‌ ಭೀತಿ ಮತ್ತು ಏಕಾಏಕಿ ಏರಿಕೆಯಾಗುತ್ತಿರುವ ಕೋವಿಡ್‌ ಸೋಂಕು ನಿಗ್ರಹಕ್ಕೆ ಹಲವು ದೇಶಗಳಲ್ಲಿ ಮತ್ತೆ ಲಾಕ್‌ಡೌನ್‌ ಹೇರಿಕೆ ಆರಂಭವಾಗಿದೆ.

ಆಸ್ಪ್ರೇಲಿಯಾದ ಸಿಡ್ನಿ ನಗರದಲ್ಲಿ ಶನಿವಾರದಿಂದ 2 ವಾರಗಳ ಕಾಲ ಲಾಕ್‌ಡೌನ್‌ ಹೇರಲಾಗಿದೆ. ಡೆಲ್ಟಾಪ್ಲಸ್‌ ಭೀತಿಯಿಂದ ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶ ಸಹ ಸೋಮವಾರದಿಂದ ಹೊಸದಾಗಿ ಲಾಕ್‌ಡೌನ್‌ ಘೋಷಿಸಿದೆ.

ರಷ್ಯಾದ ಸೆಂಟ್‌ಪೀಟರ್‌ಬರ್ಗ್‌ ನಗರದಲ್ಲಿ ಶನಿವಾರ ಸಾರ್ವಕಾಲಿಕ ದಾಖಲೆಯ ಸಾವು ಸಂಭವಿಸಿದೆ. ಲಸಿಕೆ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಇಸ್ರೇಲ್‌ನಲ್ಲೂ ಕೋವಿಡ್‌ ರೂಪಾಂತರಿಗಳು ಪತ್ತೆಯಾಗುತ್ತಿವೆ. ಅತ್ತ ಆಫ್ರಿಕಾದ 12 ದೇಶಗಳಲ್ಲಿಯೂ ಸೋಂಕು ಪ್ರಮಾಣ ಏರಿಕೆಯಾಗುತ್ತಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಡೆಲ್ಟಾಪ್ಲಸ್‌ ಲಸಿಕೆಯ ದಕ್ಷತೆಯನ್ನೂ ಕುಗ್ಗಿಸುತ್ತದೆ ಎಂದು ಕೆಲ ವರದಿಗಳು ಹೇಳಿವೆ.

85 ದೇಶಗಳಲ್ಲಿ ಪತ್ತೆಯಾಗಿರುವ ಡೆಲ್ಟಾಪ್ಲಸ್‌ ಅತ್ಯಂತ ಅಪಾಯಕಾರಿ ಮತ್ತು ಅತಿ ವೇಗವಾಗಿ ಹರಡುವ ರೂಪಾಂತರಿ ವೈರಸ್‌ ಎಂದು ವಿಶ್ವ ಆರೋಗ್ಯ ಸಂಸ್ಥೆ ಶನಿವಾರ ಎಚ್ಚರಿಕೆ ರವಾನಿಸಿದ ಹಿನ್ನೆಲೆಯಲ್ಲಿ ಡೆಲ್ಟಾಬಗ್ಗೆ ಜಗತ್ತಿನಾದ್ಯಂತ ಭೀತಿ ಉಂಟಾಗಿದೆ.

ಆದರೂ ಯುರೋಪಿನ ಹಲವು ನಗರಗಳು ಲಾಕ್‌ಡೌನ್‌ ನಿರ್ಬಂಧ ಸಡಿಲಿಸುತ್ತಿದೆ. ಸ್ಪೇನ್‌ ಹಾಗೂ ನೆದರ್ಲೆಂರ್‍ಡ್‌ ಮಾಸ್ಕ್‌ ಕಡ್ಡಾಯ ಕಾನೂನನ್ನು ಹಿಂಪಡೆದಿವೆ.

click me!