ಸಿಡ್ನಿ ಮಾಲ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಇರಿದ ಹಂತಕ: 9 ತಿಂಗಳ ಮಗುವನ್ನು ಅಪರಿಚಿತರ ಕೈಗಿಟ್ಟು ಪ್ರಾಣ ಬಿಟ್ಟ ತಾಯಿ

By Anusha KbFirst Published Apr 14, 2024, 2:59 PM IST
Highlights

ಆಸ್ಟ್ರೇಲಿಯಾದ ಸಿಡ್ನಿಯ ಮಾಲ್‌ನಲ್ಲಿ ನಿನ್ನೆ ನಡೆದ ಸರಣಿ ಚೂರಿ ಇರಿತ ಪ್ರಕರಣದ ವೇಳೆ ಮನ ಮಿಡಿಯುವ ಘಟನೆಯೊಂದು ನಡೆದಿದ್ದು, ಅನೇಕರ ಕಣ್ಣಂಚಿನಲ್ಲಿ ನೀರುಕ್ಕುವಂತೆ ಮಾಡಿದೆ.

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯ ಮಾಲ್‌ನಲ್ಲಿ ನಿನ್ನೆ ನಡೆದ ಸರಣಿ ಚೂರಿ ಇರಿತ ಪ್ರಕರಣದ ವೇಳೆ ಮನ ಮಿಡಿಯುವ ಘಟನೆಯೊಂದು ನಡೆದಿದ್ದು, ಅನೇಕರ ಕಣ್ಣಂಚಿನಲ್ಲಿ ನೀರುಕ್ಕುವಂತೆ ಮಾಡಿದೆ. ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯನ್ನು ಮಾಧ್ಯಮದವರಿಗೆ ವಿವರಿಸಿದ್ದು, ಮನ ಮಿಡಿಯುವಂತೆ ಮಾಡಿದೆ. ಅಪರಿಚಿತ ಚೂರಿ ಇರಿತದಿಂದ ಗಂಭೀರ ಗಾಯಗೊಂಡು ಸಾವಿನಂಚಿನಲ್ಲಿದ್ದ ತಾಯಿಯೊಬ್ಬಳು ಮಗುವಿನ ಜೀವ ಉಳಿಸುವುದಕ್ಕಾಗಿ ತನ್ನ ಕೈಯಲ್ಲಿದ್ದ 9 ತಿಂಗಳ ಕಂದನನ್ನು ಅಪರಿಚಿತರ ಕೈಗೆ ಇರಿಸಿ ಕಣ್ಣು ಮುಚ್ಚಿದ್ದಾಳೆ.

ಮಾನಸಿಕ ಅಸ್ವಸ್ಥ ಎಂದು ಹೇಳಲಾದ 40 ವರ್ಷದ ಪಾಪಿಯೋರ್ವ ನಿನ್ನೆ ಸಿಡ್ನಿಯ ಶಾಪಿಂಗ್ ಮಾಲ್‌ನಲ್ಲಿ ರಕ್ತದೋಕುಳಿಯನ್ನೇ ಎಬ್ಬಿಸಿದ್ದ. ಈ ದುರಂತದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ 6 ಜನ ಸಾವನ್ನಪ್ಪಿದ್ದರೆ, 6 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ಈ ಮಾರಣಹೋಮ ನಡೆಸಿದ ಪಾಪಿಯನ್ನು ಹಿರಿಯ ಪೊಲೀಸ್ ಅಧಿಕಾರಿ ಆಮ್ ಸ್ಕಾಟ್ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.  ಈ ಘಟನೆಯಲ್ಲಿ ರಕ್ತದೋಕುಳಿ ಎಬ್ಬಿಸಿದ ಸರಣಿ ಕೊಲೆಗಾರರನ್ನು ಪತ್ತೆಹಚ್ಚಿ ಗುಂಡಿಕ್ಕಿದ ಏಕಾಂಗಿ ಹಿರಿಯ ಪೊಲೀಸ್ ಅಧಿಕಾರಿ ಆಮಿ ಸ್ಕಾಟ್ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗ್ತಿದೆ. 

ಸಿಡ್ನಿಯ ಶಾಪಿಂಗ್‌ ಮಾಲ್‌ನಲ್ಲಿ ಸಿಕ್ಕಸಿಕ್ಕವರಿಗೆ ಚೂರಿ ಇರಿದ ವ್ಯಕ್ತಿ, ಐವರ ಸಾವು!

ಆದರೆ ಈ ಸಂದರ್ಭದಲ್ಲಿ ತಾಯಿಯೊಬ್ಬಳು ತನ್ನ ಕಂದನ ರಕ್ಷಣೆಗಾಗಿ  ಮಾಡಿದ ಕಾರ್ಯ ಎಲ್ಲರ ಹೃದಯವನ್ನು ನೋವಿನಿಂದ ಅಳುವಂತೆ ಮಾಡಿದೆ. ಘಟನೆಯಲ್ಲಿ ಗಾಯಗೊಂಡು ಸಾಯುವ ಸ್ಥಿತಿಯಲ್ಲಿದ  38 ವರ್ಷದ ತಾಯಿ ಆಶ್ಲೀ ಗುಡ್ ತನ್ನ 9 ತಿಂಗಳ ಮಗಳು ಹ್ಯಾರಿಯೆಟ್ ಉಳಿಸಿಕೊಳ್ಳಲು ಮಾಡಿದ ಹತಾಶ ಪ್ರಯತ್ನದ ಕತೆ ಅನೇಕರನ್ನು ಭಾವುಕರನ್ನಾಗಿಸಿದೆ.

ಪ್ರತ್ಯಕ್ಷದರ್ಶಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ದಾಳಿಕೋರನು ಶಾಪಿಂಗ್ ಮಾಲ್‌ನಲ್ಲಿ ಆಕೆಗೆ ಎದುರಾಗಿದ್ದು, ಈ ವೇಳೆ ಆಕೆ ಜೋರಾಗಿ ಕಿರಿಚಿಕೊಂಡಿದ್ದಾಳೆ. ಅಲ್ಲದೇ ಮಗುವಿಗೂ ಆತ ಚಾಕುವಿನಿಂದ ಇರಿದಿದ್ದಾನೆ ಆಕೆಗೂ ಚೂರಿಯಿಂದ ಇರಿದಿದ್ದು, ಈ ವೇಳೆ ಸಾಯುವ ಸ್ಥಿತಿಯಲ್ಲಿದ್ದ ಆಕೆ ಕಂದನನ್ನು ಉಳಿಸಿಕೊಳ್ಳುವ ಸಲುವಾಗಿ ಮಗುವನ್ನು ನನ್ನತ್ತ ಎಸೆದಳು ಎಂದು ಒಬ್ಬರು ಹೇಳಿದ್ದಾರೆ. ಪ್ರಸ್ತುತ ಈ ಮಗುವಿನ ಸ್ಥಿತಿ ಸ್ಥಿರವಾಗಿದೆ ಮಗುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ನ್ಯೂ ಸೌತ್ ವೇಲ್‌ನ ಪೊಲೀಸ್ ಅಸಿಸ್ಟೆಂಟ್ ಕಮೀಷನರ್ ಅಂಥೋನಿ ಕೂಕ್ ಹೇಳಿದ್ದಾರೆ. 

ಮೃತ ತಾಯಿ ಆಶ್ಲೀ ಗುಡ್ ಓರ್ವ ಉತ್ತಮ ತಾಯಿ ಮಗಳು ಸೊಸೆ, ಪಾರ್ಟನರ್, ಸ್ನೇಹಿತೆ ಅದಕ್ಕಿಂತಲೂ ಹೆಚ್ಚಾಗಿ ಒಳ್ಳೆಯ ಮಾನವರೂಪಿಯಾಗಿದ್ದಳು. ಅಲ್ಲದೇ ಆಶ್ಲೀ ಗುಡ್‌ ಇನ್ನಿಲವಾದ ಸಮಯದಲ್ಲಿ ಆಕೆಯ ಮಗುವನ್ನು ರಕ್ಷಿಸಿದ ಇಬ್ಬರು ಅಪರಿಚಿತರಿಗೆ ನಾವು ಧನ್ಯವಾದ ಹೇಳುತ್ತೇವೆ ಎಂದು ಕುಟುಂಬ ಹೇಳಿದ್ದಾಗಿ ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿವೆ.  ಈ ದಾಳಿಯ ವೇಳೆ ಧೈರ್ಯ ತೋರಿದ ಸಾಮಾನ್ಯ ಆಸ್ಟ್ರೇಲಿಯ ಜನರ ಕಾರ್ಯವನ್ನು ಆಸ್ಟ್ರೇಲಿಯ ಪ್ರಧಾನಿ ಅಂಥೋನಿ ಅಲ್ಬಾನಿಸ್ ಶ್ಲಾಘಿಸಿದ್ದಾರೆ. 

ಭುಗಿಲೆದ್ದ ಇಸ್ರೇಲ್ ಇರಾನ್ ನಡುವಣ ಬಿಕ್ಕಟ್ಟು: ಬೈಡೆನ್ ಜೊತೆ ಇಸ್ರೇಲ್ ಅಧ್ಯಕ್ಷರ ಚರ್ಚೆ

click me!