
ನವದೆಹಲಿ (ಏ.14): ಪಾಕಿಸ್ತಾನದ ಕೋರ್ಟ್‌ನಲ್ಲಿ ಗುಪ್ತಚರ ಆರೋಪದ ಮೇಲೆ ಬಂಧಿಯಾಗಿದ್ದ ಭಾರತೀಯ ಮೂಲದ ಪ್ರಜೆ ಸರಬ್ಜಿತ್ ಸಿಂಗ್‌ನನ್ನು 2013ರ ಮೇ 2 ರಂದು ಲಾಹೋರ್‌ನ ಜೈಲಿನಲ್ಲಿಯೇ ಕೊಲೆ ಮಾಡಲಾಗಿತ್ತು. ಲಾಹೋರ್ ಮೂಲದ ಡಾನ್ ಅಮೀರ್ ಸರ್ಫರಾಜ್ ಈ ಕೊಲೆ ನಡೆಸಿದ್ದ. ಸರಬ್ಜಿತ್ ಸಿಂಗ್‌ನನ್ನು ಕೊಲೆ ಮಾಡಲಾಗಿದೆ ಎಂದು ಭಾರತ ಆರೋಪಿಸಿದ್ದರೂ, ಪಾಕಿಸ್ತಾನ ಅದಕ್ಕೆ ಕ್ಯಾರೇ ಎಂದಿರಲಿಲ್ಲ. ಈಗ ಪಾಕಿಸ್ತಾನದಲ್ಲಿ ಭಾರೀ ಕುತೂಹಲ ಹುಟ್ಟಿಸಿರುವ ಅನಾಮಿಕ ವ್ಯಕ್ತಿ ಅಂದರೆ Unknown Men ಭಾನುವಾರ ಅಮೀರ್ ಸರ್ಫರಾಜ್‌ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ. ಅಂಡರ್‌ವರ್ಲ್ಡ್ ಡಾನ್ ಅಮೀರ್ ಸರ್ಫರಾಜ್ ಲಾಹೋರ್‌ನಲ್ಲಿ 'ಅಪರಿಚಿತ ದುಷ್ಕರ್ಮಿಗಳು' ಗುಂಡಿಕ್ಕಿ ಕೊಂದಿದ್ದಾರೆ ಎನ್ನುವ ಸುದ್ದಿಯನ್ನು ಪಾಕಿಸ್ತಾನವೇ ಖಚಿತಪಡಿಸಿದೆ. ಅಮೀರ್ ಸರ್ಫರಾಜ್ ಐಎಸ್‌ಐ ಸೂಚನೆಯ ಮೇರೆಗೆ ಪಾಕಿಸ್ತಾನದಲ್ಲಿ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್‌ನನ್ನು ಹತ್ಯೆ ಮಾಡಿದ್ದ.
ಅಮೀರ್ ಸರ್ಫರಾಜ್ ಪಾಕಿಸ್ತಾನದ ಕೋಟ್ ಲಖ್ಪತ್ ಜೈಲಿನಲ್ಲಿ ಸರಬ್ಜಿತ್ ನನ್ನು ಪಾಲಿಥಿನ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆದೇಶದ ಮೇರೆಗೆ ಅಮೀರ್ ಸರಬ್ಜಿತ್‌ನನ್ನು ಚಿತ್ರಹಿಂಸೆ ನೀಡಿ ಕೊಂದಿದ್ದ. ಪಾಕಿಸ್ತಾನದಲ್ಲಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನಿ ಸೇನೆಗೆ ಪಂಜಾಬ್ ಮೂಲದ ಸರಬ್ಜಿತ್ ಸಿಕ್ಕಿಬಿದ್ದಿದ್ದ.
ಇಂದಿರಾ ಗಾಂಧಿ ಹಂತಕನ ಪುತ್ರ ಫರೀದ್ ಕೋಟ್‌ನಿಂದ ಲೋಕಸಭೆಗೆ ಸ್ಪರ್ಧೆ
1990ರಲ್ಲಿ ಸರಬ್ಜಿತ್ ಗೊತ್ತಿಲ್ಲದೆ ಪಾಕಿಸ್ತಾನ ತಲುಪಿದ್ದ: ಭಾರತ-ಪಾಕಿಸ್ತಾನ ಗಡಿಯಲ್ಲಿರುವ ತರ್ನ್ ತರನ್ ಜಿಲ್ಲೆಯ ಭಿಖಿವಿಂಡ್ ಗ್ರಾಮದಲ್ಲಿ ವಾಸ ಮಾಡುತ್ತಿದ್ದ ಸರಬ್ಜಿತ್ ಸಿಂಗ್ ವೃತ್ತಿಯಲ್ಲಿ ರೈತನಾಗಿದ್ದ. 1990ರ ಆಗಸ್ಟ್ 30 ರಂದು ಗೊತ್ತಿಲ್ಲದೆ ಪಾಕಿಸ್ತಾನದ ಗಡಿಯನ್ನು ತಲುಪಿದ್ದ. ಈ ವೇಳೆ ಪಾಕಿಸ್ತಾನದ ಸೇನೆ ಈತನನ್ನು ಬಂಧಿಸಿತ್ತು. ಆ ನಂತರ ಸರಬ್ಜಿತ್ ಸಿಂಗ್ ಅವರು ಲಾಹೋರ್ ಮತ್ತು ಫೈಸಲಾಬಾದ್ನಲ್ಲಿ ಬಾಂಬ್ ಸ್ಫೋಟದ ಆರೋಪವನ್ನು ಹೊರಿಸಿ ಜೈಲಿಗೆ ಕಳಿಸಲಾಗಿತ್ತು. ಈ ಬಾಂಬ್ ದಾಳಿಯಲ್ಲಿ 14 ಮಂದಿ ಪ್ರಾಣ ಕಳೆದುಕೊಂಡಿದ್ದರ. 1991 ರಲ್ಲಿ, ಬಾಂಬ್ ಸ್ಫೋಟದ ಆರೋಪದ ಮೇಲೆ ಸರಬ್ಜಿತ್ ಸಿಂಗ್ ಅವರಿಗೆ ಮರಣದಂಡನೆ ಕೂಡ ವಿಧಿಸಲಾಗಿತ್ತು. ಈ ಹಂತದಲ್ಲಿ ಅವರನ್ನು ಲಾಹೋರ್‌ನ ಕೋಟ್ ಲಖ್ಪತ್ ಜೈಲಿನಲ್ಲಿ ಇರಿಸಲಾಗತ್ತು. ಇವರ ಮೇಲೆ ಜೈಲಿನ ಸಹ ಖೈದಿಗಳು ದಾಳಿ ನಡೆಸಿ ಕೊಲೆ ಮಾಡಿದ್ದರು. ಆದರೆ, ಪಾಕಿಸ್ತಾನ ಮಾತ್ರ ಸರಬ್ಜಿತ್ ಸಿಂಗ್ ಬ್ರೇನ್ ಡೆಡ್ ಆಗಿ 50ನೇ ವರ್ಷದಲ್ಲಿ ಸಾವು ಕಂಡಿದ್ದಾನೆ ಎಂದು ತಿಳಿಸಿತ್ತು.
ಪಾಕ್ ಉಗ್ರ ಸಂಘಟನೆ ಎಲ್‌ಇಟಿಗೆ ಹಣಕಾಸು ನೆರವು ನೀಡ್ತಿದ್ದ ಮೂವರ ಹತ್ಯೆ: ಮತ್ತೆ ಸದ್ದು ಮಾಡಿದ ‘ಅಪರಿಚಿತ ವ್ಯಕ್ತಿ’!
2016ರಲ್ಲಿ ಸರಬ್ಜಿತ್ ಸಿಂಗ್ ಕಥೆಯನ್ನು ಆಧರಿಸಿ ಅದೇ ಹೆಸರಿನಲ್ಲಿ ಬಾಲಿವುಡ್ ಸಿನಿಮಾ ಕೂಡ ನಿರ್ಮಾಣವಾಗಿತ್ತು. ಓಮಂಗ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ರಣದೀಪ್ ಹೂಡಾ ಸರಬ್ಜಿತ್ ಸಿಂಗ್ ಆಗಿ ನಟಿಸಿದ್ದರೆ, ಆತನನ್ನು ಪಾಕಿಸ್ತಾನದ ಜೈಲಿನಿಂದ ಬಿಡಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೋರಾಟ ಮಾಡಿದ್ದ ಸಹೋದರಿ ದಲ್ಬೀರ್ ಕೌರ್ ಪಾತ್ರದಲ್ಲಿ ಐಶ್ವರ್ಯಾ ರೈ ನಟಿಸಿದ್ದರು. 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 45 ಕೋಟಿ ಸಂಪಾದನೆ ಮಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ