ವಾಶಿಂಗ್ಟನ್ ಡಿಸಿಯಲ್ಲಿ ಹಿಂದೂಗಳ ನರಮೇಧ ತಿಳಿಸುವ ಸ್ಮಾರಕ ನಿರ್ಮಾಣ ಮಾಡಲು ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮುಂದಾಗಿದ್ದಾರೆ. ಟ್ರಂಪ್ ಈ ಘೋಷಣೆ ಮಾಡುತ್ತಿದ್ದಂತೆ ಭಾರತದಲ್ಲಿ ವಿಪಕ್ಷಗಳ ನಾಯಕರು ಆರ್‌ಎಸ್‌ಎಸ್ ಅಜೆಂಡಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಶಿಂಗ್ಟನ್ ಡಿಸಿ(ಅ.28): ಅಮೆರಿದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸ್ಫೋಟಕ ಹೇಳಿಕೆಯೊಂದು ಮುನ್ನಲೆಗೆ ಬಂದಿರುವ ಟ್ರಂಪ್, ಭಾರತದ ವಿಪಕ್ಷಗಳ ಆಕ್ರೋಶಕ್ಕೂ ಕಾರಣವಾಗಿದ್ದಾರೆ. ಅಮೆರಿದ ವಾಶಿಂಗ್ಟನ್ ಡಿಸಿಯಲ್ಲಿ ಹಿಂದೂ ನರಮೇಧದ ಸ್ಮಾರಕ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಹಿಂದೂಗಳ ಮೇಲೆ ನಡೆದ ದಾಳಿ, ಹತ್ಯಾಕಾಂಡದ ಸಂಪೂರ್ಣ ಮಾಹಿತಯನ್ನೊಳಗೊಂಡ ಸ್ಮಾರಕ ಇದಾಗಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಹಿಂದೂ ಹತ್ಯಾಕಾಂಡದ ಸ್ಮಾರಕ ನಿರ್ಮಾಣ ಮಾಡಬೇಕು ಅನ್ನುವ ಭಾರತೀಯ ಮೂಲದ ಅಮೆರಿಕ ನಿವಾಸಿಗಳ ಕೂಗಿಗೆ ಟ್ರಂಪ್ ಹೆಗಲು ನೀಡಿದ್ದಾರೆ. ಹಿಂದೂ ಹತ್ಯಾಕಾಂಡ ಸ್ಮಾರಕದ ಅವಶ್ಯತೆ ಹೆಚ್ಚಿದೆ. ಈ ಮೂಲಕ ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಈ ಘೋಷಣೆ ಭಾರತದ ವಿಪಕ್ಷಗಳ ನಾಯಕರು ಗರಂ ಆಗಿದ್ದಾರೆ.
ವಾಶಿಂಗ್ಟನ್ ಡಿಸಿಯಲ್ಲಿ ರಿಪಬ್ಲಿಕನ್ ಹಿಂದೂ ಕೊಯಿಲೇಶನ್(RHC) ದೀಪಾವಳಿ ಸಂಭ್ರಮಾಚರಣೆ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡೋನಾಲ್ಡ್ ಟ್ರಂಪ್ ಪಾಲ್ಗೊಂಡಿದ್ದಾರೆ. 200ಕ್ಕೂ ಹೆಚ್ಚು ಭಾರತೀಯ ಮೂಲದ ಅಮೆರಿಕ ನಿವಾಸಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಹಿಂದೂ ಸ್ಮಾರಕ ನಿರ್ಮಾಣಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾರತದ 2ನೇ ಅತಿದೊಡ್ಡ ಕಚ್ಚಾ ತೈಲ ಪೂರೈಕೆದಾರನಾದ Russia: 5ನೇ ಸ್ಥಾನಕ್ಕೆ ಕುಸಿದ ಅಮೆರಿಕ
2016ರಲ್ಲಿ ನನ್ನ ಹಾಗೂ ಪಕ್ಷದ ಗೆಲುವಿಗೆ ಹಿಂದೂ ಮತದಾರರೇ ಮುಖ್ಯವಾಗಿದ್ದಾರೆ. ಪ್ರತಿ ಭಾರಿ ನನಗೆ ಹಿಂದೂಗಳು ಹೆಚ್ಚಿನ ಪ್ರೀತಿ ತೂರಿಸಿದ್ದಾರೆ. ಅಮೆರಿಕದ ಹಿಂದೂಗಳು, ಭಾರತದಲ್ಲಿರುವ ಹಿಂದೂಗಳು ಬೆಂಬಲಕ್ಕೆ ನಾನು ಋಣಿಯಾಗಿದ್ದೇನೆ. ಇದೀಗ ಹಿಂದೂಗಳ ಮೇಲೆ ನಡೆದಿರುವ ಭೀಕರ ದಾಳಿ, ಹತ್ಯಕಾಂಡದ ಸ್ಮಾರಕದ ಅವಶ್ಯಕತೆ ಹೆಚ್ಚಿದೆ. ಮುಂದಿನ ತಲೆಮಾರಿಗೆ ನಮ್ಮ ಅಸ್ತಿತ್ವದ ಕುರಿತು ದಾಖಲೆಯೊಂದಿಗೆ ವಿವರಿಸುವ ಅಗತ್ಯವಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇದು ಆರ್‌ಎಸ್‌ಎಸ್ ಅಜೆಂಡಾ
ಡೋನಾಲ್ಡ್ ಟ್ರಂಪ್ ಘೋಷಣೆ ಬೆನ್ನಲ್ಲೇ ಭಾರತದದಲ್ಲಿ ಪರ ವಿರೋಧಗಳು ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯಿಂದ ಭಾರತದ ವರ್ಚಸ್ಸು ಹೆಚ್ಚಾಗಿದೆ. ಇದೀಗ ಮೋದಿ ಹಾಗೂ ಭಾರತ ಮಾತು ಎಲ್ಲರೂ ಕೇಳುತ್ತಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಹಿಂದೂ ಸ್ಮಾರಕ ನಿರ್ಮಾಣವಾಗುತ್ತಿದೆ. ಈ ಪ್ರಯತ್ನಕ್ಕೆ ಬೆಂಬಲ ನೀಡಿರುವ ಟ್ರಂಪ್‌ಗೆ ಧನ್ಯವಾದ ಎಂದು ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಹೇಳಿದ್ದಾರೆ. ಆದರೆ ನ್ಯಾಷನಲ್ ಕಾನ್ಫೆರೆನ್ಸ್ ಪಕ್ಷ ಟ್ರಂಪ್ ನಿರ್ಧಾರವನ್ನು ವಿರೋಧಿಸಿದೆ. ಇದು ಚುನಾವಣಾ ಹೇಳಿಕೆ ಎಂದಿದೆ. ನ್ಯಾಷನಲ್ ಕಾನ್ಫೆರೆನ್ಸ್ ಜೀಶನ್ ರಾಣಾ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಆರ್‌ಎಸ್‌ಎಸ್ ಅಜೆಂಡಾ ತರಲು ಟ್ರಂಪ್ ಪ್ರಯತ್ನಿಸುತ್ತಿದ್ದಾರೆ. ಇಷ್ಟೇ ಅಲ್ಲ ಟ್ರಂಪ್ ಹಾಗೂ ಹಿಂಧೂ ಸ್ಮಾರಕ ವಿರೋಧಿಸುವ ಭರದಲ್ಲಿ ಭಾರತದಲ್ಲಿ ಕೇವಲ ಹಿಂದೂಗಳು ಮಾತ್ರವಲ್ಲ ಮುಸ್ಲಿಮರು ಇದ್ದಾರೆ ಎಂದು ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಹಿಂದೂಗಳ ಹತ್ಯಾಕಾಂಡ ನಡೆದದೆ. ಸಿಖರ್ ನರಮೇಧ ನಡೆದಿದೆ. ಮುಸ್ಲಿಮರ ಹತ್ಯಾಕಾಂಡ ನಡೆದಿಲ್ಲ. ಇಷ್ಟೇ ಅಲ್ಲ ಅಮೆರಿಕದಲ್ಲಿ ನಿರ್ಮಾಣವಾಗುತ್ತಿರುವುದು ಹಿಂದೂಗಳ ಮೇಲೆ ನಡೆದ ಹೇಳುವ ಹತ್ಯಾಕಾಂಡದ ಸ್ಮಾರಕ ಎಂದು ಕಿವಿಮಾತು ಹೇಳಿದ್ದಾರೆ.
ಸುನಕ್, ಕಮಲಾ ಹ್ಯಾರಿಸ್ ಮಾತ್ರವಲ್ಲ ಭಾರತೀಯರ ಕೈಯಲ್ಲಿದೆ ಹಲವು ದೇಶದ ಆಡಳಿತ!