ಹಿಮ ಚಿರತೆಯೊಂದು ಹಿಮಪರ್ವತದ ಮೇಲೇರಿ ಕುಳಿತ ಸುಂದರವಾದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಮೆರಿಕಾ ಮೂಲದ ಫೋಟೋಗ್ರಾಪರ್ ಕಿಟ್ಟಿಯಾ ಪಾವ್ಲೋವ್ಸ್ಕಿ(Kittiya Pawlowski) ಅವರು ಈ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ಗಮನ ಸೆಳೆಯುತ್ತಿದೆ.
ನೇಪಾಳದ ಖುಂಬು ಹಿಮನದಿಯಲ್ಲಿರುವ ಫ್ಯಾಂಟಮ್ ಅಲ್ಲೆ ಎಂದು ಕರೆಯಲ್ಪಡುವ ಐಸ್ ಪಿನಾಕಲ್ ಮೇಲೆ ಹಿಮ ಚಿರತೆಯೊಂದು ಕುಳಿತಿರುವುದು ಈ ಫೋಟೋದಲ್ಲಿ ಕಾಣಿಸುತ್ತಿದೆ. ಜಗತ್ತಿನ ಯಾರೂ ಕೂಡ ನೋಡುವುದನ್ನು ತಪ್ಪಿಸಿಕೊಳ್ಳಲು ಬಯಸದ ಪ್ರಾಣಿಗಳಲ್ಲಿ ಒಂದಾದ ಈ ಹಿಮ ಚಿರತೆಯ ಫೋಟೋವನ್ನು ತೆಗೆಯಲು ಬೆನ್ನಲ್ಲಿ ಮೂಟೆಯನ್ನು ಹೊತ್ತು ಸುಮಾರು 165.7 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಿದ್ದಾಗಿ ಹೇಳಿದ್ದಾರೆ.
ಬರೀ ಇವುಗಳಲ್ಲದೇ ಹಿಮಚಿರತೆಗಳ ಹಲವು ಫೋಟೋಗಳನ್ನು ಅವರು ಪೋಸ್ಟ್ ಮಾಡಿದ್ದು, ಮೌಂಟ್ ಎವರೆಸ್ಟ್ (Mout Everest) ಮತ್ತು ಮೌಂಟ್ ಪುಮೊರಿ (Mount Pumori) ಪರ್ವತಗಳಲ್ಲಿ ಹಿಮಚಿರತೆಗಳ ಫೋಟೋವನ್ನು ಅವರು ಸೆರೆ ಹಿಡಿದಿದ್ದಾರೆ. ಎವರೆಸ್ಟ್ ಬೇಸ್ ಕ್ಯಾಂಪ್‌ನ (Everest base Camp) ಗೋರಕ್ಷಿಪ್ (Gorakshep area) ಪ್ರದೇಶದಲ್ಲಿ 18 ಸಾವಿರ ಅಡಿ ಎತ್ತರದಿಂದ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಭೂಮಿಯ ಅತ್ಯಂತ ನಿಷೇಧಿತ ಭೂಪ್ರದೇಶವೆನಿಸಿರುವ, ಉಸಿರಾಡಲು ಕಷ್ಟಪಡುವ ಪ್ರದೇಶದಲ್ಲಿ ನಾನು ಬಹಳ ಕಷ್ಟಪಟ್ಟು ಈ ಫೋಟೋ ತೆಗೆದಿದ್ದೇನೆ. ಆದರೆ ಆ ಕಷ್ಟಕ್ಕೆ ಈಗ ಫಲ ಸಿಗುತ್ತಿದೆ ಎಂದು ಅವರು ಬರೆದುಕೊಂಡಿದ್ದಾರೆ. ಈ ಫೋಟೋ ಶೇರ್ ಆದಾಗಿನಿಂದ ಇಂಟರ್‌ನೆಟ್‌ನಲ್ಲಿ ವೈರ್ ಆಗುತ್ತಿವೆ. ಅನಿಮಲ್ ಪ್ಲಾನೆಟ್‌ನಂತಹ ಪಬ್ಲಿಕೇಷನ್‌ಗಳು ಹಾಗೂ ನೇಪಾಳದಲ್ಲಿರುವ ಅಮೆರಿಕಾ ರಾಯಭಾರ ಕಚೇರಿಯಂತಹ ಸರ್ಕಾರಿ ಸಂಸ್ಥೆಗಳು ಸಹ ಅವರ ಫೋಟೋಗಳನ್ನು ಶೇರ್ ಮಾಡಿಕೊಂಡಿವೆ.
ಇದು ಚಿನ್ನದ ನೆಕ್ಲೇಸ್ ಅಲ್ಲ: ಸಮುದ್ರ ಚಿರತೆಯ ಸಿಟಿಸ್ಕ್ಯಾನ್ ಫೋಟೋ
ನೆಟ್ಟಿಗರು ಕೂಡ ಈ ಫೋಟೋಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದು, ಇದೊಂದು ಅತ್ಯದ್ಭುತ ದೃಶ್ಯ ಎಂದು ಕರೆದಿದ್ದಾರೆ. ಎಂತಹ ಅದ್ಬುತ ಫೋಟೋಗ್ರಾಫಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಕ್ಲಿಕ್ಕಿಸಲು ನೀವೆಷ್ಟು ಕಷ್ಟಪಟ್ಟಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಿಜಕ್ಕೂ ಅದ್ಭುತ ಇಷ್ಟೊಂದು ಸುಂದರಪ್ರಾಣಿ ಈ ಪ್ರದೇಶದಲ್ಲಿ ಚಿರತೆ ಇರುವುದು ಎಂದು ನಾನೆಂದು ಭಾವಿಸಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಯಾರದೋ ಶ್ರಮ ಯಾರದೋ ಪಾಲು... ಎರಡು ಚಿರತೆಗಳ ಅಪರೂಪದ ದೃಶ್ಯ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ