
ಇಸ್ಲಾಮಾಬಾದ್: ಬ್ರಿಟನ್ ಸರ್ಕಾರದ ವಿದೇಶಿ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿ (ಎಫ್‌ಸಿಡಿಒ) ಪಾಕಿಸ್ತಾನವನ್ನು ‘ಪ್ರಯಾಣಿಸಲು ತುಂಬಾ ಅಪಾಯಕಾರಿ ದೇಶ’ ಎಂಬ ಪಟ್ಟಿಗೆ ಸೇರಿಸಿದೆ. ತನ್ನ ನಾಗರಿಕರಿಗೆ ಈ ಸಂಬಂಧ ಅದು ಸೂಚನೆ ನೀಡಿದೆ.
ತಮ್ಮ ಇತ್ತೀಚಿನ ವರದಿಯಲ್ಲಿ ಬ್ರಿಟನ್ ಸರ್ಕಾರವು ಅಪಾಯಕಾರಿ ದೇಶಗಳ ಪಟ್ಟಿ ಇನ್ನೂ 8 ದೇಶಗಳನ್ನು ಸೇರಿಸಿದೆ. ಇದರೊಂದಿಗೆ ದೇಶಗಳ ಸಂಖ್ಯೆ 24ಕ್ಕೇರಿದೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಅಪರಾಧ, ಯುದ್ಧ, ಭಯೋತ್ಪಾದನೆ, ರೋಗ, ಹವಾಮಾನ ಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಗಮನದಲ್ಲಿ ಇರಿಸಿಕೊಂಡು ಪಟ್ಟಿ ಸಿದ್ಧಪಡಿಸಲಾಗಿದೆ. ಈ ಕಾರಣಗಳಿಂದ ಅಂಥ ದೇಶಗಳಿಗೆ ಹೋಗುವುದು ತರವಲ್ಲ ಎಂದು ತನ್ನ ನಾಗರಿಕರಿಗೆ ಬ್ರಿಟನ್ ಸೂಚನೆ ನೀಡಿದೆ
ಪತ್ನಿ ಹಂತಕ ಭಾರತೀಯನ ಸುಳಿವು ನೀಡಿದವರಿಗೆ ₹2 ಕೋಟಿ ಇನಾಮು ಘೋಷಿಸಿದ ಎಫ್‌ಬಿಐ!
ಹೊಸದಾಗಿ ಸೇರ್ಪಡೆಯಾದ ದೇಶಗಳೆಂದರೆ ರಷ್ಯಾ, ಉಕ್ರೇನ್ (ಸಂಘರ್ಷಪೀಡಿತ ಗಾಜಾ ಸೇರಿ), ಇಸ್ರೇಲ್, ಇರಾನ್, ಸುಡಾನ್, ಲೆಬನಾನ್, ಬೆಲಾರಸ್ ಮತ್ತು ಪಾಕಿಸ್ತಾನ.
2023ರಲ್ಲಿ, ಪಾಕಿಸ್ತಾನವು 1,524 ಹಿಂಸಾಚಾರ-ಸಂಬಂಧಿತ ಸಾವುನೋವುಗಳಿಗೆ ಸಾಕ್ಷಿಯಾಗಿದೆ ಮತ್ತು 789 ಭಯೋತ್ಪಾದಕ ದಾಳಿಗಳನ್ನು ಕಂಡಿದೆ,
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ