ಬಂಧನ ತಪ್ಪಿಸಿಕೊಳ್ಳಲು ನದಿಗೆ ಹಾರಿದ: ನೀರೊಳಗೆ 1 ಗಂಟೆ ಅಡಗಿ ಕುಳಿತ 'ದುರ್ಯೋಧನ'

By Anusha KbFirst Published Oct 28, 2022, 5:14 PM IST
Highlights

ಮಹಾಭಾರತದಲ್ಲಿ ಭೀಮಾನಿಂದ ತಪ್ಪಿಸಿಕೊಳ್ಳಲು ದುರ್ಯೋಧನ ಸರೋವರದಲ್ಲಿ ಅವಿತು ಕುಳಿತಂತೆ ಇಲ್ಲೊಬ್ಬ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಬರೋಬರಿ ಒಂದು ಗಂಟೆಗಳ ಕಾಲ ನೀರಿನಲ್ಲಿ ಅವಿತು ಕುಳಿತಿದ್ದಾನೆ. ಅಮೆರಿಕಾದ ಪ್ಲೋರಿಡಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ನ್ಯೂಯಾರ್ಕ್‌: ಪೊಲೀಸರಿಂದ ತಪ್ಪಿಸಿಕೊಳ್ಳಲು ಕಳ್ಳರು ನಾನಾ ದಾರಿ ಹಿಡಿಯುವುದನ್ನು ನೀವು ಈಗಾಗಲೇ ಕೇಳಿರುತ್ತೀರಿ. ಮಹಾಭಾರತದಲ್ಲಿ ಭೀಮಾನಿಂದ ತಪ್ಪಿಸಿಕೊಳ್ಳಲು ದುರ್ಯೋಧನ ಸರೋವರದಲ್ಲಿ ಅವಿತು ಕುಳಿತಂತೆ ಇಲ್ಲೊಬ್ಬ ಕಳ್ಳ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಬರೋಬರಿ ಒಂದು ಗಂಟೆಗಳ ಕಾಲ ನೀರಿನಲ್ಲಿ ಅವಿತು ಕುಳಿತಿದ್ದಾನೆ. ಅಮೆರಿಕಾದ ಪ್ಲೋರಿಡಾದಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಅಮೆರಿಕಾದ(America) ವ್ಯಕ್ತಿಯೊಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿ ಬರೋಬರಿ ಒಂದು ಗಂಟೆಗೂ ಹೆಚ್ಚು ಕಾಲ ನೀರೊಳಗೆ ಅವಿತುಕುಳಿತಿದ್ದಾನೆ. ಡ್ರಗ್ ದಂಧೆಗೆ (Drug Mafia) ಸಂಬಂಧಿಸಿದಂತೆ ಪೊಲೀಸರು ಈತನ ಬಂಧನದಲ್ಲಿದ್ದರು. ತನ್ನನ್ನು ಬೆನ್ನಟ್ಟುತ್ತ ವೇಗವಾಗಿ ಬರುತ್ತಿದ್ದ ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಅಲ್ಲಿನ ಸೇಂಟ್ ಜಾನ್ಸ್ ನದಿಗೆ (ST.Johns River) ಹಾರಿದ್ದಾನೆ. ಅಷ್ಟೇ ಅಲ್ಲದೇ ಬರೋಬ್ಬರಿ ಒಂದು ಗಂಟೆ ಕಾಲ ನೀರಿನಲ್ಲಿ ಅವಿತು ಕುಳಿತಿದ್ದಾನೆ. ನೀರಿನಲ್ಲಿ ಒಂದು ಗಂಟೆ ಬಿಡಿ ಒಂದು ನಿಮಿಷ ಕುಳಿತುಕೊಳ್ಳುವುದೇ ಬಲು ಕಷ್ಟದ ಕೆಲಸ ಅಂತಹದರಲ್ಲಿ ಈ ಕಳ್ಳ ಬರೋಬ್ಬರಿ ಒಂದು ಗಂಟೆ ಕಾಲ ನೀರಲ್ಲಿ ಕುಳಿತು ಸಾಹಸ ಮೆರೆದಿದ್ದಾನೆ ಎಂದು ಫಾಕ್ಸ್ 35 ನ್ಯೂಸ್ ವರದಿ ಮಾಡಿದೆ.

ಟೆಡ್ಡಿ ಬೇರ್‌ನೊಳಗೆ ಅಡಗಿದ್ದ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸರು

ಈ ಬಗ್ಗೆ ಶೆರಿಫ್ ಕಚೇರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಲಿಯೋನೈಡ್ಸ್(Leonides) ಎಂಬ ವ್ಯಕ್ತಿ ಪೊಲೀಸರಿಂದ ಬಂಧನಕ್ಕೊಳಗಾಗುವ ಮೊದಲು ಒಂದು ಗಂಟೆ ಕಾಲ ನೀರಲ್ಲಿ ಅಡಗಿದ್ದ ಎಂದು ತಿಳಿಸಿದ್ದಾರೆ. ಕದ್ದ ಟ್ರಕ್‌ನ್ನು ಹಿಡಿಯಲು ಪ್ರಯತ್ನಿಸುವ ವೇಳೆ  ಆರೆಂಜ್ ಕಂಟ್ರಿಯ ಪೊಲೀಸ್ ತಂಡ ಫ್ಲೋರಿಡಾದ ಹಲವು ಪೊಲೀಸ್ ತಂಡಗಳೊಂದಿಗೆ ಈ ಲಿಯೋನೈಡ್ಸ್‌ನನ್ನು ಬೆನ್ನಟ್ಟಿದ್ದಾರೆ. ಅಲ್ಲದೇ ರಾಜ್ಯ ಹೆದ್ದಾರಿ 415ರಲ್ಲಿ ಆತನನ್ನು ತಡೆದಾಗ ಆತ ಕಾರಿನಿಂದ ಇಳಿದು ನದಿಗೆ ಹಾರಿದ್ದಾನೆ.

ಬೈಕಲ್ಲಿ ತ್ರಿಬಲ್‌ರೈಡ್‌: ಪೊಲೀಸ್ರಿಂದ ತಪ್ಪಿಸಿಕೊಳ್ಳಲು ಹೋಗಿ ಇಬ್ಬರ ಸಾವು

ಆತನನ್ನು ಬಂಧಿಸಿದ ನಂತರ ಆತನಿಗೇನಾದರೂ ಆರೋಗ್ಯ ಸಮಸ್ಯೆಯಾಗಿದೆಯೇ ಎಂದು ತಿಳಿಯಲು ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಆತನಿಗೆ ಯಾವುದೇ ಆರೋಗ್ಯ ಸಮಸ್ಯೆಯಾಗಿಲ್ಲ. ಆತ ಫೆಂಟಾನಿಲ್ (ಡ್ರಗ್) ಅನ್ನು ಸೇವಿಸಿ ಅದರ ಅಮಲಿನಲ್ಲಿದ್ದ ಎಂಬುದನ್ನು ವೈದ್ಯರು ಹೇಳಿದ್ದಾಗಿ ಪೊಲೀಸರು ಹೇಳಿದ್ದಾರೆ. ಅಲ್ಲದೇ ಆತನಿದ್ದ ಟ್ರಕ್‌ನಲ್ಲಿ ಮೆಥಾಂಫೆಟಮೈನ್  ಎಂಬ ಡ್ರಗ್‌ನ ಚೀಲವೂ ಪತ್ತೆಯಾಗಿತ್ತು. ಈತನ ಬಂಧನಕ್ಕಾಗಿ ಒಂದು ಗಂಟೆ ಕಾಲ ರಸ್ತೆಯ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಬಂಧನದ ನಂತರ ಸಂಚಾರ ವ್ಯವಸ್ಥೆ ಮತ್ತೆ ಆರಂಭವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

ಶಸ್ತ್ರಾಸ್ತ್ರಗಳನ್ನು ಹಿಡಿದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಲೇಕ್ ಕೌಂಟಿಯಿಂದ ಬಂಧನ ವಾರೆಂಟ್ ಜಾರಿಯಾಗಿತ್ತು. ಅಲ್ಲದೇ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣಗಳು ದಾಖಲಾಗಿದ್ದವು. ಹಾಗಂತ ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಹಾರಿದ ಪ್ರಕರಣ ಇದೇ ಮೊದಲಲ್ಲ. ಪ್ಲೋರಿಡಾದಲ್ಲಿ(Florida) ಈ ಹಿಂದೆ 2020ರಲ್ಲಿ 36 ವರ್ಷ ಪ್ರಾಯದ ಡೇನಿಯಲ್ ಕ್ರಿಸ್ಟೋಫರ್ (Daniel Christopher) ಎಂಬ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕರೆಯೊಂದಕ್ಕೆ ಹಾರಿದ್ದ. ಈತ ಮೆಥಾಂಫೆಟಮೈನ್ (methamphetamine) ಎಂಬ ಡ್ರಗ್‌ನ್ನು ಅಕ್ರಮವಾಗಿ ಮಾರಾಟ ಮಾಡುವ ಆರೋಪ ಹೊಂದಿದ್ದ.

click me!