ಭಾರತದ ಸುತ್ತಲಿರುವ ಎಲ್ಲಾ ದೇಶಗಳಲ್ಲಿ ಅಸ್ಥಿರತೆ: ಬಾಂಗ್ಲಾದಲ್ಲಿ ಶ್ರೀಲಂಕಾ, ಆಫ್ಘನ್ ದೃಶ್ಯಗಳ ಪುನರಾವರ್ತನೆ

By Kannadaprabha NewsFirst Published Aug 6, 2024, 10:09 AM IST
Highlights

ಕೆಲವು ವರ್ಷ ಹಿಂದೆ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರಗಳನ್ನು ದಂಗೆ ಮೂಲಕ ಬೀಳಿಸಲಾಗಿತ್ತು. ಆಗ ಶ್ರೀಲಂಕಾದಲ್ಲಿ ಅಂದಿನ ಅಧ್ಯಕ್ಷ ಗೋಟಬಾಯ ರಾಜಪಕ್ಷೆ ಅವರ ಅಧ್ಯಕ್ಷೀಯ ಆರಮನೆಗೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತು ಲೂಟಿ ಮಾಡಿದ್ದರು

ಢಾಕಾ: ಬಾಂಗ್ಲಾದೇಶ ಪ್ರಧಾನಿ ಶೇಖ್‌ ಹಸೀನಾ ಅವರ ಆಡಳಿತದ ವಿರುದ್ಧ ಸಿಡಿದೆದ್ದ ಪ್ರತಿಭಟನಾಕಾರರು ಹಾಗೂ ವಿದ್ಯಾರ್ಥಿಗಳು, ಸೋಮವಾರ ಹಸೀನಾ ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದು, ಮನೆಯಲ್ಲಿದ್ದ ಕಂಡಕಂಡ ವಸ್ತುಗಳನ್ನು ದೋಚಿದ್ದಾರೆ ಹಾಗೂ ಅವರ ಬೆಡ್ ರೂಮಿಗೆ ನುಗ್ಗಿ ಪ್ರಧಾನಿ ಮಲಗುವ ಬೆಡ್ ಮೇಲೆ ಮಲಗಿ ಆನಂದ ಅನುಭವಿಸಿದ್ದಾರೆ. ಇದಲ್ಲದೆ ಸಂಸತ್ತಿಗೂ ನುಗ್ಗಿ ಸಂಸದರ ಸೀಟು, ಸಭಾಧ್ಯಕ್ಷರ ಪೀಠ, ಪ್ರಧಾನಿ ಕೂರುವ ಸ್ಥಾನದಲ್ಲಿ ಕೂತು ಮಜಾ ಮಾಡಿದ್ದಾರೆ. 

ಹಸೀನಾ ಸರ್ಕಾರದ ಔದ್ಯೋಗಿಕ ಮೀಸಲು ನೀತಿ ವಿರುದ್ಧಕೆಲವು ದಿನಗಳಿಂದ ಬಾಂಗ್ಲಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಸೋಮವಾರ ತೀವ್ರ ಸ್ವರೂಪ ಪಡೆದು ಕೊಂಡಿತು. ಪ್ರತಿಭಟನಾಕಾರರು ಹಸೀನಾ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಅಪಾಯದ ಮುನ್ಸೂಚನೆ ಅರಿತ ಹಸೀನಾ ವಿಮಾನದಲ್ಲಿ ವಿದೇಶಕ್ಕೆ ಪಲಾಯನ ಆದರು.
ಇದೇ ಸಮಯ ಕಾಯುತ್ತಿದ್ದ ಪ್ರತಿಭಟನಾ ಕಾರರು ಪ್ರಧಾನಿ ನಿವಾಸದಲ್ಲಿನ ಹೂಕುಂಡಗಳು, ಕೋಳಿ, ಮೀನು, ತರಕಾರಿಗಳು ಮತ್ತು ಪೀಠೋಪಕರಣಗಳನ್ನು ದೋಚಿದ್ದಾರೆ. ಕೆಲವರು ಹಸೀನಾ ಅವರ ಕಪಾಟು ತೆಗೆದು ಸೀರೆ ಹಾಗೂ ಇತರ ವಸ್ತುಗಳನ್ನೂ ದೋಚಿದ್ದಾರೆ.

Latest Videos

ಬಾಂಗ್ಲಾ ದಂಗೆ ಹಿಂದೆ ಪಾಕ್ ಕೈವಾಡ ಶಂಕೆ : ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಹೈ ಅಲರ್ಟ್

ಇನ್ನು ಮಧ್ಯಾಹ್ನವಾದ ಕಾರಣ ಪ್ರಧಾನಿ ನಿವಾಸದಲ್ಲಿನ ನಿವಾಸಿಗಳು ಹಾಗೂ ಅತಿಥಿಗಳಿಗೆ ಸಿದ್ಧಪಡಿಸಿ ಇಡಲಾಗಿದ್ದ ರುಚಿಯಾದ ಭೋಜನವನ್ನು ಪ್ರತಿಭಟನಾಕಾರರು ಸವಿದಿದ್ದಾರೆ. ಬಳಿಕ ಹಸೀನಾ ಅವರ ಶಯನಗೃಹಕ್ಕೆ ಹೋಗಿ ಅವರು ಮಲಗುವ ಹಾಸಿಗೆ ಮೇಲೆ ಬಿದ್ದು ಹೊರಳಾಡಿದ್ದಾರೆ. ಇನ್ನು ಕೆಲವರು ಹಸೀನಾ ನಿವಾಸದಲ್ಲಿರುವ ಪುಟ್ಟ ಕೊಳದಲ್ಲಿನ ಬೋಟ್ನಲ್ಲಿ ಯಾನ ಮಾಡಿ ಸಂಭ್ರಮಿಸಿದ್ದಾರೆ.

ಬಾಂಗ್ಲಾದಲ್ಲಿ ಶ್ರೀಲಂಕಾ, ಆಫ್ಘನ್ ದೃಶ್ಯಗಳ ಪುನರಾವರ್ತನೆ

ಕೆಲವು ವರ್ಷ ಹಿಂದೆ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನದಲ್ಲಿ ಚುನಾಯಿತ ಸರ್ಕಾರಗಳನ್ನು ದಂಗೆ ಮೂಲಕ ಬೀಳಿಸಲಾಗಿತ್ತು. ಆಗ ಶ್ರೀಲಂಕಾದಲ್ಲಿ ಅಂದಿನ ಅಧ್ಯಕ್ಷ ಗೋಟಬಾಯ ರಾಜಪಕ್ಷೆ ಅವರ ಅಧ್ಯಕ್ಷೀಯ ಆರಮನೆಗೆ ನುಗ್ಗಿದ್ದ ಪ್ರತಿಭಟನಾಕಾರರು ಸಿಕ್ಕ ಸಿಕ್ಕ ವಸ್ತು ಲೂಟಿ ಮಾಡಿದ್ದರು ಹಾಗೂ ಅರಮನೆಯಲ್ಲಿದ್ದ ಸಕಲ ಸುಪ್ತತ್ತಿಗೆಗಳನ್ನು ಸವಿದಿದ್ದರು. ಇನ್ನು ಆಫ್ಘಾಸ್ತಾನದಲ್ಲಿ ಚುನಾಯಿತ ಸರ್ಕಾರವನ್ನು ಬೀಳಿಸಿ ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಲೂ ಇದು ಪುನಾರವರ್ತನೆಯಾಗಿತ್ತು. ಇದೇ ಚಿತ್ರಣ ಈಗ ಬಾಂಗ್ಲಾದಲ್ಲಿ ಕಾಣಿಸುತ್ತಿದೆ. 

ಬಾಂಗ್ಲಾಕ್ಕೆ ಸ್ವಾತಂತ್ರ ತಂದುಕೊಟ್ಟವರ ಪುತ್ರಿಗೆ ಇದೆಂಥಾ ಗತಿ: ಉಕ್ಕಿನ ಮಹಿಳೆಯ ದುರಂತ ವಿದಾಯ

ಭಾರತದ ಸುತ್ತಲಿರುವ ಎಲ್ಲಾ ದೇಶಗಳಲ್ಲೂ ಅನಿಶ್ಚಿತತೆ

  • ಶ್ರೀಲಂಕಾ: ಅಧ್ಯಕ್ಷ ಗೋಟಬಾಯ ರಾಜಪಕ್ಸೆ ವಿರುದ್ಧ ದಂಗೆ ನಡೆಸಿ, ಅವರನ್ನು ವಿದೇಶಕ್ಕೆ ಓಡಿಸಿದ್ದ ಹೋರಾಟಗಾರರು.
  • ಪಾಕಿಸ್ತಾನ: ಪ್ರಧಾನಿ ಆಗಿದ್ದ ಇಮ್ರಾನ್ ಖಾನ್ ಪದಚ್ಯುತಿಗೊಳಿಸಿ ಅಧಿಕಾರಕ್ಕೆ ಬಂದಿರುವ ವಿರೋಧ ಪಕ್ಷದ ಶಹಬಾಜ್
  • ನೇಪಾಳ: ಮಿತ್ರಪಕ್ಷಗಳಿಂದ ಅಧ್ಯಕ್ಷ ಪ್ರಚಂಡ ಸರ್ಕಾರ ಬೀಳಿಸಿ ಹೊಸ ಸರ್ಕಾರ ರಚನೆ.
  • ಮಾಲ್ಡೀವ್ಸ್‌; ಭಾರತದ ಪರ ಇದ್ದ ನಶೀದ್ ಸರ್ಕಾರ ಪತನ, ಭಾರತ ವಿರೋಧಿ ಮುಯಿಜು ಸರ್ಕಾರ ರಚನೆ.
  • ಮ್ಯಾನ್ಮಾರ್: 4 ವರ್ಷಗಳಿಂದ ಸತತ ಅನಿಶ್ಚಯತೆ, ಸರ್ಕಾರ ಕಿತ್ತೊಗೆದು ತಾನೇ ಅಧಿಕಾರ ನಡೆಸುತ್ತಿರುವ ಸೇನೆ.

 ಬಾಂಗ್ಲಾ ದಂಗೆ: ಶೇಖ್ ಹಸೀನಾ ದೇಶ ತೊರೆಯುತ್ತಿದ್ದಂತೆ ಬಾಂಗ್ಲಾದಲ್ಲಿ ಇಬ್ಬರು ಹಿಂದೂಗಳ ಹತ್ಯೆ

click me!