
ಇಸ್ರೇಲ್ ಪ್ಯಾಲೇಸ್ತೀನ್ ಯುದ್ಧದ ಮಧ್ಯೆ ಈಗ ಇಸ್ರೇಲ್ ಮೇಲೆ ಇರಾನ್ ಕೂಡ ಮಿಸೈಲ್ ದಾಳಿ ನಡೆಸಿದ್ದು, ಇದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಇಸ್ರೇಲ್ ಮೇಲೆ ಇರಾನ್‌ನ ಅನಿರೀಕ್ಷಿತ ಕ್ಷಿಪಣಿ ದಾಳಿ ಈ ಯುದ್ಧದ ಸ್ಥಿತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಎರಡು ಪ್ರಾದೇಶಿಕ ವೈರಿಗಳ ನಡುವಿನ ದೀರ್ಘಾವಧಿಯ ಈ ವಿನಾಶಕಾರಿ ಯುದ್ಧದಲ್ಲಿ ಈಗ ಇರಾನ್ ಕೂಡ ಕೈ ಜೋಡಿಸಿರುವುದರಿಂದ ಗಮನಾರ್ಹವಾಗಿ ಯುದ್ಧ ಮತ್ತೊಂದು ಹಂತಕ್ಕೆ ಹೋಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಉತ್ತರ ಮತ್ತು ದಕ್ಷಿಣ ಇಸ್ರೇಲ್, ಉತ್ತರ ಪಶ್ಚಿಮ ದಂಡೆ ಮತ್ತು ಜೋರ್ಡಾನ್ ಗಡಿಯ ಬಳಿಯ ಡೆಡ್ ಸೀ ಮುಂತಾದ ಕಡೆ ವಾಯುದಳಿ ನಡೆದಿರುವ ಬಗ್ಗೆ ಸೈರನ್‌ಗಳು ಹೊರಹೊಮ್ಮಿದ್ದು, ಎಷ್ಟು ಹಾನಿಯಾಗಿದೆ ಎಮಬ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ದಾಳಿ ನಿಲ್ಲಿಸಲು ಅಥವಾ ಪ್ರತಿದಾಳಿ ನಡೆಸಲು ಅಮೆರಿಕಾ ಸೇರಿದಂತೆ ತನ್ನನ್ನು ಬೆಂಬಲಿಸುವ ಇತರ ರಾಷ್ಟ್‌ರಗಳ ಜೊತೆ ಕೆಲಸ ಮಾಡುವುದಾಗಿ ಇಸ್ರೇಲ್ ಮಿಲಿಟರಿ ಹೇಳಿದೆ. ಇದಾದ ಬಳಿಕ ಅಮೆರಿಕಾದ ಪಡೆಗಳು ಇಸ್ರೇಲ್ ಕಡೆ ಇರಾನ್ ಬಿಟ್ಟಿದ್ದ ಕೆಲ ಡ್ರೋನ್‌ಗಳನ್ನು ಹೊಡೆದುರುಳಿಸಿವೆ ಎಂದು ವರದಿಯಾಗಿದೆ.
ಇಸ್ರೇಲ್ ಟಾರ್ಗೆಟ್ ದಾಳಿ ಆರಂಭ, 17 ಭಾರತೀಯ ಸಿಬ್ಬಂದಿಗಳಿದ್ದ ಹಡಗು ವಶಪಡಿಸಿದ ಇರಾನ್!
ಪ್ರಸ್ತುತ ಈ ಪ್ರದೇಶದಲ್ಲಿ ಬೆಂಕಿಯಲ್ಲಿ ಬೇಯುತ್ತಿರುವಂತಹ ಸ್ಥಿತಿ ಇದ್ದು, ಇರಾನ್‌ನ ಕ್ರಾಂತ್ರಿಕಾರಿ ಗಾರ್ಡ್( Iranian Revolutionary Guards) ಈ ಕೃತ್ಯದಲ್ಲಿ ತಮ್ಮ ಪಾತ್ರವನ್ನು ಖಚಿತಪಡಿಸಿದ್ದಾರೆ. ಇವರು ಇಸ್ರೇಲ್ ಮೇಲಿನ ತಮ್ಮ ದಾಳಿಯಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್‌ಗಳನ್ನು ಬಳಸಿದ್ದಾರೆ.
ಇರಾನ್‌ನ ಡಮಾಸ್ಕಸ್ ಕಾನ್ಸುಲರ್ ಅನೆಕ್ಸ್ ಮೇಲೆ ಏಪ್ರಿಲ್ 1 ರಂದು ನಡೆದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಇರಾನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇರಾನ್ ಗಾರ್ಡ್‌ನ ಉನ್ನತ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಹಲವಾರು ಪ್ರಾಣ ಕಳೆದುಕೊಂಡಿದ್ದರು.
ಏನೇನಾಯ್ತು: ಪ್ರಮುಖ ಅಂಶಗಳು
ಇಸ್ರೇಲ್-ಪ್ಯಾಲೆಸ್ತೀನ್ ಕದನಕ್ಕೆ 6 ತಿಂಗಳು: ಈವರೆಗೆ 35,000 ಬಲಿ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ