
ನವದೆಹಲಿ: ಓರ್ವ ವ್ಯಕ್ತಿ 15 ವರ್ಷಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಕ್ಲಿಕ್ಕಿಸಿಕೊಂಡಿದ್ದ ಎರಡು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಎರಡು ಫೋಟೋಗಳು ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಸಾಕ್ಷಿ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಎರಡು ಫೋಟೋದಲ್ಲಿ ಸಂಪೂರ್ಣ ಹಿಮ ಪರ್ವತ ಹೇಗೆ ಕರಗಿ ನದಿಯಾಗಿ ಬದಲಾಗಿದೆ ಎಂಬುದನ್ನು ನೋಡಬಹುದು. ಈ ಫೋಟೋಗಳನ್ನು ಸ್ಪಿಟ್ಜೆರ್‌ಲ್ಯಾಂಡ್ ನ ರ್ಹೋನೆ ಗ್ಲೆಶಿಯರ್ ನಲ್ಲಿ ಕ್ಲಿಕ್ಕಿಸಿಕೊಳ್ಳಲಾಗಿದೆ. ಈ ಎರಡು ಫೋಟೋಗಳನ್ನು ನಾವು ಕಳೆದುಕೊಂಡಿದ್ದೇನು ಎಂದು ನೆಟ್ಟಿಗರು ಹುಡುಕಾಡುತ್ತಿದ್ದಾರೆ.
ಡ್ಯೂಂಕನ್ ಪೋರ್ಟರ್ ಎಂಬವರು ಈ ಎರಡು ಫೋಟೋಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಎರಡು ಫೋಟೋಗಳು 15 ವರ್ಷದ ಅಂತರದಲ್ಲಿ ಸ್ಪಿಟ್ಜೆರ್‌ಲ್ಯಾಂಡ್ ನ ರ್ಹೋನೆ ಗ್ಲೆಶಿಯರ್‌ನಲ್ಲಿ ಕ್ಕಿಸಿಕೊಳ್ಳಲಾಗಿದೆ. ನಾನು ಸುಳ್ಳು ಹೇಳುತ್ತಿಲ್ಲ. ನಿಜವಾಗಿಯೂ ಈ ಫೋಟೋ ನೋಡಿ ಕಣ್ಣೀರು ಬಂತು ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಮೊದಲ ಫೋಟೋದಲ್ಲಿ ಜೋಡಿ ಹಿಂದೆ ಇಡೀ ಹಿಮಾಲಯ ಇರೋದನ್ನು ಗಮನಿಸಿಬಹುದು. 15 ವರ್ಷದ ನಂತರ ಅದೇ ಸ್ಥಳ ಹಿಮವೆಲ್ಲಾ ಕರಗಿ ನದಿಯಾಗಿ ಬದಲಾಗಿದೆ. ಈ ಕುರಿತು ಪರಿಸರವಾದಿಗಳು ಜಾಗತಿಕ ಹವಾಮಾನದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
ಪ್ರೊಟೆಕ್ಟ್ ಅರ್ಥ್ ಎಂಬ ಚಾರಿಟಿ ಪೋಸ್ಟ್ ಪ್ರಕಾರ, ಹೆಚ್ಚುತ್ತಿರುವ ಹವಾಮಾನ ಮತ್ತು ಜೀವವೈವಿಧ್ಯದ ಬಿಕ್ಕಟ್ಟುಗಳನ್ನು ಎದುರಿಸಲು ಮಾರ್ಗೊಪಾಯಗಳನ್ನು ಕಂಡುಕೊಳ್ಳಬೇಕಿದೆ. ಪೋರ್ಟರ್ ಓರ್ವ ಸ್ವಯಂಸೇವಕನಾಗಿದ್ದು, ಪರಿಸರ ರಕ್ಷಣೆಗಾಗಿ ತನ್ನ ಆದಾಯದಲ್ಲಿನ ಒಂದು ಭಾಗವನ್ನು ಮತ್ತು ಸಮಯವನ್ನು ಪರಿಸರ ರಕ್ಷಣೆಗೆ ಮೀಸಲಿರಿಸಿದ್ದಾರೆ ಎಂದು ಚಾರಿಟಿ ಹೇಳಿದೆ. ಈ ಪೋಸ್ಟ್‌ಗೆ 1.8 ಮಿಲಿಯನ್ ರಿಯಾಕ್ಷನ್ ಬಂದಿದೆ. ಕಮೆಂಟ್ ಮಾಡಿರುವ ನೂರಾರು ಬಳಕೆದಾರರು ಕರಗುತ್ತಿರುವ ಗ್ಲೆಶಿಯರ್ ಬಗ್ಗೆ ಮರುಕು ವ್ಯಕ್ತಪಡಿಸಿದ್ದಾರೆ.
5 ಸ್ಟಾರ್ ಹೋಟೆಲ್ ರೀತಿಯ ಮನೆ, 25ಕ್ಕೂ ಅಧಿಕ ವಾಹನ, ಪ್ರೈವೇಟ್ ಜೆಟ್ - ಹತನಾದ ಹಮಾಸ್ ನಾಯಕನ ಆಸ್ತಿ ಎಷ್ಟು?
ಗ್ರೆಶಿಯರ್ ಹಿಮನದಿ 1800 ರಿಂದಲೇ ನಿಧಾನವಾಗಿ ಕರಗಲು ಆರಂಭಿಸಿದೆ. ಹಿಮನದಿಯ ವಿನಾಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ನೋಡಲು ಸಿಗುತ್ತವೆ. ಇದೀಗ ಹಿಮನದಿಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದನ್ನು ನಾವೆಲ್ಲರೂ ಜೊತೆಯಾಗಿ ಚಿಂತಿಸಿ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದು ಇದೇ ರೀತಿ ಮುಂದುವರಿದರೆ ಹಿಮನದಿಯೂ ಕರಗಿ ಕೇವಲ ಮರಭೂಮಿಯಾಗಿ ಉಳಿಯುವ ಕಾಲ ತುಂಬಾ ದೂರ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಾಗತಿಕ ತಾಪಮಾನ ಏರಿಕೆಯೇ ಇದಕ್ಕೆ ಕಾರಣ
ಹವಾಮಾನ ಬದಲಾವಣೆಯಿಂದ ಆಗುತ್ತಿರುವ ನೈಸರ್ಗಿಕ ವಿಪತ್ತುಗಳ ಬಗ್ಗೆ ಜಗತ್ತು ಆತಂಕಗೊಂಡಿರುವಾಗಲೇ ಈ ವಿದ್ಯಮಾನವು ಭೂಮಿಯ ಚಲನೆಯನ್ನು ಕೂಡ ಅಲ್ಪ ಪ್ರಮಾಣದಲ್ಲಿ ಬದಲಾಯಿಸಿದೆ ಎಂಬ ಆಘಾತಕಾರಿ ಸಂಗತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ದಕ್ಷಿಣ ಮತ್ತು ಉತ್ತರ ಧ್ರುವದಲ್ಲಿರುವ ಹಿಮಗಡ್ಡೆಗಳು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಕರಗುತ್ತಿವೆ. ಅದರ ಪರಿಣಾಮ ಅಲ್ಲಿನ ನೀರು ಭೂಮಧ್ಯರೇಖೆಯತ್ತ ಹರಿಯುತ್ತಿದೆ. ಇದು ಭೂಮಿಯ ಆಂತರಿಕ ಸಮತೋಲನವನ್ನು ತಪ್ಪಿಸಿದೆ. ಹೀಗಾಗಿ ಭೂಮಿಯ ಸುತ್ತುವಿಕೆ ಕೊಂಚ ನಿಧಾನವಾಗಿದ್ದು, ಭೂಮಿಯು ತಿರುಗುವ ಕಕ್ಷೆ ಕೂಡ ಬದಲಾವಣೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಹಿಂದಿನಿಂದ ಮೆಲ್ಲಗೆ ಬಂದು ಊಬರ್ ಚಾಲಕನ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿದ ಯುವತಿ
ಸ್ವಿಜರ್‌ಲೆಂಡ್‌ನ ಇಟಿಎಚ್ ಜೂರಿಚ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ನಡೆಸಿರುವ ಅಧ್ಯಯನದಲ್ಲಿ ಈ ಸಂಗತಿಗಳು ಬೆಳಕಿಗೆ ಬಂದಿವೆ. ವಿಜ್ಞಾನಿಗಳು ತಮ್ಮ ಶೋಧನೆಯನ್ನು ನೇಚರ್ ಜಿಯೋಸೈನ್ಸ್ ಮ್ಯಾಗಜೀನ್‌ನಲ್ಲಿ ಪ್ರಕಟಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ