ಬಾಂಗ್ಲಾದ ಕ್ಷಿಪ್ರಕ್ರಾಂತಿಯ ಹಿಂದೆ ಪಾಕಿಸ್ತಾನದ ಗುಪ್ತಚರದಳ ಐಎಸ್ಐನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಕೇವಲ ಮೀಸಲಾತಿಗೆ ಸೀಮಿತವಾಗಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ನಿಷೇಧಿತ ಜಮಾತ್ ಎ ಇಸ್ಲಾಮಿ ಸಂಘಟನೆ ಕೈ ಜೋಡಿಸಿದ ಬಳಿಕ ಅದು ಪ್ರಧಾನಿ ವಿರುದ್ಧದ ರಾಜಕೀಯ ಹೋರಾಟವಾಗಿ ಪರಿವರ್ತಿತವಾಗಿತ್ತು.
ಢಾಕಾ: ಬಾಂಗ್ಲಾದ ಕ್ಷಿಪ್ರಕ್ರಾಂತಿಯ ಹಿಂದೆ ಪಾಕಿಸ್ತಾನದ ಗುಪ್ತಚರದಳ ಐಎಸ್ಐನ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಕೇವಲ ಮೀಸಲಾತಿಗೆ ಸೀಮಿತವಾಗಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಹೋರಾಟಕ್ಕೆ ನಿಷೇಧಿತ ಜಮಾತ್ ಎ ಇಸ್ಲಾಮಿ ಸಂಘಟನೆ ಕೈ ಜೋಡಿಸಿದ ಬಳಿಕ ಅದು ಪ್ರಧಾನಿ ವಿರುದ್ಧದ ರಾಜಕೀಯ ಹೋರಾಟವಾಗಿ ಪರಿವರ್ತಿತವಾಗಿತ್ತು. ಈ ಸಂಘಟನೆಗೆ ಪಾಕ್ ಬೆಂಬಲವಿದೆ ಎನ್ನಲಾಗಿದೆ. ಸೇನೆಯ ಕಮಾಂಡರ್‌ಗಳು ವಿದ್ಯಾರ್ಥಿಗಳ ಪರ ಮಾತನಾಡಿದ ಬಳಿಕ ಹೋರಾಟ ಇನ್ನಷ್ಟು ತೀವ್ರಗೊಂಡು ಪ್ರಧಾನಿಯತ್ತ ತಿರುಗಿತ್ತು.
ಬಾಂಗ್ಲಾ ಗಡಿಯಲ್ಲಿ ಬಿಎಸ್‌ಎಫ್ ಹೈ ಅಲರ್ಟ್
ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ತೀವ್ರಗೊಂಡಿರುವ ಪರಿಣಾಮ ಭಾರತೀಯ ಗಡಿ ಭದ್ರತಾ ಪಡೆ ಬಾಂಗ್ಲಾಗೆ ಹೊಂದಿಕೊಂಡಿರುವ ತನ್ನ 4096 ಕಿಲೋಮೀಟರ್ ಗಡಿಯುದ್ಧಕ್ಕೂ ಬಿಗಿ ಬಂದೋಬಸ್ತ್ ಕೈಗೊಂಡಿದೆ. ಜೊತೆಗೆ ರಜೆಯಲ್ಲಿರುವ ಸಿಬ್ಬಂದಿಗಳನ್ನು ಮರಳಿ ಸೇವೆಗೆ ಬರುವಂತೆ ಸೂಚನೆ ನೀಡಿದೆ.
undefined
ಲಂಡನ್ ಆಶ್ರಯ ನೀಡುವವರೆಗೂ ಹಸೀನಾಗೆ ಭಾರತ ಆಶ್ರಯ
ಢಾಕಾ: ಭಾರತದ ನೆರೆಯ ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಹಾಗೂ 300ಕ್ಕೂ ಹೆಚ್ಚು ಜನರ ಬಲಿಪಡೆದಿರುವ 'ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ' ಸೋಮವಾರ ಕಂಡು ಕೇಳರಿಯದ ತಿರುವು ಪಡೆದಿತ್ತು. ದಂಗೆಕೋರರು ಹಾಗೂ ಸೇನೆಯ '45 ನಿಮಿಷದ ಗಡುವಿಗೆ' ಬೆಚ್ಚಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶ ಬಿಟ್ಟು ವಿಮಾನದಲ್ಲಿ ಭಾರತಕ್ಕೆ ಪಲಾಯನಗೈದಿದ್ದರು.
ಬಾಂಗ್ಲಾ ದಂಗೆ: ಶೇಖ್ ಹಸೀನಾ ದೇಶ ತೊರೆಯುತ್ತಿದ್ದಂತೆ ಬಾಂಗ್ಲಾದಲ್ಲಿ ಇಬ್ಬರು ಹಿಂದೂಗಳ ಹತ್ಯೆ
ಸೋಮವಾರ ಸಂಜೆ ಅವರು ದೆಹಲಿಯ ಹಿಂಡನ್ ಏರ್‌ಬೇಸ್‌ಗೆ ಆಗಮಿಸಿದ್ದರು, ಇಲ್ಲಿಂದ ಅವರು ಅಲ್ಲಿಂದ ಲಂಡನ್‌ಗೆ ರಾಜಕೀಯ ಆಶ್ರಯ ಬಯಸಿ ರಾತ್ರಿಯೇ ತೆರಳಲಿದ್ದಾರೆ ಎಂದು ವರದಿ ಆಗಿತ್ತು. ಆದರೆ ಲಂಡನ್ ಇದಕ್ಕೆ ಅನುಮತಿ ನೀಡುವವರೆಗೂ ಅವರು ಭಾರತದ ಆಶ್ರಯದಲ್ಲಿ ಇರಲಿದ್ದಾರೆ ಎಂದು ವರದಿ ಆಗಿದೆ.
ನಿನ್ನೆ ಸೋಮವಾರ ಮಧ್ಯಾಹ್ನ ಪ್ರತಿಭಟನಾಕಾರರು ಪ್ರಧಾನಿ ಹಸೀನಾರ ಢಾಕಾ ನಿವಾಸಕ್ಕೆ ನುಗ್ಗತೊಡಗಿದರು. ಇದೇ ವೇಳೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಬಾಂಗ್ಲಾದೇಶದ ಸೇನೆ ಅಧಿಕಾರದಿಂದ ಕೆಳಗಿಳಿಯಲು ಅವರಿಗೆ 45 ನಿಮಿಷಗಳ ಕಾಲಾವಕಾಶ ನೀಡಿತು. ಹೀಗಾಗಿ ಇನ್ನು ತಮ್ಮ ಅಧಿಕಾರ ನಡೆಯದು ಎಂದು ಅರಿತ ಹಸೀನಾ, ರಾಜೀನಾಮೆ ಸಲ್ಲಿಸಿ ಸೇನಾ ವಿಮಾನದಲ್ಲಿ ದೇಶ ತೊರೆದಿದ್ದಾರೆ. ಇದರ ಬೆನ್ನಲ್ಲೇ ಸೇನಾ ಮುಖ್ಯಸ್ಥ ಜ। ಮಲಾರ್-ಉಜ್-ಜಮಾನ್, ಮಧ್ಯಂತರ ಸರ್ಕಾರ ರಚನೆ ಘೋಷಣೆ ಮಾಡಿದ್ದು, ದೇಶವನ್ನು ಮತ್ತೆ ಸರಿಸ್ಥಿತಿಗೆ ತರುವ ವಾಗ್ದಾನ ಮಾಡಿದ್ದಾರೆ. ಅಲ್ಲದೆ, ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸದಂತೆ ಪೊಲೀಸರು ಹಾಗೂ ಸೇನೆಗೆ ಸೂಚಿಸಿದ್ದಾರೆ.
ಬಾಂಗ್ಲಾ ಪ್ರಧಾನಿ ದೇಶ ಬಿಟ್ಟು ಹೋಗುವಂತೆ ಮಾಡಿದ ದಂಗೆಗೆ ಕಾರಣವಾದ ವಿವಾದಾತ್ಮಕ ಮೀಸಲು ಯಾವುದು?
ದಂಗೆಯ ಕ್ಷಣ ಕ್ಷಣದ ಮಾಹಿತಿ
ಬಾಂಗ್ಲಾಕ್ಕೆ ಸ್ವಾತಂತ್ರ ತಂದುಕೊಟ್ಟವರ ಪುತ್ರಿಗೆ ಇದೆಂಥಾ ಗತಿ: ಉಕ್ಕಿನ ಮಹಿಳೆಯ ದುರಂತ ವಿದಾಯ