ಆಪ್ತಳಿಗೆ ಮುತ್ತು ನೀಡಿದ ಪ್ರಕರಣ: ಬ್ರಿಟನ್‌ ಸಚಿವ ರಾಜೀನಾಮೆ!

By Suvarna NewsFirst Published Jun 27, 2021, 8:56 AM IST
Highlights

* ತಮ್ಮ ಕಚೇರಿಯಲ್ಲಿನ ವಿವಾಹಿತ ಆಪ್ತ ಸಿಬ್ಬಂದಿಯೊಬ್ಬಳಿಗೆ ಮುತ್ತು ನೀಡಿದ ಪ್ರಕರಣ

* ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ಶನಿವಾರ ರಾಜೀನಾಮೆ

* ಕೊರೋನಾ ವೈರಸ್‌ ಲಾಕ್‌ಡೌನ್‌ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಇಂಥ ಕೆಲಸ ಮಾಡುವಂತಿಲ್ಲ

ಲಂಡನ್‌(ಜೂ.27): ತಮ್ಮ ಕಚೇರಿಯಲ್ಲಿನ ವಿವಾಹಿತ ಆಪ್ತ ಸಿಬ್ಬಂದಿಯೊಬ್ಬಳಿಗೆ ಮುತ್ತು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್‌ ಆರೋಗ್ಯ ಸಚಿವ ಮ್ಯಾಟ್‌ ಹ್ಯಾನ್‌ಕಾಕ್‌ ಶನಿವಾರ ರಾಜೀನಾಮೆ ನೀಡಿದ್ದಾರೆ.

ಕೊರೋನಾ ವೈರಸ್‌ ಲಾಕ್‌ಡೌನ್‌ ನಿರ್ಬಂಧಗಳು ಇರುವ ಸಂದರ್ಭದಲ್ಲಿ ಇಂಥ ಕೆಲಸ ಮಾಡುವಂತಿಲ್ಲ ಎಂಬ ನಿರ್ಬಂಧಗಳಿವೆ. ಇದನ್ನು ಮೀರಿ ಈ ‘ಕೃತ್ಯ’ ಎಸಗಿದ್ದಕ್ಕೆ ವಿಪಕ್ಷಗಳು ಕಿಡಿಕಾರಿದ್ದವು.

I have resigned as Health Secretary pic.twitter.com/eyWi1AA19i

— Matt Hancock (@MattHancock)

ಮ್ಯಾಟ್‌ ಹ್ಯಾನ್‌ಕಾಕ್‌, ಆಪ್ತಳೊಬ್ಬಳಿಗೆ ಮುತ್ತು ಕೊಡುತ್ತಿರುವ ಚಿತ್ರಗಳನ್ನು ‘ದ ಸನ್‌’ ಪತ್ರಿಕೆ ಪ್ರಕಟಿಸಿತ್ತು. ಕೃತ್ಯ ಒಪ್ಪಿಕೊಂಡಿರುವ ಅವರು ಈಗ ರಾಜೀನಾಮೆ ಸಲ್ಲಿಸಿದ್ದಾರೆ.

click me!